KKR vs LSG: ಲಕ್ನೋ ಜಯದಲ್ಲಿ ಮಿಂಚಿದ ಮುಕುಲ್ ಚೌಧರಿ, ಕೆಕೆಆರ್ ಗೆಲುವಿನ ಆಸೆಗೆ ಪೆಟ್ಟು
ಕೋಲ್ಕತ್ತ: ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಎರಡನೇ ಗೆಲುವು ದಾಖಲಿಸಿದೆ. ಎಲ್‌ಎಸ್‌ಜಿ ತಂಡದ ಮುಕುಲ್ ಚೌಧರಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದರು. ಲಕ್ನೋ ಸೋಲುವ ಪಂದ್ಯವನ್ನು ಗೆಲ್ಲಿಸಿದ ಕೀರ್ತಿ ಮುಕುಲ್ ಚೌಧರಿ ಅವರಿಗೆ ಸಲ್ಲುತ್ತದೆ.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಎಲ್‌ಎಸ್‌ಜಿ ತಂಡದ ಆರಂಭ ಸಾಧಾರಣವಾಗಿತ್ತು. ಲಕ್ನೋ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಏಡನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲಿ 41 ರನ್ ಸೇರಿಸಿತು. ಈ ಹಂತದಲ್ಲಿ 22 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಮಾರ್ಕ್ರಾಮ್ ಅವರಿಗೆ ವೈಭವ್ ಆರೋರಾ ಖೆಡ್ಡಾ ತೋಡಿದರು. ಇವರು ಔಟ್ ಆಗುತ್ತಿದ್ದಂತೆ ವೈಭವ್ ಆರೋರಾ ಮಿಚೆಲ್ ಮಾರ್ಶ್ ಐದನೇ ಓವರ್‌ನ ಮೂರನೇ ಎಸೆತದಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು.

ಕಳೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ನಾಯಕ ರಿಷಭ್ ಪಂತ್ 10 ರನ್ ಸಿಡಿಸಿ ಔಟ್ ಆದರು. ಇವರು ಕ್ಯಾಮರೂನ್ ಗ್ರೀನ್ ಅವರ ಎಸೆತದಲ್ಲಿ ಕಾರ್ತಿಕ್ ತ್ಯಾಗಿ ಅವರಿಗೆ ಕ್ಯಾಚ್ ನೀಡಿದರು. ಭರವಸೆಯ ಬ್ಯಾಟರ್ ನಿಕೋಲಸ್ ಪೂರನ್ (13) ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಅಬ್ದುಲ್ ಸಮದ್ ಸಹ ನಿರಾಸೆ ಅನುಭವಿಸಿದರು.
6ನೇ ವಿಕೆಟ್‌ಗೆ ಆಯುಷ್ ಬದೋನಿ ಅವರನ್ನು ಸೇರಿಕೊಂಡ ಮುಕುಲ್ ಚೌಧರಿ ಜೋಡಿ 21 ರನ್ ಸೇರಿಸಿತು. ಈ ವೇಳೆ ಆಯುಷ್ ಬದೋನಿ 54 ರನ್ ಬಾರಿಸಿದ್ದಾಗ ಔಟ್ ಆದರು. ಇವರು 7 ಬೌಂಡರಿ, 2 ಸಿಕ್ಸರ್ ಸಿಡಿಸಿದರು.
ಮುಕುಲ್ ಮಿಂಚು
128 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮುಕುಲ್ ಚೌಧರಿ ಹಾಗೂ ಆವೇಶ್ ಖಾನ್ ಜೋಡಿ ಆಧಾರವಾಯಿತು. ಈ ಜೋಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ಸಫಲವಾಯಿತು. ಗೆಲ್ಲಬಹುದಾದ ಪಂದ್ಯವನ್ನು ಕೆಕೆಆರ್ ಸೋತಿತು. ಎಲ್‌ಎಸ್‌ಜಿ ತಂಡ ಪಂದ್ಯವನ್ನು ಗೆಲ್ಲುವಲ್ಲಿ ಮುಕುಲ್ ಅಮೋಘ ಪ್ರದರ್ಶನ ನೀಡಿದರು. ಇವರು 27 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ ಸಹಯಾದಿಂದ ಅಜೇಯ 54 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಈ ಮೂಲಕ ಎಲ್‌ಎಸ್‌ಜಿ ಪಂದ್ಯ ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.
ರಹಾನೆ, ಅಂಗ್‌ಕ್ರಿಶ್ ಉತ್ತಮ ಜೊತೆಯಾಟ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಫಿನ್ ಅಲೆನ್ (9) ಪ್ರಿನ್ಸ್ ಯಾದವ್ ಅವರ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ಥರ್ಡ್ ಮ್ಯಾನ್‌ನಲ್ಲಿ ದ್ವಿಗೇಶ್ ರಾಠಿ ಕ್ಯಾಚ್ ಪಡೆದರು. ಈ ಕ್ಯಾಚ್ ವಿವಾದ ಸೃಷ್ಟಿಸಿತು. 15 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ ಹಾಗೂ ಅಂಗ್ರಿಕ್‌ಷ ರಘುವಂಶಿ ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಈ ಜೋಡಿ 10.2 ಓವರ್‌ಗಳ ವರೆಗೆ ವಿಕೆಟ್ ಬೀಳದಂತೆ ನೋಡಿಕೊಂಡಿತು.

2ನೇ ವಿಕೆಟ್‌ಗೆ ರಹಾನೆ ಹಾಗೂ ಅಂಗ್ರಿಕಶ್ ಜೋಡಿ 52 ಎಸೆತಗಳಲ್ಲಿ 84 ರನ್ ಸೇರಿಸಿತು. ಈ ವೇಳೆ ಅಜಿಂಕ್ಯ ರಹಾನೆ 41, ಅಂಗ್ರಿಕಶ್ 45 ರನ್ ಬಾರಿಸಿ ಔಟ್ ಆದರು.ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ (4) ಬಂದು ಹೋಗುವ ಸಂಪ್ರದಾಯ ಮುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications