Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR vs LSG: ಎಲ್‌ಎಸ್‌ಜಿಗೆ 182 ರನ್‌ ಗುರಿ ನೀಡಿದ ಕೆಕೆಆರ್‌

ಕೋಲ್ಕತ್ತ: ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನದ ಫಲವಾಗಿ 19ನೇ ಆವೃತ್ತಿ ಐಪಿಎಲ್‌ನ 15ನೇ ಪಂದ್ಯದಲ್ಲಿ 182 ರನ್‌ಗಳ ಗುರಿಯನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಕ್ಕೆ ನೀಡಿತು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಕಳಪೆಯಾಗಿತ್ತು. ಫಿನ್ ಅಲೆನ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಪ್ರಿನ್ಸ್‌ ಯಾದವ್ ಅವರ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ಬೌಂಡರಿ ಲೈನ್‌ನಲ್ಲಿ ದಿಗ್ವೇಶ್ ರಾಠಿ ಉತ್ತಮ ಕ್ಯಾಚ್ ಪಡೆದರು. ಈ ವೇಳೆ ಕೆಕೆಆರ್‌ ತಂಡದ ತಂಡ ಮೊತ್ತ 15 ಆಗಿತ್ತು.

KKR vs LSG

ಬೇಗನೇ ಮೊದಲ ವಿಕೆಟ್‌ ಬಿದ್ದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ಅಜಿಂಕ್ಯ ರಹಾನೆ ಹಾಗೂ ಅಂಗ್‌ಕ್ರಿಶ್ ರಘುವಂಶಿ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಪವರ್‌ ಪ್ಲೇನಲ್ಲಿ 56 ರನ್‌ ಕಾಣಿಕೆ ನೀಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 52 ಎಸೆತಗಳಲ್ಲಿ 84 ರನ್‌ ಸೇರಿಸಿತು. ಈ ಹಂತದಲ್ಲಿ ಅಜಿಂಕ್ಯ ರಹಾನೆ ಇಲ್ಲದ ಹೊಡೆತಕ್ಕೆ ಮುಂದಾಗಿ ಮೊಹಮ್ಮದ್ ಶಮಿ ಅವರು ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಅಜಿಂಕ್ಯ ರಹಾನೆ 24 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ಔಟ್ ಆದರು.

ನಾಯಕ ಅಜಿಂಕ್ಯ ರಹಾನೆ ಔಟ್ ಆಗುತ್ತಿದ್ದಂತೆ ಯುವ ಆಟಗಾರ ಅಂಗ್‌ಕ್ರಿಶ್ ರಘುವಂಶಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್‌ ಬಾರಿಸಿ ಸಿದ್ಧಾರ್ಥ್ ಬೌಲಿಂಗ್‌ನಲ್ಲಿ ಮಾರ್ಕ್ರಾಮ್‌ಗೆ ಕ್ಯಾಚ್ ನೀಡಿದರು. ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ರಿಂಕು ಸಿಂಗ್‌ (4) ರನ್‌ ಕಲೆ ಹಾಕುವಲ್ಲಿ ವಿಫಲರಾದರು.

ಗ್ರೀನ್‌, ಪೊವೆಲ್‌ ಜೊತೆಯಾಟ

111 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಕೆಕೆಆರ್‌ ತಂಡಕ್ಕೆ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್‌ ಹಾಗೂ ರೋವನ್ ಪೊವೆಲ್‌ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿ ಕೊನೆಯಲ್ಲಿ ಆರ್ಭಟಿಸಿತು. ಈ ಜೋಡಿ 40 ಎಸೆತಗಳಲ್ಲಿ ಅಜೇಯ 70 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಕ್ಯಾಮರೂನ್‌ ಗ್ರೀನ್‌ 24 ಎಸೆತಗಳಲ್ಲಿ ಅಜೇಯ 32 ರನ್‌ ಬಾರಿಸಿದರೆ, ರೋವನ್ ಪೊವೆಲ್‌ ಅಜೇಯ 39 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 181 ರನ್‌ ಸೇರಿಸಿತು.

Story first published: Thursday, April 9, 2026, 21:24 [IST]
Other articles published on Apr 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+