KKR vs MI IPL 2024: ಮುಂಬೈ ವಿರುದ್ಧ ಗೆದ್ದರೆ ಕೋಲ್ಕತ್ತಾ ಪ್ಲೇಆಫ್‌ಗೆ; ಸಂಭಾವ್ಯ ಆಡುವ 11ರ ಬಳಗ, ಹವಾಮಾನ ವರದಿ
ಶನಿವಾರ, ಮೇ 11ರಂದು ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 60ನೇ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಪ್ರವಾಸಿ ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ರೋಚಕ ಹಣಾಹಣಿಯಲ್ಲಿ ಸೆಣಸಾಡಲಿವೆ.
ಇದು ಈ ಆವೃತ್ತಿಯಲ್ಲಿ ಕೆಕೆಆರ್ ತಂಡದ ಅಂತಿಮ ತವರಿನ ಪಂದ್ಯವಾಗಲಿದೆ. ಕೋಲ್ಕತ್ತಾದ ಕ್ರಿಕೆಟ್ ಅಭಿಮಾನಿಗಳು ಪ್ರತಿ ಪಂದ್ಯದಲ್ಲೂ ಕ್ರೀಡಾಂಗಣವನ್ನು ತುಂಬಿದ್ದಾರೆ ಮತ್ತು ಶನಿವಾರವೂ ಅದನ್ನು ನಿರೀಕ್ಷಿಸಬಹುದು.
ಆತಿಥೇಯ ಕೆಕೆಆರ್ ತಂಡ ಈ ಆವೃತ್ತಿಯಲ್ಲಿ ಕೆಲವು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು ಪ್ರಸ್ತುತ ಆಡಿದ 11 ಪಂದ್ಯಗಳಿಂದ 8 ಗೆಲುವಿನೊಂದಿಗೆ 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಶನಿವಾರದ ಸಂಭಾವ್ಯ ಗೆಲುವು ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024ರಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಮೊದಲ ತಂಡವನ್ನಾಗಿ ಮಾಡುತ್ತದೆ.
ಕೆಕೆಆರ್ ತಂಡದ ಆರಂಭಿಕರಾಗಿ ಸುನಿಲ್ ನರೈನ್ ಮತ್ತು ಫಿಲಿಪ್ ಸಾಲ್ಟ್ ಅವರ ಜೊತೆಯಾಟವು ಪ್ರಮುಖವಾಗಿದೆ ಮತ್ತು ಅಸಾಧಾರಣ ಮೊತ್ತವನ್ನು ಸ್ಥಾಪಿಸಲು ನೆರವಾಗಿದೆ.
ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಐಪಿಎಲ್ 2024ರಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಗುಳಿದ ಮೊದಲ ತಂಡವಾಗಿದೆ. ಆದರೆ, ಐದು ಬಾರಿಯ ಐಪಿಎಲ್ ಚಾಂಪಿಯನ್ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವಿನೊಂದಿಗೆ ತಮ್ಮ ಅಭಿಯಾನ ಮುಗಿಸಲು ಬಯಸುತ್ತಾರೆ.
ಆದಾಗ್ಯೂ, ಸೂರ್ಯಕುಮಾರ್ ಯಾದವ್ ಅವರ ಇತ್ತೀಚಿನ ಪ್ರದರ್ಶನ ತಮ್ಮ ತಂಡಕ್ಕೆಭರವಸೆಯನ್ನು ನೀಡುತ್ತವೆ. ಆದರೂ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಪ್ರಮುಖ ಆಟಗಾರರ ಫಾರ್ಮ್‌ಗೆ ಮರಳಲು ಕುತೂಹಲದಿಂದ ಕಾಯಲಾಗುತ್ತಿದೆ.
2024ರ ಟಿ20 ವಿಶ್ವಕಪ್ ಪಂದ್ಯಾವಳಿ ಸಮೀಪಿಸುತ್ತಿದ್ದಂತೆ, ಹಾರ್ದಿಕ್ ಪಾಂಡ್ಯ ಅವರ ಪುನರಾಗಮನ ಮುಂಬೈ ಇಂಡಿಯನ್ಸ್ ಮತ್ತು ಟೀಮ್ ಇಂಡಿಯಾ ಎರಡಕ್ಕೂ ನಿರ್ಣಾಯಕವಾಗಿದೆ.
ಇದೇ ವೇಳೆ ಕೋಲ್ಕತ್ತಾದಲ್ಲಿ ಒಂದು ವಾರದಿಂದ ಮಳೆಯಾಗುತ್ತಿದ್ದು, ಪಂದ್ಯಕ್ಕೂ ಮುನ್ನ ಹವಾಮಾನದ ಮೇಲೆ ಆಟಗಾರರು ಮತ್ತು ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.

ಕೆಕೆಆರ್ vs ಎಂಐ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಐಪಿಎಲ್ 2024ರ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಮತ್ತು ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಕೆಕೆಆರ್ vs ಎಂಐ ಸಂಭಾವ್ಯ ಆಡುವ 11ರ ಬಳಗ
ಕೋಲ್ಕತ್ತಾ ನೈಟ್ ರೈಡರ್ಸ್: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್‌ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications