Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR vs MI: ಐಪಿಎಲ್ 2024ರ ಪ್ಲೇಆಫ್‌ಗೆ ಪ್ರವೇಶಿಸಿದ ಮೊದಲ ತಂಡ ಕೆಕೆಆರ್

ಶನಿವಾರ, ಮೇ 11ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 2024ರ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವೆನಿಸಿತು.

2021ರ ಆವೃತ್ತಿಯ ಫೈನಲ್‌ಗೆ ಪ್ರವೇಶಿಸಿದ ನಂತರ ಕೆಕೆಆರ್ ಪ್ಲೇಆಫ್‌ಗೆ ಪ್ರವೇಶಿಸುತ್ತಿರುವುದು ಇದೇ ಮೊದಲು. ಕೆಕೆಆರ್ ತಂಡದ ಆಡಿದ 12 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

KKR vs MI IPL 2024 KKR Become First Team to Entered the Playoffs of IPL 2024

ರಾಜಸ್ಥಾನ್ ರಾಯಲ್ಸ್ ಜೊತೆಗೆ ಕೆಕೆಆರ್ ಈ ಆವೃತ್ತಿಯ ಮೊದಲ ಸ್ಥಾನ ಪಡೆಯಲು ರೇಸ್‌ನಲ್ಲಿರುವ ತಂಡಗಳಲ್ಲಿ ಒಂದಾಗಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ಹೆಚ್ಚಿನ ಆವೃತ್ತಿಗಳಲ್ಲಿ ಅಗ್ರ ಎರಡು ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಕಳೆದ ವರ್ಷ 7ನೇ ಸ್ಥಾನದಲ್ಲಿದ್ದ ಎರಡು ಬಾರಿಯ ಚಾಂಪಿಯನ್ ಕೆಕೆಆರ್ ತಂಡದ ಮೇಲೆ ಮೆಂಟರ್ ಗೌತಮ್ ಗಂಭೀರ್ ಅವರ ಆಗಮನವು ಖಂಡಿತವಾಗಿಯೂ ಉತ್ತಮ ಪರಿಣಾಮವನ್ನು ಬೀರಿದೆ.

KKR vs MI IPL 2024 KKR Become First Team to Entered the Playoffs of IPL 2024

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಉಳಿದ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಗೆಲುವು ಅಗ್ರ ಎರಡರಲ್ಲಿ ಸ್ಥಾನವನ್ನು ಸೀಲ್ ಮಾಡಲಿದೆ ಮತ್ತು ಪ್ಲೇಆಫ್ ಕ್ವಾಲಿಫೈಯರ್ 1ಕ್ಕೆ ಮುನ್ನಡೆಯುತ್ತದೆ. ಆಗ ಫೈನಲ್ ತಲುಪಲು ಎರಡು ಅವಕಾಶಗಳು ಸಿಗಲಿವೆ.

ಕೆಕೆಆರ್ vs ಮುಂಬೈ ಇಂಡಿಯನ್ಸ್ ಪಂದ್ಯದ ವಿವರ

ಕೋಲ್ಕತ್ತಾದಲ್ಲಿ ಮಳೆಯಿಂದಾಗಿ ಪಂದ್ಯವನ್ನು ತಲಾ 16 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಶ್ರೇಯಸ್ ಅಯ್ಯರ್ ಸತತ 7ನೇ ಬಾರಿಗೆ ಟಾಸ್ ಸೋತ ನಂತರ ಕೆಕೆಆರ್ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು.

ಆರಂಭದಲ್ಲೇ ಫಿಲ್ ಸಾಲ್ಟ್ ಮತ್ತು ಸುನಿಲ್ ನರೈನ್ ಅವರ ವಿಕೆಟ್ ಕಳೆದುಕೊಂಡಿದ್ದರಿಂದ ಕೆಕೆಆರ್ ಸಂಕಷ್ಟಕ್ಕೆ ಸಿಲುಕಿತು. ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ ಬ್ಯಾಟ್‌ನಿಂದ ದೊಡ್ಡ ಕಾಣಿಕೆ ನೀಡಲು ಸಾಧ್ಯವಾಗಲಿಲ್ಲ. ಈ ವೇಳೆ ಕೆಕೆಆರ್ 3 ವಿಕೆಟ್‌ಗೆ 40 ರನ್‌ಗಳಿಗೆ ಕುಸಿಯಿತು.

ಆಗ ವೆಂಕಟೇಶ್ ಅಯ್ಯರ್ 21 ಎಸೆತಗಳಲ್ಲಿ 42 ರನ್ ಮತ್ತು ತಂಡಕ್ಕೆ ಪುನರಾಗಮನ ಮಾಡಿದ ನಿತೀಶ್ ರಾಣಾ 23 ಎಸೆತಗಳಲ್ಲಿ 33 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು.

ಕೊನೆಯಲ್ಲಿ ಆಂಡ್ರೆ ರಸೆಲ್ 24 ರನ್, ರಿಂಕು ಸಿಂಗ್ 20 ರನ್ ಮತ್ತು ರಮಣದೀಪ್ ಸಿಂಗ್ 17 ರನ್‌ಗಳ ಉತ್ತಮ ಆಟದಿಂದಾಗಿ ಕೆಕೆಆರ್ 16 ಓವರ್‌ಗಳಲ್ಲಿ 157 ರನ್‌ಗೆ ಕಲೆಹಾಕಿತು.

ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 22 ಎಸೆತಗಳಲ್ಲಿ 40 ರನ್ ಗಳಿಸುವುದರೊಂದಿಗೆ ಚೇಸಿಂಗ್ ಅನ್ನು ಚುರುಕಾಗಿ ಆರಂಭಿಸಿದರು. ಆದರೆ, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಬೌಲಿಂಗ್‌ಗೆ ಬಂದು ಕ್ರಮವಾಗಿ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು.

ನಂತರ ಆಂಡ್ರೆ ರಸೆಲ್ ಅವರ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ದೊಡ್ಡ ವಿಕೆಟ್ ಬಿತ್ತು. ಅಲ್ಲದೆ ಟಿಮ್ ಡೇವಿಡ್ ಅವರನ್ನು ಸಹ ಔಟ್ ಮಾಡಿದರು. ತಿಲಕ್ ವರ್ಮಾ 32 ರನ್‌ ಗಳಿಸಿ ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಅಂತಿಮವಾಗಿ ಕೆಕೆಆರ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್‌ಗಳಿಂದ ಸೋಲಿಸಿತು.

Story first published: Sunday, May 12, 2024, 8:01 [IST]
Other articles published on May 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+