Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR vs MI: ಕರ್ನಾಟಕದ ಮನೀಷ್ ಪಾಂಡೆ ಮಿಂಚು; ಮುಂಬೈ ಮಣಿಸಿದ ಕೆಕೆಆರ್‌ ಪ್ಲೇಆಫ್‌ ಆಸೆ ಜೀವಂತ

ಕೋಲ್ಕತ್ತಾ: ಸಂಘಟಿತ ಆಟದ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ 65ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ, ಪ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಕೆಕೆಆರ್‌ ಲೀಗ್‌ನಲ್ಲಿ 13 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡದ ಆರಂಭ ಕಳಪೆಯಾಗಿತ್ತು. ಸ್ಫೋಟಕ ಬ್ಯಾಟರ್ ಫಿನ್ ಅಲೆನ್ (8) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ನಾಯಕ ಅಜಿಂಕ್ಯ ರಹಾನೆ ಹಾಗೂ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಕರ್ನಾಟಕದ ಸ್ಟಾರ್ ಆಟಗಾರ ಮನೀಷ್ ಪಾಂಡೆ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿ 28 ಎಸೆತಗಳಲ್ಲಿ 38 ರನ್‌ ಸೇರಿಸಿತು. ಅಜಿಂಕ್ಯ ರಹಾನೆ 4 ಬೌಂಡರಿ ನೆರವಿನಿಂದ 21 ರನ್‌ ಸಿಡಿಸಿ ಔಟ್ ಆದರು. ಕ್ಯಾಮರೂನ್ ಗ್ರೀನ್‌ (4) ಜವಾಬ್ದಾರಿ ಮರೆತರು.

KKR vs MI

4ನೇ ವಿಕೆಟ್‌ಗೆ ಭರವಸೆಯ ಆಟಗಾರ ಮನೀಷ್ ಪಾಂಡೆ ಅವರನ್ನು ಸೇರಿಕೊಂಡ ರೋವ್‌ಮನ್ ಪೋವೆಲ್‌ ಜೋಡಿ ಭರ್ಜರಿ ಜೊತೆಯಾಟ ನೀಡಿತು. ಈ ಜೋಡಿ 48 ಎಸೆತಗಳಲ್ಲಿ 64 ರನ್‌ ಸೇರಿಸಿತು. ಭರವಸೆಯ ಆಟಗಾರ ಮನೀಷ್ ಪಾಂಡೆ 6 ಬೌಂಡರಿ ನೆರವಿನಿಂದ 45 ರನ್ ಬಾರಿಸಿ ಔಟ್ ಆದರು. ರೋವ್‌ಮನ್‌ ಪೋವೆಲ್‌ 40 ರನ್‌ ಬಾರಿಸಿ ಔಟ್ ಆದರು. ರಿಂಕು ಸಿಂಗ್ (ಅಜೇಯ 9) ಹಾಗೂ ಅನುಕೂಲ್ ರಾಯ್ (ಅಜೇಯ 4) ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಕಳಪೆ ಆರಂಭ

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ಲೀಗ್‌ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಯಾನ್ ರಿಕಲ್ಟನ್‌ (6) ಕ್ಯಾಮರೂನ್ ಗ್ರೀನ್‌ ತೋಡಿದ ಖೆಡ್ಡಾಗೆ ಬಲಿಯಾದರು. ನಮನ್‌ ಧೀರ್ ಅವರಿಗೂ ಗ್ರೀನ್‌ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಗ್ರೀನ್‌ ಒಂದೇ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಇಬ್ಬರು ಬ್ಯಾಟರ್‌ಗಳನ್ನು ಔಟ್ ಮಾಡಿದರು. 13 ಎಸೆತಗಳಲ್ಲಿ 2 ಸಿಕ್ಸರ್ ಸಹಾಯದಿಂದ 15 ರನ್‌ ಬಾರಿಸಿದ್ದ ರೋಹಿತ್‌ ಶರ್ಮಾ ಔಟ್ ಆದರು. ಸ್ಥಿರ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿದ್ದ ಸೂರ್ಯಕುಮಾರ್ ಯಾದವ್ (15) ಸೌರಭ್‌ ದುಬೆ ಎಸೆತದಲ್ಲಿ ಬೋಲ್ಡ್ ಆದರು. ಮುಂಬೈ 41 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

KKR vs MI

5ನೇ ವಿಕೆಟ್‌ಗೆ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಜೋಡಿ 49 ಎಸೆತಗಳಲ್ಲಿ 43 ರನ್‌ ಸೇರಿಸಿತು. ತಿಲಕ್ 20, ಹಾರ್ದಿಕ್ ಪಾಂಡ್ಯ 26 ರನ್ ಬಾರಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಕಾರ್ಬಿನ್ ಬಾಷ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 32 ರನ್‌ ಸಿಡಿಸಿ ಮಿಂಚಿದರು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 147 ರನ್‌ ಸೇರಿಸಿತು. ಕೆಕೆಆರ್‌ ಪರ ಸೌರಭ್ ದುಬೆ, ಕ್ಯಾಮರೂನ್ ಗ್ರೀನ್‌, ಕಾರ್ತಿಕ್ ತ್ಯಾಗಿ ತಲಾ 2 ವಿಕೆಟ್‌ ಪಡೆದರು.

Story first published: Thursday, May 21, 2026, 0:42 [IST]
Other articles published on May 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+