KKR vs MI: ರೋಹಿತ್ ಶರ್ಮಾ ಕೆಟ್ಟದಾಗಿ ಔಟಾಗಿದ್ದಕ್ಕೆ ತಲೆಮೇಲೆ ಕೈ ಹೊತ್ತ ಶಾರೂಖ್ ಖಾನ್ ಪುತ್ರಿ
ಶನಿವಾರ, ಮೇ 11ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 2024ರ ಪ್ಲೇಆಫ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವೆನಿಸಿತು.
ಇದೇ ವೇಳೆ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್ 2024ರಲ್ಲಿ ತಮ್ಮ ಕೆಟ್ಟ ಅಭಿಯಾನ ಮುಂದುವರೆಸಿದರು. ಒತ್ತಡದಲ್ಲಿ ಸತತ ಆರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ದೊಡ್ಡ ಮೊತ್ತವನ್ನು ಗಳಿಸಲು ವಿಫಲರಾದರು.

ಶನಿವಾರದಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಹಿತ್ ಶರ್ಮಾ 24 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿ ಔಟಾದರು. ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಅವರ ಸ್ಕೋರ್‌ಗಳು 4, 11, 4, 8, 6 ಬಂದಿವೆ. ಟಿ20 ವಿಶ್ವಕಪ್ ಮುಂದಿರುವಾಗ ಇದು ರೋಹಿತ್ ಶರ್ಮಾ ಅಭಿಮಾನಿಗಳು ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತಕಾರಿ ಅಂಕಿಅಂಶಗಳಾಗಿವೆ.
ಮುಂಬೈ ಇಂಡಿಯನ್ಸ್ ತಂಡ 16 ಓವರ್‌ಗಳಲ್ಲಿ 158 ರನ್‌ಗಳನ್ನು ಬೆನ್ನಟ್ಟುವಾಗ ದೊಡ್ಡ ಮೊತ್ತ ಗಳಿಸಲು ರೋಹಿತ್ ಶರ್ಮಾಗೆ ಅತ್ಯುತ್ತಮ ಅವಕಾಶವಿತ್ತು. ಆದರೆ ಇದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಅದು ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಹೊಡೆತ ನೀಡಿತು ಮತ್ತು ಅಂತಿಮವಾಗಿ 18 ರನ್‌ಗಳಿಂದ ಸೋತಿತು.
ಎದುರಾಳಿ ಪಾಳಯದಲ್ಲಿಯೂ ಆಘಾತಕಾರಿ ಪ್ರತಿಕ್ರಿಯೆ
ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ದಿಕ್ಕುತಪ್ಪಿ ಸುನಿಲ್ ನರೈನ್‌ಗೆ ಕ್ಯಾಚ್ ನೀಡಿ ರೋಹಿತ್ ಶರ್ಮಾ ಔಟಾಗಿದ್ದನ್ನು ನೋಡಿ ಎದುರಾಳಿ ತಂಡದ ಪಾಳಯದಲ್ಲೂ ಅಚ್ಚರಿ ವ್ಯಕ್ತವಾಯಿತು. ಕೆಕೆಆರ್ ಸಹ-ಮಾಲೀಕಿ ಜೂಹಿ ಚಾವ್ಲಾ, ಮತ್ತೊಬ್ಬ ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಅವರ ಪುತ್ರಿ ಸುಹಾನ್ ಖಾನ್ ಮತ್ತು ಅನನ್ಯಾ ಪಾಂಡೆ ಆಘಾತಕ್ಕೊಳಗಾದರು.

ರೋಹಿತ್ ಶರ್ಮಾ ನಾಟಕೀಯವಾಗಿ ಔಟಾದಾಗ ಸುಹಾನಾ ಖಾನ್ ಅಂತೂ ತಲೆಮೇಲೆ ಕೈಹೊತ್ತು ನಿಂತಳು. ಅನನ್ಯಾ ಪಾಂಡೆ, ಜೂಹಿ ಚಾವ್ಲಾ ಚಪ್ಪಾಳೆ ತಟ್ಟಿದರು.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್ ಅವರು ಇತ್ತೀಚೆಗೆ ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಔಟಾಗುತ್ತಿರುವ ರೀತಿ ಭಾರತೀಯ ಕ್ರಿಕೆಟ್‌ಗೆ ಕೆಲವು ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಲಿದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications