For Quick Alerts
ALLOW NOTIFICATIONS  
For Daily Alerts
 

IPL 2024: ಐಪಿಎಲ್‌ ಇತಿಹಾಸದಲ್ಲೆ ಬೃಹತ್‌ ಟಾರ್ಗೆಟ್‌ ಚೇಸ್‌ ಮಾಡಿದ ಪಂಜಾಬ್‌; ಕೆಕೆಆರ್‌ಗೆ ಸೋಲಿನ ಕಹಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್)ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ನೀಡಿದ ಬೃಹತ್‌ ಗುರಿಯನ್ನು ಚೇಸ್‌ ಮಾಡುವಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್‌) ತಂಡ ಯಶಸ್ವಿಯಾಗಿದೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ ಎದುರು ಪ್ರಭಾಸಿಮ್ರಾನ್ ಸಿಂಗ್,ಜಾನಿ ಬೈರ್‌ಸ್ಟೋವ್ ಮತ್ತು ಶಶಾಂಕ್ ಸಿಂಗ್ ಸಿಡಿದೆದ್ದು ರನ್‌ಗಳಿಸಿದರು. ಈ ಮೂಲಕ 17 ವರ್ಷದ ಐಪಿಎಲ್‌ ಇತಿಹಾಸದಲ್ಲೆ ಮೊದಲ ಬಾರಿಗೆ ಕೆಕೆಆರ್‌ ನೀಡಿದ 262 ರನ್‌ ಟಾರ್ಗೆಟ್‌ ಅನ್ನು ಪಂಜಾಬ್‌ 18.4 ಓವರ್‌ಗಳಲ್ಲಿ ತಲುಪಿ ವಿಜಯ ಸಾಧಿಸಿ ದಾಖಲೆ ಬರೆದಿದೆ.

KKR vs PBKS Match ipl 2024 Punjab Kings win against Kolkata Knight Riders

ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ ಬೃಹತ್‌ ಟಾರ್ಗೆಟ್‌ ಅನ್ನು ಬೆನ್ನಟ್ಟಿದ್ದ ಪಂಜಾಬ್‌ ಕಿಂಗ್ಸ್‌ ಪರ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೈರ್‌ಸ್ಟೋವ್ ಇನ್ನಿಂಗ್ಸ್‌ ಶುರು ಮಾಡಿದರು. ಕೆಕೆಆರ್‌ ಆರಂಭಿಕರಂತೆ ಅಬ್ಬರದ ಬ್ಯಾಟಿಂಗ್‌ ಮಾಡಿದ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೈರ್‌ಸ್ಟೋವ್ ಪವರ್‌ ಪ್ಲೇ ನಲ್ಲಿ 93 ರನ್‌ ಗಳಿಸಿದರು.

ಬಿರುಸಿನ ಬ್ಯಾಟಿಂಗ್‌ ಮಾಡಿದ ಪ್ರಭಾಸಿಮ್ರಾನ್ ಸಿಂಗ್ ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್‌ ಹಾಗು 4 ಬೌಂಡರಿ ಸಹಾಯದಿಂದ 54 ರನ್‌ ಹೊಡೆದರು. ಆದರೆ ದುರದೃಷ್ಟಕರ ರನ್‌ ಔಟ್‌ಗೆ ಬಲಿಯಾದರು. ಜಾನಿ ಬೈರ್‌ಸ್ಟೋವ್ ಮಾತ್ರ ತನ್ನ ಆಕ್ರಮಣಕಾರಿ ಆಟವನ್ನು ನಿಲ್ಲಿಸಲಿಲ್ಲ. ಕೆಕೆಆರ್‌ ಬೌಲರ್ಸ್‌ ಮೇಲೆ ಜಾನಿ ಬೈರ್‌ಸ್ಟೋವ್ ಸವಾರಿ ಮಾಡಿದರು.

ಪ್ರಭಾಸಿಮ್ರಾನ್ ಸಿಂಗ್ ಔಟ್‌ ಆದ ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಲೀ ರೊಸೊವ್ ಕೂಡ ಜಾನಿ ಬೈರ್‌ಸ್ಟೋವ್ ಜೊತೆಗೂಡಿದ ಉತ್ತಮ ಪ್ರದರ್ಶನ ನೀಡಿದರು. ಎರಡು ಸಿಕ್ಸರ್‌ ಹಾಗು ಒಂದು ಬೌಂಡರಿ ಹೊಡೆದು ಸುನಿಲ್‌ ನರೈನ್‌ ಬೌಲಿಂಗ್‌ನಲ್ಲಿ ರಿಲೀ ರೊಸೊವ್ (26) ವಿಕೆಟ್‌ ಕಳೆದುಕೊಂಡರು.

ಆದರೆ ಜಾನಿ ಬೈರ್‌ಸ್ಟೋವ್ ಮಾತ್ರ ಸಿಕ್ಸರ್‌, ಬೌಂಡರಿಗಳ ಸುರಿಮಳೆ ಗೈದರು. ಜಾನಿ ಬೈರ್‌ಸ್ಟೋವ್ ಎದುರಿಸಿದ 45 ಎಸೆತಗಳಲ್ಲಿ 8 ಬೌಂಡರಿ ಹಾಗು 9 ಸಿಕ್ಸರ್‌ ನೆರವಿನಿಂದ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ಜಾನಿ ಬೈರ್‌ಸ್ಟೋವ್ ಜೊತೆಗೆ ಶಶಾಂಕ್ ಸಿಂಗ್ ಕೂಡ ಮತ್ತೊಮ್ಮೆ ರೊಚ್ಚಿಗೆದ್ದು ಬ್ಯಾಟಿಂಗ್‌ ಮಾಡಿದರು.

KKR vs PBKS Match ipl 2024 Punjab Kings win against Kolkata Knight Riders

ಕಳೆದ ಮೂರು ಪಂದ್ಯಗಳಿಂದ ಉತ್ತಮವಾಗಿ ಕಾಣುತ್ತಿರುವ ಶಶಾಂಕ್ ಸಿಂಗ್ ಪಂಜಾಬ್‌ ಫ್ರಾಂಚೈಸಿ ಇಟ್ಟಿದ್ದ ನಂಬಿಕೆ ಉಳಿಸಿಕೊಂಡು ಪಂದ್ಯ ಗೆಲ್ಲಿಸುವಲ್ಲಿ ಶ್ರಮವಹಿಸಿದರು. ಕೇವಲ 28 ಎಸೆತಗಳಲ್ಲಿ ಅಬ್ಬರದ ಎಂಟು ಸಿಕ್ಸರ್‌ ಹಾಗು ಎರಡು ಬೌಂಡರಿ ಮೂಲಕ ಅಜೇಯ 68 ರನ್‌ ಹೊಡೆದು ಪಂಜಾಬ್‌ಗೆ ದಾಖಲೆಯ ಜಯ ತಂದು ಕೊಟ್ಟರು. ಇನ್ನೊಂದೆಡೆ ಜಾನಿ ಬೈರ್‌ಸ್ಟೋವ್ ಕೂಡ ಅಜೇಯ 108 ರನ್‌ ಗಳಿಸಿದರು.

ಕೆಕೆಆರ್‌ ಪರ ಸುನಿಲ್‌ ನರೈನ್‌ ಮಾತ್ರ ಒಂದು ವಿಕೆಟ್‌ ಪಡೆದುಕೊಂಡರು. ಉಳಿದ ಬೌಲರ್ಸ್‌ ಹೆಚ್ಚು ರನ್‌ ಬಿಟ್ಟು ಕೊಟ್ಟು ತಂಡದ ಸೋಲಿಗೆ ಕಾರಣವಾದರು.

Story first published: Friday, April 26, 2024, 23:28 [IST]
Other articles published on Apr 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+