IPL 2024: ಐಪಿಎಲ್‌ನಲ್ಲಿ ನಿಗೂಢ ಸ್ಪಿನ್ನರ್ ಸುನಿಲ್ ನರೈನ್ ಮತ್ತೊಂದು ದಾಖಲೆ: ಏನಿದು ಗೊತ್ತೆ!
ಭಾನುವಾರ ಏಪ್ರಿಲ್ 21 ರಂದು ಕೋಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವೆ ರಣರೋಚಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯ ನಡೆಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 223 ರನ್‌ಗಳ ಬೃಹತ್ ಟಾರ್ಗೆಟ್ ಅನ್ನು ಆರ್‌ಸಿಬಿ ತಂಡಕ್ಕೆ ನೀಡಿತ್ತು. ಈ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ಕೊನೆಯ ಹಂತದ ವರೆಗೂ ತನ್ನ ಗೆಲುವಿನ ಹೋರಾಟ ಬಿಟ್ಟು ಕೊಟ್ಟಿರಲಿಲ್ಲ. ಆದರೆ ಕೊನೆಯ ಹಂತದಲ್ಲಿ ಗೆಲ್ಲುವ ಸನಿಹ ಬಂದು ಕೇವಲ ಒಂದು ರನ್‌ಗಳಿಂದ ಆರ್‌ಸಿಬಿ ಪಂದ್ಯವನ್ನು ಕೈ ಚೆಲ್ಲಬೇಕಾಯಿತು.

ಇಂತಹ ಹೈವೋಲ್ಟೇಜ್ ಪಂದ್ಯದಲ್ಲಿ ಕೆಕೆಆರ್ ಪರ ಆಡುವ ಕೆರಿಬಿಯನ್ ನಿಗೂಢ ಸ್ಪಿನ್ನರ್ ಸುನಿಲ್ ನರೈನ್ ಅವರು ಹೊಸ ಮೈಲಿಗಲ್ಲು ತಲುಪಿದ್ದಾರೆ. ತನ್ನ ವಿಭಿನ್ನ ಶೈಲಿಯ ಸ್ಪಿನ್ ಬೌಲಿಂಗ್‌ನಿಂದಲ್ಲೆ ವಿಶ್ವ ಶ್ರೇಷ್ಠ ಬ್ಯಾಟರ್‌ಗಳ ವಿಕೆಟ್‌ಗಳನ್ನು ಪಡೆದಿರುವ ಸುನಿಲ್ ನರೈನ್ ಕೆಕೆಆರ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಗೈದಿದ್ದಾರೆ. ಅಲ್ಲದೆ ಈವರೆಗೆ ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿಗೆ ಅತಿ ಹೆಚ್ಚು ವಿಕೆಟ್‌ಗಳನ್ನು ತೆಗೆದುಕೊಟ್ಟಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಸುನಿಲ್ ನರೈನ್ ಪಾತ್ರರಾಗಿದ್ದಾರೆ.
ಆರ್‌ಸಿಬಿ ಆಟಗಾರರಾದ ಕ್ಯಾಮರೂನ್ ಗ್ರೀನ್ ಮತ್ತು ಮಹಿಪಾಲ್ ಲೋಮ್ರೋರ್ ಅವರ ವಿಕೆಟ್ ಪಡೆಯುವ ಮೂಲಕ ಸುನಿಲ್ ನರೈನ್ ಐಪಿಎಲ್‌ನಲ್ಲಿ ಈ ಹೊಸ ದಾಖಲೆ ಬರೆದರು. ಇದಕ್ಕೂ ಮುನ್ನ ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ವಿಕೆಟ್ ಪಡೆದವರ ರೇಸ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ನ ದಂತಕಥೆ ಲಸಿತ್ ಮಾಲಿಂಗ ಅವರು 170 ವಿಕೆಟ್‌ಗಳೊಂದಿಗೆ ಮುಂದೆ ಇದ್ದರು. ಮುಂಬೈ ಇಂಡಿಯನ್ಸ್ ಪರ ಲಸಿತ್ ಮಾಲಿಂಗ ಈ ದಾಖಲೆ ಬರೆದಿದ್ದರು.
ಇದೀಗ ಲಸಿತ್ ಮಾಲಿಂಗ ಅವರನ್ನು ಸುನಿಲ್ ನರೈನ್ 172 ವಿಕೆಟ್ ಪಡೆಯುವ ಮೂಲಕ ಹಿಂದಿಕ್ಕಿದ್ದಾರೆ. ಈಗಾಗಲೇ ಮಾಲಿಂಗ ಎಲ್ಲಾ ಮಾದರಿ ಕ್ರಿಕೆಟ್‌ಯಿಂದ ನಿವೃತ್ತಿ ಹೊಂದಿದ್ದು, ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಇಬ್ಬರು ಆಟಗಾರರನ್ನು ಹೊರತು ಪಡೆಸಿದರೆ ಮತ್ತೊಬ್ಬ ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 158 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ತದನಂತರ ಕ್ರಮವಾಗಿ ಸನ್ ರೈಸರ್ಸ್ ಹೈದರಾಬಾದ್ ಪರ ಸ್ವಿಂಗ್ ಕಿಂಗ್ ಖ್ಯಾತಿಯ ಭುವನೇಶ್ವರ್ ಕುಮಾರ್ ಅವರು 150 ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ 140 ವಿಕೆಟ್‌ಗಳನ್ನು ಉರಳಿಸುವ ಮೂಲಕ ಆಗ್ರ ಐದರಲ್ಲಿದ್ದಾರೆ.
ಐಪಿಎಲ್‌ನಲ್ಲಿ ಸುನಿಲ್ ನರೈನ್ ಸಾಧನೆ :
ಐಪಿಎಲ್‌ನಲ್ಲಿ ಈವರೆಗೆ ಎಲ್ಲ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿರುವ ಏಕೈಕ ಆಟಗಾರ ಎಂದರೆ ಅದು ಸುನಿಲ್ ನೈರನ್ ಮಾತ್ರ. ಅಲ್ಲದೆ ಒಬ್ಬ ಬೌಲರ್ ಶತಕ ಸಿಡಿಸಿರುವ ದಾಖಲೆ ಕೂಡ ಸುನಿಲ್ ನರೈನ್ ಹೆಸರಿನಲ್ಲಿದೆ. ಇಂತಹ ಅದ್ಬುತ ಆಟಗಾರ ಕೆಕೆಆರ್ ಪರ 168 ಪಂದ್ಯಗಳಲ್ಲಿ ಕಣಕ್ಕೀಳಿದಿದ್ದು, 172 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಒಂದು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಬ್ಯಾಟಿಂಗ್‌ನಲ್ಲೂ ತನ್ನ ಅಬ್ಬರ ತೋರಿರುವ ಸುನಿಲ್ ನರೈನ್ ಕೆಕೆಆರ್‌ಗೆ ಉತ್ತಮ ರನ್‌ಗಳನ್ನು ಕಲೆಹಾಕಿದ್ದಾರೆ. ಐದು ಅರ್ಧಶತಕ ಹಾಗು ಒಂದು ಶತಕಗಳನ್ನು ಸಿಡಿಸಿ ತನ್ನ ಪರಕ್ರಮ ಮೆರೆದಿದ್ದಾರೆ. ಒಟ್ಟು 1332 ರನ್‌ಗಳನ್ನು ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications