IPL-2024: ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ನಾಯಕನಿಗೆ ಬಿತ್ತು ಭಾರೀ ದಂಡ; ಕಾರಣವೇನು?
ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗೆಲುವಿನ ಲಯಕ್ಕೆ ಮರಳಲು ಪರದಾಟ ನಡೆಸುತ್ತಿದೆ. ತಂಡದಲ್ಲಿ ಪಂದ್ಯದ ಗತಿಯನ್ನೆ ಬದಲಾಯಿಸುವ ಆಟಗಾರರಿದ್ದರೂ ಸಹಾ ಫಾರ್ಮ್ ಸಮಸ್ಯೆ ಎದುರಿಸುತ್ತಿರುವುದು ಆರ್‌ಸಿಬಿಗೆ ಹಿನ್ನೆಡೆ ಉಂಟು ಮಾಡಿದೆ.
ಜೊತೆಗೆ ತಂಡದಲ್ಲಿನ ಶಿಸ್ತು ಕೂಡ ಆರ್‌ಸಿಬಿ ಸೋಲಿಗೆ ಕಾರಣವಾಗಿದೆ. ಹೀಗಾಗಿ ಕಳೆದ ಪಂದ್ಯಗಳಲ್ಲಿ ಬೇಜವಾಬ್ದಾರಿ ಬೌಲಿಂಗ್ ಪ್ರದರ್ಶನ ಮತ್ತು ಕಳಪೆ ಫೀಲ್ಡಿಂಗ್ ನಿಂದಾಗಿ ಆರ್‌ಸಿಬಿ ಇಂತಹ ಪರಿಸ್ಥಿತಿಯಲ್ಲಿದೆ. ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲೂ ಅದೇ ರಾಗ, ಅದೇ ಹಾಡು ಎಂಬಂತೆ ಆರ್‌ಸಿಬಿ ಬೌಲರ್ಸ್ ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದರು.

ಈ ವೇಳೆ ಆರ್‌ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಅವರು ಹೊಸ ತಂತ್ರ ರೂಪಿಸಲು ಹೋಗಿ ದಂಡಕ್ಕೆ ಗುರಿಯಾಗಿದ್ದಾರೆ. ಕೊನೆಯ ಎರಡು ಓವರ್‌ಗಳಲ್ಲಿ ನಿಧಾನಗತಿಯ ಓವರ್ ರೇಟ್ ಮಾಡಿರುವುದಕ್ಕೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಅಡಿ ಫಾಪ್ ಡು ಪ್ಲೆಸಿಸ್ ಅವರಿಗೆ ಬರೋಬ್ಬರಿ 12 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಲಾಗಿದೆ. ಈ ಬಗ್ಗೆ ಐಪಿಎಲ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕೆಕೆಆರ್ vs ಆರ್‌ಸಿಬಿ ಪಂದ್ಯದ ಪಲಿತಾಂಶ :
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ತಮ್ಮ ಬಲಿಷ್ಠ ಬ್ಯಾಟಿಂಗ್ ಬಲದಿಂದ ಆರ್‌ಸಿಬಿಗೆ 223 ರನ್ ಬೃಹತ್ ಟಾರ್ಗೆಟ್ ನೀಡಿತ್ತು. ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ (50) ಮತ್ತು ಫಿಲಿಪ್ ಸಾಲ್ಟ್ (48) ಅಬ್ಬರ ಪ್ರದರ್ಶನ ನೀಡಿದರು. ಅಂತಿಮವಾಗಿ ಕೆಕೆಆರ್ 6 ವಿಕೆಟ್‌ಗೆ 226 ರನ್ ಗಳಿಸಿತ್ತು.
ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆರ್‌ಸಿಬಿ ಶುರುವಿನಲ್ಲೆ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತ್ತು. ಬಳಿಕ ನಾಯಕ ಫಾಪ್ ಡು ಪ್ಲೆಸಿಸ್ ಕೂಡ ನಿರಾಸೆ ಮೂಡಿಸಿದರು. ವಿಲ್ ಜ್ಯಾಕ್ಸ್ (55) ಮತ್ತು ರಜತ್ ಪಾಟಿದಾರ್ (52) ಅರ್ಧಶತಕ ಸಿಡಿಸಿ ಆರ್‌ಸಿಬಿಗೆ ಗೆಲುವಿನ ಆಸೆ ಚಿಗುರಿಸಿದರು. ಬಳಿಕ ಇಬ್ಬರು ಔಟ್ ಆದರು. ಉತ್ತಮವಾಗಿ ಆಡುತ್ತಿದ್ದ ದಿನೇಶ್ ಕಾರ್ತಿಕ್ ಸಹಾ 18ನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು.
ಈ ಹಂತದಲ್ಲಿ ಆರ್‌ಸಿಬಿ ಗೆಲುವಿನ ಬಾಗಿಲು ಮುಚ್ಚಿ ಹೋಯಿತು ಎಂದುಕೊಂಡ ಅಭಿಮಾನಿಗಳಿಗೆ ಕರಣ್ ಶರ್ಮ್ ಗೆಲುವಿನ ಸನಿಹ ಕರೆತಂದರು. ಆದರೆ ದುರದೃಕಷ್ಟಕರ 2 ಎಸೆತಗಳಲ್ಲಿ 3 ರನ್‌ಗಳು ಬೇಕಿದಾಗ ಕ್ಯಾಚ್ ನೀಡಿ ಹೊರ ನಡೆದರು. ಕೊನೆದಾಗಿ ಆರ್‌ಸಿಬಿ ಗೆಲುವಿಗೆ ಒಂದು ಎಸೆತದಲ್ಲಿ ಮೂರು ರನ್ ಅವಶ್ಯಕತೆ ಇದ್ದಾಗ ಲಾಕಿ ಫರ್ಗುಸನ್ ಎರಡು ರನ್ ಕದಿಯಲು ಹೋಗಿ ರನ್ ಔಟ್‌ಗೆ ಬಲಿಯಾದರು. ಈ ಮೂಲಕ ಆರ್‌ಸಿಬಿ ಎದುರು ಕೆಕೆಆರ್ ಒಂದು ರನ್‌ಗಳ ಜಯ ಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications