IPL 2025 KKR vs RCB: ಆರ್‌ಸಿಬಿಗೆ 175 ರನ್ ಗುರ ನೀಡಿದ ಕೆಕೆಆರ್
18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಮಾಡಿತು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಆರಂಭದಲ್ಲಿ ಅಬ್ಬರಿಸಿದ್ರೂ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 174 ರನ್ ಸೇರಿಸಿತು. ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ನಾಯಕ ಅಜಿಂಕ್ಯ ರಹಾನೆ ಅಮೂಲ್ಯ ಕಾಣಿಕೆ ನೀಡಿದರು.
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ತನ್ನದಾಗಿಸಿಕೊಂಡಿದೆ. ನಾಯಕ ರಜತ್ ಪಟಿದಾರ್ ನಿರ್ಧಾರವನ್ನು ಆರಂಭದಲ್ಲಿ ಬೌಲರ್‌ಗಳು ಸರಿ ಎಂದು ನಿರ್ಧರಿಸಿದರು. ಈ ವೇಳೆ ಕ್ವಿಂಟನ್ ಡಿಕಾಕ್ ಅವರನ್ನು ಜೋಶ್ ಹ್ಯಾಜಲ್‌ವುಡ್ ಅವರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು.

ಮೊದಲ ಓವರ್‌ನಲ್ಲೇ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ ಹಾಗೂ ಸುನಿಲ್ ನರೈನ್ ಆಧಾರವಾದರು. ಈ ಜೋಡಿ ಪವರ್ ಪ್ಲೇನಲ್ಲಿ ಪವರ್‌ಫುಲ್ ಆರಂಭವನ್ನು ಆಡಿತು. ಈ ಜೋಡಿ ಪವರ್ ಪ್ಲೇನಲ್ಲಿ ಕೆಕೆಆರ್ 60 ರನ್ ಸೇರಿಸಿ ಸುಸ್ಥಿತಿಯಲ್ಲಿತ್ತು. ಅಜಿಂಕ್ಯ ರಹಾನೆ ತಮ್ಮ ನೈಜ್ಯ ಆಟವನ್ನು ಆಡಿ ತಂಡದ ಮೊತ್ತವನ್ನು ಹಿಗ್ಗಿಸುತ್ತಾ ಸಾಗಿದರು.
ಕೆಕೆಆರ್ ಮೊದಲ 10 ಓವರ್‌ಗಳಲ್ಲಿ ಸ್ಫೊಟಕ ಬ್ಯಾಟಿಂಗ್ ನಡೆಸಿತು. ಪರಿಣಾಮ ಈ ವೇಳೆ 107 ರನ್ ಸೇರಿಸಿ 2 ವಿಕೆಟ್ ಕಳೆದುಕೊಂಡಿತು. ಆರಂಭಿಕ ಸುನಿಲ್ ನರೈನ್ ಅವರನ್ನು ರಸಿಕ್ ಅವರು ಪೆವೆಲಿಯನ್‌ಗೆ ಕಳುಹಿಸುವಲ್ಲಿ ಸಫಲರಾದರು. ಸುನಿಲ್ ನರೈನ್ ಹಾಗೂ ಅಜಿಂಕ್ಯ ಜೋಡಿ ಎರಡನೇ ವಿಕೆಟ್‌ಗೆ 103 ರನ್‌ಗಳ ಜೊತೆಯಾಟವನ್ನು ನೀಡಿತು. ನರೈನ್ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ಔಟ್ ಆದರು.
ಅಜಿಂಕ್ಯ ಅರ್ಧಶತಕ
ನಾಯಕ ಅಜಿಂಕ್ಯ ರಹಾನೆ ಕೆಕೆಆರ್ ಪರ ಅಮೋಘ ಇನಿಂಗ್ಸ್ ಕಟ್ಟಿದರು. ಚುಟುಕು ಕ್ರಿಕೆಟ್‌ನಲ್ಲಿ ತಮ್ಮದೇ ಸ್ಟೈಲ್‌ನಲ್ಲಿ ಬ್ಯಾಟ್ ಮಾಡಿದ ರಹಾನೆ ಅಬ್ಬರಿಸಿದರು. ಇವರು 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 56 ರನ್ ಬಾರಿಸಿ, ಕೃನಾಲ್ ಪಾಂಡ್ಯ ತೋಡಿದ ಖೆಡ್ಡಾಗೆ ಬಲಿಯಾದರು.
ಉಪನಾಯಕ ವೆಂಕಟೇಶ್ ಅಯ್ಯರ್ 6 ರನ್‌ಗಳಿಗೆ ಆಟ ಮುಗಿಸಿದರು. ಅಂಗ್‌ಕ್ರಿಶ್ ರಘುವಂಶಿ 30 ರನ್ ಬಾರಿಸಿದ್ರು. ರಿಂಕು ಸಿಂಗ್ 12 ರನ್‌ಗಳಿಗೆ ಆಟ ಮುಗಿಸಿದ್ರು. ಕೆಳ ಮಧ್ಯಮ ಕ್ರಮಾಂಕದ ಆಟಗಾರರು ತಮ್ಮ ಮೇಲಿನ ಜವಾಬ್ದಾರಿಯನ್ನು ಅರಿತು ಆಡುವಲ್ಲಿ ವಿಫಲರಾದರು.
ಕೃನಾಲ್‌ಗೆ 3 ವಿಕೆಟ್
ಕೊನೆಯ 10 ಓವರ್‌ಗಳಲ್ಲಿ ಬೆಂಗಳೂರು ತಂಡ ಬಿಗುವಿನ ದಾಳಿ ನಡೆಸಿತು. ಈ ವೇಳೆ ಆರ್‌ಸಿಬಿ 67 ರನ್ ನೀಡಿ 6 ವಿಕೆಟ್ ಕಬಳಿಸಿತು. ಕೃನಾಲ್ ಪಾಂಡ್ಯ 29 ರನ್ ನೀಡಿ 3 ವಿಕೆಟ್ ಕಬಳಿಸಿದ್ರು. ಜೋಶ್ ಹ್ಯಾಜಲ್‌ವುಡ್ 2 ವಿಕೆಟ್ ಕಿತ್ತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications