KKR vs RCB: ನಂಬಲು ಸಾಧ್ಯವಾಗದಂಥಾ ಪ್ರದರ್ಶನ: ಶಾರ್ದೂಲ್ ಆಟಕ್ಕೆ ಆರ್‌ಸಿಬಿ ನಾಯಕ ಫಾಫ್ ಮೆಚ್ಚುಗೆ
ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಶಾರ್ದೂಲ್ ಠಾಕೂರ್ ನೀಡಿದ ಬ್ಯಾಟಿಂಗ್ ಪ್ರದರ್ಶನ ಆರ್‌ಸಿಬಿ ಅಭಿಮಾನಿಗಳಿಗೆ ಅಕ್ಷರಶಃ ಆಘಾತವನ್ನುಂಟು ಮಾಡಿದೆ. ಸುಸ್ಥಿತಿಯಲ್ಲಿದ್ದ ಆರ್‌ಸಿಬಿ ತಂಡದ ಎಲ್ಲಾ ಲೆಕ್ಕಾಚಾರವನ್ನು ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಮೂಲಕ ತಲೆಕೆಳಗಾಗಿಸಿದರು. ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಶಾರ್ದುಲ್ ಠಾಕೂರ್ ಬ್ಯಾಟಿಂಗ್ ಹಾಗೂ ವರುಣ್ ಚಕ್ರವರ್ತಿ ಮತ್ತು ಸುಯಾಶ್ ಶರ್ಮಾ ಅವರ ಅದ್ಭುತ ಬೌಲಿಂಗ್‌ನ ಕಾರಣದಿಂದಾಗಿ ಆರ್‌ಸಿಬಿ ತಂಡ 81 ರನ್‌ಗಳ ಅಂತರದ ಸೋಲು ಕಂಡಿತು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಈ ಆವೃತ್ತಿಯ ಮೊದಲ ಗೆಲುವಿ ಸಾಧಿಸಿದರೆ ಆರ್‌ಸಿಬಿ ಮೊದಲ ಸೋಲಿನ ರುಚಿ ಅನುಭವಿಸಿದೆ.

"ಬೌಲಿಂಗ್‌ನಲ್ಲಿ ನಾವು ಉತ್ತಮವಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದೆವು. 13 ಓವರ್‌ಗಳ ವೇಳೆಗೆ 100 ರನ್‌ಗಳಿಗೆ 5 ವಿಕೆಟ್ ಪಡೆದುಕೊಂಡಿದ್ದೆವು. ಅಂಥಾ ಪಿಚ್‌ನಲ್ಲಿ 20-25 ರನ್ ಹೆಚ್ಚು ಕೊಡಬಹುದಾಗಿತ್ತು. ಆದರೆ ಬಳಿಕ ಬಂದ ಶಾರ್ದುಲ್ ಠಾಕೂರ್ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು. ನಂತರ ಕೆಕೆಆರ್‌ನ ಲೆಗ್ ಸ್ಪಿನ್ನರ್‌ಗ:ಇ ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡಿದರು" ಎಂದಿದ್ದಾರೆ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್.
"ಅವರು ನಮ್ಮ ವಿರುದ್ಧ ಸಂಪೂರ್ಣವಾಗಿ ಮೇಲುಗೈ ಸಾಧಿಸಿದರು. ನರೈನ್ ಹಾಗೂ ಚಕ್ರವರ್ತಿ ನಮಗೆ ಆಘಾತ ನೀಡಿದರು. ಲೆಗ್ ಸ್ಪಿನ್ನರ್ ಅಥವಾ ಮಿಸ್ಟ್ರಿ ಸ್ಪಿನ್ನರ್‌ಗಳ ವಿಶೇಷತೆಯೇ ಅದು. ಅದು ಬ್ಯಾಟಿಂಗ್‌ಗೆ ಉತ್ತಮವಾದ ಪಿಚ್ ಆಗಿತ್ತು. ಆದರೆ ನಮ್ಮ ಬ್ಯಾಟಿಂಗ್ ಪ್ರದರ್ಶನ ಸಾಧಾರಣವಾಗಿತ್ತು. ಇಂಥಾ ಪಂದ್ಯಗಳಲ್ಲಿ ಸೋಲು ಕಂಡರೂ ಪೈಪೋಟಿ ನಿಕಟವಾಗಿರಬೇಕಾಗಿತ್ತು. ಕನಿಷ್ಠ 160 ರನ್‌ಗಳನ್ನಾದರೂ ನಾವು ಗಳಿಸಬೇಕಿತ್ತು" ಎಂದಿದ್ದಾರೆ ಆರ್‌ಸಿಬಿ ನಾಯಕ ಫಾಫ್.
ಆರಂಭದಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಿದರೂ ಅದರ ಲಾಭ ಪಡೆಯಲು ವಿಫಲವಾದ ಆರ್‌ಸಿಬಿ ತಂಡಕ್ಕೆ ಆರಂಭದಲ್ಲಿ ಆಘಾತ ನೀಡಿದ್ದು ಶಾರ್ದುಲ್ ಠಾಕೂರ್. ಬ್ಯಾಟಿಂಗ್‌ನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಶಾಕ್ ನೀಡಿದ ಶಾರ್ದೂಲ್ ತಂಡದ ಮೊತ್ತ 200ರ ಗಡಿ ದಾಟಲು ಕಾರಣವಾದರು.
ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ಗೆ ಇಳಿದಾಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 89 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಲ್ಲಿಂದ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಕೆಕೆಆರ್ ಪರವಾಗಿ ಶಾರ್ದೂಲ್ ಠಾಕೂರ್ ಅಬ್ಬರಿಸಿದರು. 29 ಎಸೆತಗಳನ್ನು ಎದುರಿಸಿದ ಠಾಕೂರ್ ಬರೊಬ್ಬರಿ 68 ರನ್‌ಗಳನ್ನು ಬಾರಿಸಿ ಅಬ್ಬರಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ 7ನೇ ಕ್ರಮಾಂದಲ್ಲಿ ಬಂದ ಎರಡನೇ ಅತಿ ಹೆಚ್ಚಿನ ಸ್ಕೋರ್ ಎಂಬುದು ಗಮನಾರ್ಹ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications