Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR vs RR: ಕೋಲ್ಕತ್ತಾ ಗೆಲುವಿಗೆ ಕಾರಣವಾಗಿದ್ದು ರಿಂಕು ಬ್ಯಾಟಿಂಗಾ, ವರುಣ್‌ ಬೌಲಿಂಗಾ?

ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ತಂಡಗಳ ನಡುವೆ ಬಿಗ್ ಫೈಟ್ ನಡೆಯಿತು. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಜಯದ ಲಯವನ್ನು ಕಂಡುಕೊಳ್ಳುವ ಕನಸಿನೊಂದಿಗೆ ಕೆಕೆಆರ್‌ ಕಣಕ್ಕೆ ಇಳಿಯಿತು. ಮೊದಲ ಜಯದ ನಿರೀಕ್ಷೆಯಲ್ಲಿ ಕೆಕೆಆರ್ ಅಭಿಮಾನಿಗಳು ಸಹ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

ಟಾಸ್‌ ಗೆದ್ದ ಆರ್‌ಆರ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ನಾಯಕ ರಿಯಾನ್ ಪರಾಗ್ ನಿರ್ಧಾರವನ್ನು ವೈಭವ್ ಸೂರ್ಯವಂಶಿ (46) ಹಾಗೂ ಯಶಸ್ವಿ ಜೈಸ್ವಾಲ್ (39) ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಬಳಿಕ ಬಂದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರ್‌ಆರ್‌ ಬ್ಯಾಟರ್‌ಗಳಿಗೆ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ ಬಹುವಾಗಿ ಕಾಡಿದರು.

KKR vs RR

ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದ ಸ್ಪಿನ್ ಬೌಲರ್‌ ವರುಣ್‌ ಚಕ್ರವರ್ತಿ ಲಯಕ್ಕೆ ಮರಳಿದ್ದಾರೆ. ಇವರು ನಾಲ್ಕು ಓವರ್ ಬೌಲ್ ಮಾಡಿ ಕೇವಲ 14 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಯುವ ವೇಗದ ಬೌಲರ್ ಕಾರ್ತಿಕ್ ತ್ಯಾಗಿ 22 ರನ್‌ ನೀಡಿ 3 ವಿಕೆಟ್‌ ಪಡೆದರು.

156 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಕೆಕೆಆರ್‌ ಆರಂಭಿಕ ಆಟಗಾರರಾದ ಟಿಮ್ ಸಿಫರ್ಟ್‌ ಹಾಗೂ ಅಜಿಂಕ್ಯ ರಹಾನೆ ಜವಾಬ್ದಾರಿ ಮರೆತರು. ಅಂಗ್‌ಕ್ರಿಷ್ ರಘುವಂಶಿ (10), ಕ್ಯಾಮರೂನ್ ಗ್ರೀನ್ (27), ರೋವ್‌ಮನ್ ಪೊವೆಲ್ (23) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. 85 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಕೆಕೆಆರ್ ಸಂಕಷ್ಟದಲ್ಲಿತ್ತು. ಈ ಆಟವನ್ನು ನೋಡಿದ ಬಳಿಕ ಕೆಕೆಆರ್‌ಗೆ ಸೋಲಿನ ಆತಂಕ ಎದುರಾಗಿತ್ತು.

ಪಂದ್ಯಕ್ಕೆ ತಿರುವು ನೀಡಿದ್ದು ಏನು?

ಆದರೆ ಭರವಸೆಯ ಬ್ಯಾಟರ್ ರಿಂಕು ಸಿಂಗ್, ಅನುಕೂಲ್ ರಾಯ್ ಜೋಡಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ರಾಜಸ್ಥಾನ ಬೌಲರ್‌ಗಳು ವಿಫಲರಾದರು. ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜೋಡಿ 37 ಎಸೆತಗಳಲ್ಲಿ ಅಜೇಯ 76 ರನ್‌ ಸಿಡಿಸಿದರು. ಈ ಜೋಡಿ ಕೆಕೆಆರ್‌ ತಂಡ ಗೆಲುವಿನ ನಗೆ ಬೀರಲು ಸಹಾಯ ಮಾಡಿತು. ಪರಿಣಾಮ ಕೆಕೆಆರ್‌ 19ನೇ ಆವೃತ್ತಿ ಐಪಿಎಲ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿತು. ರಿಂಕು ಸಿಂಗ್ 155ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಇವರು 34 ಎಸೆತಗಳಲ್ಲಿ ಅಜೇಯ 53 ರನ್‌ ಸಿಡಿಸಿದರು. ಅನುಕೂಲ್ ರಾಯ್ 181ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಮಾಡಿದರು.

KKR vs RR

ಸಂಕ್ಷಿಪ್ತ ಸ್ಕೋರ್‌

ರಾಜಸ್ಥಾನ್ ರಾಯಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್; ವೈಭವ್ ಸೂರ್ಯವಂಶಿ 46, ಯಶಸ್ವಿ ಜೈಸ್ವಾಲ್‌ 39, ವರುಣ್‌ ಚಕ್ರವರ್ತಿ 14ಕ್ಕೆ 3, ಕಾರ್ತಿಕ್ ತ್ಯಾಗಿ 22ಕ್ಕೆ 3

ಕೋಲ್ಕತ್ತಾ ನೈಟ್ ರೈಡರ್ಸ್ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್; ರಿಂಕು ಸಿಂಗ್ ಅಜೇಯ 53, ಅನುಕೂಲ್ ರಾಯ್ ಅಜೇಯ 29, ರವೀಂದ್ರ ಜಡೇಜಾ 8ಕ್ಕೆ 2

ಪಂದ್ಯದ ಫಲಿತಾಂಶ: ಕೆಕೆಆರ್‌ಗೆ ಜಯ

Story first published: Sunday, April 19, 2026, 20:47 [IST]
Other articles published on Apr 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+