Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೂಪರ್ ಮ್ಯಾನ್‌ ಕ್ಯಾಚ್‌ ಪಡೆದ ವರುಣ್‌ ಚಕ್ರವರ್ತಿ: ವಿಡಿಯೊ ವೈರಲ್‌

ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್‌) ವಿರುದ್ಧ ಅಭಿಷೇಕ್‌ ಶರ್ಮಾ ಅಬ್ಬರ ನಡೆಸಿದರು. ಆದರೆ ಇವರ ಆಟಕ್ಕೆ ಬ್ಲೆಸಿಂಗ್ ಮುಜರಬಾನಿ ಬ್ರೇಕ್ ಹಾಕಿದರು. ವರುಣ್‌ ಚಕ್ರವರ್ತಿ ಅವರು ಹಿಡಿದ ವಿವಾದಾತ್ಮಕ ಕ್ಯಾಚ್‌ಗೆ ಬಲಿಯಾದರು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಎಚ್‌) ತಂಡದ ಆರಂಭ ಭರ್ಜರಿಯಾಗಿತ್ತು. ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೊಡಿ ಪವರ್ ಪ್ಲೇನ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದರು. ಈ ಜೋಡಿಯ ಆಟಕ್ಕೆ ಕಾರ್ತಿಕ್ ತ್ಯಾಗಿ ಬ್ರೇಕ್ ಹಾಕಿದರು. ಇವರು ಟ್ರಾವಿಸ್‌ ಹೆಡ್‌ಗೆ ಖೆಡ್ಡಾ ತೋಡಿದರು. ಇನ್ನು ಬ್ಲಿಸಿಂಗ್ ಮುಜರಬಾನಿ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಅಭಿಷೇಕ್ ಶರ್ಮಾ, ಡೀಪ್ ನಲ್ಲಿ ವರುಣ್ ಚಕ್ರವರ್ತಿ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು.

KKR vs SRH

ಆಗಿದ್ದೇನು?

8 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 110 ರನ್‌ ಬಾರಿಸಿದ್ದ ಎಸ್‌ಆರ್‌ಎಚ್‌ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿತ್ತು. ಈ ವೇಳೆ ಜಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಬಿಗುವಿನ ದಾಳಿ ನಡೆಸಿದರು. ಎರಡನೇ ಎಸೆತದಲ್ಲಿ ಇಶಾನ್‌ ಕಿಶನ್‌ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರೆ, ನಾಲ್ಕನೇ ಎಸೆತದಲ್ಲಿ ಅಭಿಷೇಕ್‌ ಅವರಿಗೆ ಖೆಡ್ಡಾ ತೋಡಿದರು. ಮುಜರಬಾನಿ ಎಸೆತವನ್ನು ಅಭಿಷೇಕ್ ಶರ್ಮಾ ಡೀಪ್‌ ಸ್ಕ್ವೇರ್‌ ಲೆಗ್‌ ಮೇಲೆ ಬಾರಿಸಲು ಮುಂದಾದರು. ಆದರೆ ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ವರುಣ್ ಚಕ್ರವತ್ತಿ ಅಮೋಘ ಕ್ಯಾಚ್ ಪಡೆದರು.

ವರುಣ್ ಚಕ್ರವರ್ತಿ ಅವರು ಹಿಡಿದ ಕ್ಯಾಚ್‌ ಅನ್ನು ಪರಿಶೀಲಿಸಲು ಫೀಲ್ಡ್ ಅಂಪೈರ್ ಮೂರನೇ ಅಂಪೈರ್‌ಗೆ ತಿಳಿಸಿದರು. ಮೂರನೇ ಅಂಪೈರ್‌ ವಿವಿಧ ಆಂಗಲ್‌ಗಳಲ್ಲಿ ದೃಶ್ಯವನ್ನು ನೀಡಿದರು. ಕೊನೆಗೆ ಔಟ್ ಎಂದು ತಿಳಿಸಿದರು. ಥರ್ಡ್ ಅಂಪೈರ್ ಎಷ್ಟೇ ಸಲ ರಿಪ್ಲೇ ಚೆಕ್ ಮಾಡಿದ್ರೂ ಅದು ಗೊಂದಲವಾಗಿಯೇ ಇತ್ತು. ಒಂದು ಆಂಗಲ್‌ನಲ್ಲಿ ಬಾಲ್ ನೆಲಕ್ಕೆ ಬಡಿದು ಮೇಲೆ ಬಂದ ಹಾಗೆ ಕಂಡ್ರೂ, ಅದು ಕನ್ಫರ್ಮ್ ಆಗಿರಲಿಲ್ಲ. ಅಭಿಷೇಕ್ ಶರ್ಮಾ ಔಟ್ ಆದ ವಿಷಯದ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಸನ್‌ ಫ್ಯಾನ್ಸ್‌ಗೆ ಈ ನಿರ್ಧಾರದಿಂದ ತುಂಬಾ ಬೇಸರ ತಂದರೆ, ಕೆಕೆಆರ್‌ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

Story first published: Thursday, April 2, 2026, 22:14 [IST]
Other articles published on Apr 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+