6,0,6,4,4,4: ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್
19ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಎಲ್ಲರ ಕಣ್ಣುಗಳು ಹಲವು ಯುವ ಆಟಗಾರರ ಮೇಲೆ ನೆಟ್ಟಿವೆ. ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ಅಭಿಷೇಕ್ ಶರ್ಮಾ. ಮೊದಲ ಪಂದ್ಯದಲ್ಲಿ ರನ್ ಬರವನ್ನು ಅನುಭವಿಸಿದ್ದ ಅಭಿಷೇಕ್ ಎರಡನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.
ಟಾಸ್ ಸೋತರೂ ಕೆಕೆಆರ್ ವಿರುದ್ಧ ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆಯಿತು. ಸನ್ ತಂಡದ ಪರ ಅಭಿಷೇಕ್ ಶರ್ಮಾ ಟ್ರಾವಿಸ್ ಹೆಡ್ ಜೋಡಿ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತುಕೊಂಡರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ ಬಳಿಕ ಗೇರ್ ಶಿಫ್ಟ್ ಮಾಡಿದರು.

ಇನಿಂಗ್ಸ್‌ನ ಐದನೇ ಓವರ್‌ನ್ನು ವರುಣ್ ಚಕ್ರವರ್ತಿ ಬೌಲಿಂಗ್ ಮಾಡಲು ಮುಂದಾದರು. ವರುಣ್ ಅವರ ಮೊದಲ ಎಸೆತವನ್ನು ಅಭಿಷೇಕ್ ಲಾಂಗ್ ಆನ್ ಮೇಲಿನಿಂದ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಎರಡನೇ ಎಸೆತದಲ್ಲಿ ವರುಣ್ ಯಾವುದೇ ರನ್‌ಗಳನ್ನು ನೀಡಲಿಲ್ಲ. ಮೂರನೇ ಎಸೆತವನ್ನು ವರುಣ್ ಶಾರ್ಟ್ ಎಸೆದರು. ಇದನ್ನು ಮೊದಲೇ ಗುರುತಿಸಿದ್ದ ಅಭಿಷೇಕ್ ಶರ್ಮಾ ಮತ್ತೊಂದು ಆಕರ್ಷಕ ಸಿಕ್ಸರ್ ಸಿಡಿಸಿ ಮಿಂಚಿದರು.
ವರುಣ್ ಎಸೆದ ನಾಲ್ಕನೇ ಎಸೆತವನ್ನು ಎಕ್ಸ್‌ಟ್ರಾ ಕವರ್ ಮೇಲಿನಿಂದ ಬೌಂಡರಿ ಬಾರಿಸಿ ಮಿಂಚಿದರು. ನಂತರದಲ್ಲಿ ಒಂದು ವೈಡ್ ಎಸೆದರು. ವರುಣ್ ಎಸೆದ ನಾಲ್ಕನೇ ಎಸೆತವನ್ನು ಅಭಿಷೇಕ್ ಪಾಯಿಂಟ್ ಹಾಗೂ ಕವರ್ ಮೇಲಿನಿಂದ ಸಿಕ್ಸರ್ ಬಾರಿಸಿ ಪಾಯಿಂಟ್ ಹಾಗೂ ಕವರ್ ಮಧ್ಯದಲ್ಲಿ ಬೌಂಡರಿ ಬಾರಿಸಿದರು. ಇದೇ ಕ್ಷೇತ್ರದಲ್ಲಿ ಆರನೇ ಎಸೆತದಲ್ಲೂ ಬೌಂಡರಿ ಬಾರಿಸಿ ಮಿಂಚಿದರು. ಈ ಮೂಲಕ ಅಭಿಷೇಕ್ ಶರ್ಮಾ ಒಂದೇ ಓವರ್‌ನಲ್ಲಿ 24 ರನ್ ಬಾರಿಸಿದರು. ವರುಣ್ ಚಕ್ರವರ್ತಿ ವೈಡ್ ಸೇರಿದಂತೆ 25 ರನ್ ನೀಡಿ ಕೈ ಸುಟ್ಟುಕೊಂಡರು. ಐಪಿಎಲ್‌ನಲ್ಲಿ ವರುಣ್ ಎರಡನೇ ಬಾರಿ 25 ರನ್ ನೀಡಿದ ಕಳಪೆ ದಾಖಲೆ ತಮ್ಮದಾಗಿಸಿಕೊಂಡರು.
ಭರ್ಜರಿ ಆರಂಭ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ ಆರಂಭವನ್ನು ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 84 ರನ್ ಸೇರಿಸಿತು. ಈ ವೇಳೆ ಟ್ರಾವಿಸ್ ಹೆಡ್ ಇಲ್ಲದ ಹೊಡೆತಕ್ಕೆ ಮುಂದಾಗಿ 46 ರನ್‌ಗಳಿಗೆ ಔಟ್ ಆದರು. ಅಭಿಷೇಕ್ ಶರ್ಮಾ 228 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ 21 ಎಸೆತಗಳಲ್ಲಿ 48 ರನ್ ಸಿಡಿಸಿದರು. ಈ ವೇಳೆ 4 ಬೌಂಡರಿ, 4 ಸಿಕ್ಸರ್ ಸಿಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications