For Quick Alerts
ALLOW NOTIFICATIONS  
For Daily Alerts
 

Dream 11 Team: ಹೈದರಾಬಾದ್‌, ಕೆಕೆಆರ್‌ ತಂಡದಲ್ಲಿ ಯಾರನ್ನು ಆಯ್ಕೆ ಮಾಡಬೇಕು?

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಪಂದ್ಯದಲ್ಲಿ ಗುರುವಾರ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್‌ ರೈಡರ್ಸ್ ಹಾಗೂ ಮಾಜಿ ಚಾಂಪಿಯನ್‌ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಪ್ರಸಕ್ತ ಐಪಿಎಲ್‌ನಲ್ಲಿ ಉಭಯ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿದ್ದು, 1 ಗೆಲುವು ದಾಖಲಿಸಿವೆ. ಹೀಗಾಗಿ ಗುರುವಾರ ನಡೆಯುವ ಪಂದ್ಯ ಎರಡೂ ತಂಡಗಳಿಗೆ ಮಹತ್ವದಾಗಿದೆ. ಈ ವೇಳೆ ನಿಮ್ಮ ತಂಡವನ್ನು ನೀವು ಮಾಡಲು ಮುಂದಾಗಿದ್ದರೆ ಈ ಎಲ್ಲ ಆಟಗಾರರು ನಿಮ್ಮ ತಂಡದಲ್ಲಿ ಇದ್ದರೆ ಒಳ್ಳೆಯದು.

ಸನ್‌ರೈಸರ್ಸ್‌ ತಂಡ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಆದರೆ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದೆ. ಈ ವೇಳೆ ತಂಡದ ಸ್ಟಾರ್ ಆಟಗಾರರು ಕೆಚ್ಚೆದೆಯ ಆಟವನ್ನು ಆಡಬೇಕಿದೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ಯಾರನ್ನು ತಂಡದಲ್ಲಿ ಇಟ್ಟುಕೊಳ್ಳುವುದು ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಉತ್ತರ ಇಲ್ಲಿದೆ.

KKR vs SRH Dream11 Prediction Best Picks for the IPL 2025 Clash

ವಿಕೆಟ್ ಕೀಪರ್ಸ್

ಎರಡೂ ತಂಡದಲ್ಲೂ ಸ್ಟಾರ್ ವಿಕೆಟ್‌ ಕೀಪರ್‌ಗಳು ಇದ್ದಾರೆ. ಕೆಕೆಆರ್‌ ತಂಡದ ವಿಕೆಟ್‌ ಕೀಪರ್‌ ಕ್ವಿಂಟನ್ ಡಿಕಾಕ್‌ ಆರ್ಭಟಿಸುವ ಆಟಗಾರ. ಇನ್ನು ಎಸ್‌ಆರ್‌ಎಚ್‌ ತಂಡದ ಹ್ಯಾನ್ರಿಕ್‌ ಕ್ಲಾಸೆನ್ ಹಾಗೂ ಪ್ರಸಕ್ತ ಐಪಿಎಲ್‌ನ ಮೊದಲ ಶತಕ ಸಿಡಿಸಿರುವ ಇಶಾನ್‌ ಕಿಶನ್ ಅವರನ್ನು ತಂಡದಲ್ಲಿ ಹಾಕಿಕೊಳ್ಳುವುದು ಬೆಸ್ಟ್‌. ಅಲ್ಲದೆ ಈ ಮೂವರಲ್ಲಿ ಒಬ್ಬರಿಗೆ ಉಪನಾಯಕನ ಸ್ಥಾನವನ್ನು ನೀಡುವುದು ಒಳ್ಳೆಯ ಆಯ್ಕೆ.

ಬ್ಯಾಟರ್ಸ್‌

ಕೆಕೆಆರ್ ತಂಡದ ಪರ ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದು ಭರವಸೆ ಮೂಡಿಸಿದ್ದಾರೆ. ಇನ್ನು ಎಸ್‌ಆರ್‌ಎಚ್‌ ಪರ ಅನುಭವಿ ಟ್ರಾವಿಸ್‌ ಹಾಗೂ ಅನಿಕೇತ್ ವರ್ಮಾ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡರೆ ಉತ್ತಮ. ಟ್ರಾವಿಸ್‌ ಹೆಡ್‌ ಬಿರುಸಿನ ಆಟಕ್ಕೆ ಫೇಮಸ್.

KKR vs SRH Dream11 Prediction Best Picks for the IPL 2025 Clash

ಆಲ್‌ರೌಂಡರ್ಸ್‌

ಎರಡೂ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಈ ವೇಳೆ ಸುನಿಲ್‌ ನರೈನ್‌ ಮೊದಲ ಆಯ್ಕೆಯ ಆಟಗಾರ. ಇವರು ಕೆಕೆಆರ್ ಪರ ಇನಿಂಗ್ಸ್ ಆರಂಭಿಸುವುದಲ್ಲದೆ ವಿಕೆಟ್‌ ಬೇಟೆ ನಡೆಸುವ ಬೌಲರ್. ಇನ್ನು ಎಸ್‌ಆರ್‌ಎಚ್‌ ಪರ ಇನಿಂಗ್ಸ್ ಆರಂಭಿಸುವ ಅಭಿಷೇಕ್‌ ಶರ್ಮಾ ಸಹ ಸ್ಪಿನ್ ಬೌಲಿಂಗ್ ನಡೆಸುವ ಕ್ಷಮತೆ ಹೊಂದಿದ್ದಾರೆ. ಎಸ್‌ಆರ್‌ಎಚ್‌ ತಂಡದ ಸ್ಟಾರ್ ಆಟಗಾರ ನಿತೀಶ್‌ ಕುಮಾರ್ ರೆಡ್ಡಿ ಅವರನ್ನು ತಂಡದಲ್ಲಿ ಹಾಕಿಕೊಳ್ಳುವುದು ಒಳ್ಳೆಯದು. ಈ ಮೂವರಲ್ಲಿ ಒಬ್ಬರಿಗೆ ನಾಯಕ ಸ್ಥಾನ ನೀಡಿದರೆ ಬೆಸ್ಟ್.

ಬೌಲರ್ಸ್‌

ಸನ್‌ರೈಸರ್ಸ್‌ ತಂಡದಲ್ಲಿ ಸ್ಟಾರ್ ಬೌಲರ್‌ಗಳು ಇದ್ದಾರೆ. ಇದರಲ್ಲಿ ಶಮಿ ಹಾಗೂ ಪ್ಯಾಟ್‌ ಕಮಿನ್ಸ್‌ ಇಬ್ಬರೂ ತಮ್ಮ ಅನುಭವ ತಂಡಕ್ಕೆ ಧಾರೆ ಎರೆಯಬಲ್ಲರು. ಆದರೆ ಪ್ರಸಕ್ತ ಫಾರ್ಮ್ ನೋಡಿ ಪ್ಯಾಟ್‌ ಕಮಿನ್ಸ್‌ರನ್ನು ತಂಡದಲ್ಲಿ ಇಟ್ಟುಕೊಳ್ಳುವುದು ಒಳಿತು. ಇನ್ನು ಕೆಕೆಆರ್‌ ತಂಡದ ಮಿಸ್ಟ್ರಿ ಸ್ಪಿನ್ ಬೌಲರ್ ಖ್ಯಾತಿ ವರುಣ್ ಚಕ್ರವರ್ತಿ ಪಿರ್ಕಿ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಇವರು ಸಹ ಬಹು ಆಯ್ಕೆಯ ಆಟಗಾರ.

Story first published: Thursday, April 3, 2025, 8:14 [IST]
Other articles published on Apr 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+