Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024 Final: ಕೆಕೆಆರ್ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಎಸ್‌ಆರ್‌ಹೆಚ್; ಟ್ರೋಫಿ ಗೆಲ್ಲುವ ಸನಿಹದಲ್ಲಿ ಕೋಲ್ಕತ್ತಾ

ಮೇ 26 ಭಾನುವಾರ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್‌ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್‌) ಎದುರು ಸನ್‌ ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಹೆಚ್‌) ಸಾಧಾರಣ ಮೊತ್ತ ಕಲೆ ಹಾಕಿದೆ.

ಕೆಕೆಆರ್‌ ಸಂಘಟಿತ ಮಾರಕ ಬೌಲಿಂಗ್‌ ದಾಳಿಗೆ ಬಲಿಷ್ಠ ಹೈದರಾಬದ್‌ ತಂಡ ತತ್ತರಿಸಿ ಹೋಗಿದೆ. ಕೇವಲ 18.3 ಓವರ್‌ಗಳಲ್ಲಿ ಆಲೌಟ್‌ ಆಗುವ ಮೂಲಕ ಹೈದರಾಬಾದ್‌ 113 ರನ್‌ ಗಳಿಸಿದೆ. ಸುಲಭ ಗುರಿ ಪಡೆದಿರುವ ಕೆಕೆಆರ್‌ ಫೈನಲ್‌ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಹೆಚ್ಚಿದೆ.

KKR vs SRH Final IPL 2024 Kolkata Knight Riders vs Sunrisers Hyderabad First innings Report

ಟಾಸ್‌ ಗೆದ್ದು ಮೊದಲು ಹೈದರಾಬಾದ್‌ ಬ್ಯಾಟಿಂಗ್‌ ಶುರು ಮಾಡಿತು. ಎಸ್‌ಆರ್‌ಹೆಚ್‌ ಪರ ಸ್ಪೋಟಕ ಆರಂಭಿಕ ಜೋಡಿ ಟ್ರಾವಿಸ್‌ ಹೆಡ್‌ ಹಾಗು ಅಭಿಷೇಕ್‌ ಶರ್ಮಾ ಬೃಹತ್‌ ರನ್‌ ಹೊಳೆ ಹರಿಸುವ ಯೋಚನೆಯೊಂದಿಗೆ ಬಂದಿದರು.

ಆದರೆ ಕೆಕೆಆರ್‌ ಬೌಲಿಂಗ್‌ ದಾಳಿ ಎದುರಿಸಲು ಸಾಧ್ಯವಾಗದೆ ಟ್ರಾವಿಸ್‌ ಹೆಡ್‌ ಶೂನ್ಯಕ್ಕೆ ಔಟ್‌ ಆದರೆ, ಅಭಿಷೇಕ್‌ ಶರ್ಮಾ ಕೇವಲ 2 ರನ್‌ಗೆ ವಿಕೆಟ್‌ ಕಳೆದುಕೊಂಡು ನಿರಾಸೆ ಮೂಡಿಸಿದರು. ಬಳಿಕ ಮೂರನೇ ಕ್ರಮಾಂಕದ ಬಂದ ರಾಹುಲ್‌ ತ್ರಿಪಾಠಿ ಕೂಡ 9 ರನ್‌ಗೆ ಔಟ್‌ ಆದರು.

ಬಳಿಕ ಬಂದ ಹೈದರಾಬಾದ್‌ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ ನಲ್ಲಿ ನಿಂತು ರನ್‌ ಗಳಿಸಲು ಕೆಕೆಆರ್‌ ಬೌಲರ್ಸ್‌ ಬಿಡಲಿಲ್ಲ. ಐಡೆನ್ ಮಾರ್ಕ್ರಾಮ್ (20), ನಿತೀಶ್ ರೆಡ್ಡಿ (13) ಮತ್ತು ಹೆನ್ರಿಚ್ ಕ್ಲಾಸೆನ್ (16) ಮಧ್ಯಮ ಕ್ರಮಾಂಕದಲ್ಲಿ ಕುಸಿದ ಹೈದರಾಬಾದ್‌ಗೆ ಆಸರೆಯಾಗಲಿಲ್ಲ.

ಇನ್ನು ಕಳೆದ ಪಂದ್ಯ ರಾಜಸ್ಥಾನ ವಿರುದ್ಧ ಬೌಲಿಂಗ್‌ನಲ್ಲಿ ಮಿಂಚಿದ ಶಹಬಾಜ್ ಅಹ್ಮದ್ (8) ಈ ಬಾರಿ ಬ್ಯಾಟಿಂಗ್‌ನಲ್ಲಿ ಅಬ್ಬರ ತೋರಲಿಲ್ಲ. ಅಬ್ದುಲ್‌ ಸಮದ್‌ ಕೂಡ ಕೇವಲ 4 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ಕೊನೆಯಲ್ಲಿ ನಾಯಕ ಪ್ಯಾಟ್‌ ಕಮ್ಮಿನ್ಸ್‌ 24 ರನ್‌ ಹೊಡೆದು ಔಟ್‌ ಆದರು. ಜಯದೇವ್ ಉನದ್ಕತ್ 4 ರನ್‌ಗೆ ವಿಕೆಟ್‌ ಕಳೆದುಕೊಂಡರು.

ಕೋಲ್ಕತ್ತಾ ನೈಟ್‌ ರೈಡರ್ಸ್ ಸಂಘಟಿತ ಆಕ್ರಮಣಕಾರಿ ಬೌಲಿಂಗ್‌ ಪ್ರದರ್ಶನ ಕಂಡು ಬಂತು. ಆಂಡ್ರೆ ರಸೆಲ್ 3 ವಿಕೆಟ್‌ ಕಬಳಿಸಿ ಸಂಭ್ರಮಿಸಿದರು.

ಹರ್ಷಿತ್ ರಾಣಾ ಮತ್ತು ಮಿಚೆಲ್‌ ಸ್ಟಾರ್ಕ್‌ ತಲಾ 2 ವಿಕೆಟ್‌ ಉರಳಿಸಿದರು. ವೈಭವ್ ಅರೋರಾ, ವರುಣ್ ಚಕ್ರವರ್ತಿ ಹಾಗು ಸುನಿಲ್ ನರೈನ್ ತಲಾ 1 ವಿಕೆಟ್‌ ಪಡೆದರು.

Story first published: Sunday, May 26, 2024, 21:21 [IST]
Other articles published on May 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+