Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024 Final: ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿದ ಕೆಕೆಆರ್; ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಆರೆಂಜ್‌ ಆರ್ಮಿ

ಮೇ 26 ಭಾನುವಾರ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಮೆಗಾ ಫೈನಲ್‌ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಹೆಚ್‌) ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್‌) ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಕೆಕೆಆರ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

ಹೈದರಾಬಾದ್‌ ನೀಡಿದ 114 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್‌ 9.3 ಓವರ್‌ ಬಾಕಿ ಇರುವಂತೆ ಕೇವಲ 2 ವಿಕೆಟ್‌ ಕಳೆದುಕೊಂಡು ಗೆದ್ದು ಬೀಗಿದೆ. ಫೈನಲ್‌ನಲ್ಲಿ ಮುಗ್ಗರಿಸಿದ ಪ್ಯಾಟ್‌ ಕಮ್ಮಿನ್ಸ್‌ ನೇತೃತ್ವದ ಹೈದರಾಬಾದ್‌ ತಂಡ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.

KKR vs SRH Final IPL 2024 Kolkata Knight Riders win against Sunrisers Hyderabad

ಹೈದರಾಬಾದ್‌ ನೀಡಿದ 114 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್‌ 10 ಓವರ್‌ ಬಾಕಿ ಇರುವಂತೆ ಕೇವಲ 2 ವಿಕೆಟ್‌ ಕಳೆದುಕೊಂಡು ಗೆದ್ದು ಬೀಗಿದೆ. ಫೈನಲ್‌ನಲ್ಲಿ ಮುಗ್ಗರಿಸಿದ ಪ್ಯಾಟ್‌ ಕಮ್ಮಿನ್ಸ್‌ ನೇತೃತ್ವದ ಹೈದರಾಬಾದ್‌ ತಂಡ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಕೆಕೆಆರ್‌ ಪರ ರಹಮಾನುಲ್ಲಾ ಗುರ್ಬಾಜ್ ಮತ್ತು ಸುನಿಲ್ ನರೈನ್ ಇನ್ನಿಂಗ್ಸ್‌ ಆರಂಭಿಸಿದರು. ಸ್ಪೋಟಕ ಬ್ಯಾಟರ್‌ ಸುನಿಲ್‌ ನರೈನ್‌ 6 ರನ್‌ ಗಳಿಸಿ ಔಟ್‌ ಆದರು. ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ ಬಂದ ವೆಂಕಟೇಶ್‌ ಅಯ್ಯರ್‌ ಅಬ್ಬರ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು.

ಮತ್ತೊಂದೆಡೆ ಬೀರುಸಿನ ಬ್ಯಾಟಿಂಗ್‌ ಮಾಡಿದ ಗುರ್ಬಾಜ್ 39 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ಇತ್ತ ಹೈದರಾಬಾದ್ ಬೌಲರ್ಸ್‌ ಬೆಂಡೆತ್ತಿದ್ದ ವೆಂಕೆಟೇಶ್‌ ಅಯ್ಯರ್ ಅರ್ಧಶತಕ ಬಾರಿಸಿ ಮಿಂಚಿದರು.

ವೆಂಕೆಟೇಶ್‌ ಅಯ್ಯರ್ ಎದುರಿಸಿದ ಕೇವಲ 26 ಎಸೆತಗಳಲ್ಲಿ 3 ಸಿಕ್ಸರ್‌ ಮತ್ತು 4 ಬೌಂಡರಿ ಮೂಲಕ ಅಜೇಯ 52 ರನ್‌ ಹೊಡೆದು ಕೆಕೆಆರ್‌ ಗೆಲುವಿಗೆ ಕೊಡುಗೆ ನೀಡಿದರು. ಕೊನೆಯಲ್ಲಿ ನಾಯಕ ಶ್ರೇಯಸ್ ಅಯ್ಯರ್‌ ಅಜೇಯ 6 ರನ್‌ ಬಾರಿಸಿದರು.

ಹೈದರಾಬಾದ್‌ ಪರ ಶಹಬಾಜ್ ಅಹ್ಮದ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ 1 ವಿಕೆಟ್‌ ಪಡೆದರು.

ಎಸ್‌ಆರ್‌ಹೆಚ್‌ ಇನ್ನಿಂಗ್ಸ್‌

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಶುರು ಮಾಡಿದ ಹೈದರಾಬಾದ್‌, ಕೆಕೆಆರ್‌ ಸಂಘಟಿತ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿತು. ಕೇವಲ 18.3 ಓವರ್‌ಗಳಲ್ಲಿ ಆಲೌಟ್‌ ಆಗುವ ಮೂಲಕ ಹೈದರಾಬಾದ್‌ 113 ರನ್‌ ಗಳಿಸಿತು.

ಐಡೆನ್ ಮಾರ್ಕ್ರಾಮ್ (20) ಮತ್ತು ಪ್ಯಾಟ್‌ ಕಮ್ಮಿನ್ಸ್ (24) ಹೈದರಾಬಾದ್‌ ಪರ ಅತಿಹೆಚ್ಚು ರನ್‌ ಗಳಿಸಿದರು. ಕೆಕೆಆರ್‌ ಪರ ಆಂಡ್ರೆ ರಸೆಲ್ 3 ವಿಕೆಟ್‌ ಕಬಳಿಸಿ ಸಂಭ್ರಮಿಸಿದರು.

ಹರ್ಷಿತ್ ರಾಣಾ ಮತ್ತು ಮಿಚೆಲ್‌ ಸ್ಟಾರ್ಕ್‌ ತಲಾ 2 ವಿಕೆಟ್‌ ಉರಳಿಸಿದರು. ವೈಭವ್ ಅರೋರಾ, ವರುಣ್ ಚಕ್ರವರ್ತಿ ಹಾಗು ಸುನಿಲ್ ನರೈನ್ ತಲಾ 1 ವಿಕೆಟ್‌ ಪಡೆದರು.

Story first published: Sunday, May 26, 2024, 22:33 [IST]
Other articles published on May 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+