IPL 2024 Qualifier-1: ಕೊಟ್ಟ ಕೋಟಿಗೆ ಬೆಲೆ ತಂದ ಮಿಚೆಲ್ ಸ್ಟಾರ್ಕ್; ಕೆಕೆಆರ್‌ಗೆ ಸುಲಭ ಗುರಿ ನೀಡಿದ ಎಸ್‌ಆರ್‌ಹೆಚ್
ಮೇ 21 ಮಂಗಳವಾರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಕ್ವಾಲಿಫೈಯರ್ -1 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಸಾಧರಣ ಮೊತ್ತ ಕಲೆಹಾಕಿದೆ.
ಕೆಕೆಆರ್ ಪರ ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಗೆ ಎಸ್‌ಆರ್‌ಹೆಚ್ ಬ್ಯಾಟರ್‌ಗಳು ರನ್‌ಗಳಿಸಲು ಸಾಧ್ಯವಾಗದೆ ವಿಕೆಟ್ ಕಳೆದುಕೊಂಡರು. ಕುಸಿದ ಎಸ್‌ಆರ್‌ಹೆಚ್‌ಗಾಗಿ ರಾಹುಲ್ ತ್ರಿಪಾಠಿ ಅರ್ಧಶತಕ ಹೊಡೆದು ನೆರವಾದರು.

ನಿಗದಿತ 20 ಓವರ್‌ಗಳಲ್ಲಿ ಆಲೌಟ್ ಆಗುವ ಮೂಲಕ ಎಸ್‌ಆರ್‌ಹೆಚ್ 159 ರನ್ ಗಳಿಸಿದೆ. ಕೆಕೆಆರ್ ಗೆದ್ದು ಫೈನಲ್ ತಲುಪಲು 160 ರನ್‌ಗಳ ಅವಶ್ಯಕತೆ ಇದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಎಸ್‌ಆರ್‌ಹೆಚ್ ಬೃಹತ್ ರನ್ ಗಳಿಸುವ ಉದ್ದೇಶ ಇಟ್ಟುಕೊಂಡಿತ್ತು. ಆದರೆ ಮಿಚೆಲ್ ಸ್ಟಾರ್ಕ್ ಪವರ್ ಪ್ಲೇ ನಲ್ಲಿ ಉರಿ ಬೌಲಿಂಗ್ ನಡೆಸಿದರು. ಪರಿಣಾಮ ಎಸ್‌ಆರ್‌ಹೆಚ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಆರಭಿಂಕರಾಗಿ ಕ್ರೀಸ್‌ಗೆ ಬಂದ ಟ್ರಾವಿಸ್ ಹೆಡ್ (0) ಮತ್ತು ಅಭಿಷೇಕ್ ಶರ್ಮಾ (3) ತಮ್ಮ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೊದಲೇ ಔಟ್ ಆದರು. ಬಳಿಕ ಮೂರನೇ ಕ್ರಮಾಂದಲ್ಲಿ ಬಂದ ರಾಹುಲ್ ತ್ರಿಪಾಠಿ ನಿಧಾನವಾಗಿ ರನ್ ಗಳಿಸಿದರು.
ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಬಂದಿದ್ದ ನಿತೀಶ್ ರೆಡ್ಡಿ (9) ವಿಕೆಟ್ ಕಳೆದುಕೊಂಡರು. ಇವರ ಹಿಂದಯೇ ಶಹಬಾಜ್ ಅಹ್ಮದ್ ಶೂನ್ಯಕ್ಕೆ ಔಟ್ ಆಗಿ ಹೊರ ನಡೆದರು. ಬಳಿಕ ಬಂದ ಹೆನ್ರಿಚ್ ಕ್ಲಾಸೆನ್ ಮತ್ತು ರಾಹುಲ್ ತ್ರಿಪಾಠಿ ಅವರು 62 ರನ್‌ಗಳ ಜೊತೆಯಾಟವಾಡಿದರು.
ಉತ್ತಮವಾಗಿ ಆಡುತ್ತಿದ್ದ ಹೆನ್ರಿಚ್ ಕ್ಲಾಸೆನ್ (32) ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಈ ಹಂತದವರೆಗೂ ಮಂದಗತಿಯಲ್ಲಿ ಬ್ಯಾಟ್ ಬೀಸಿ ಕುಸಿದ ಎಸ್‌ಆರ್‌ಹೆಚ್ ಪರ ರಾಹುಲ್ ತ್ರಿಪಾಠಿ ಅರ್ಧಶತಕ ಬಾರಿಸಿ ಮಿಂಚಿದರು.
ರಾಹುಲ್ ತ್ರಿಪಾಠಿ ಎದರುಸಿದ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 55 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಬಂದ ಎಸ್‌ಆರ್‌ಹೆಚ್ ಬ್ಯಾಟರ್‌ಗಳ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಬ್ದುಲ್ ಸಮದ್ (16), ಸನ್ವೀರ್ ಸಿಂಗ್ (0) ಮತ್ತು ಭುವನೇಶ್ವರ್ ಕುಮಾರ್ (0) ಔಟ್ ಆದರು.
ಕೊನೆಯಲ್ಲಿ ಬೀರುಸಿನ ಬ್ಯಾಟಿಂಗ್ ಮಾಡಿದ ನಾಯಕ ಪ್ಯಾಟ್ ಕಮ್ಮಿನ್ಸ್ (30) ತಂಡದ ರನ್ ಹೆಚ್ಚಿಸಿ ಔಟ್ ಆದರು. ವಿಜಯಕಾಂತ್ ವ್ಯಾಸಕಾಂತ್ ಅಜೇಯ 7 ರನ್ ಹೊಡೆದರು.
ಕೆಕೆಆರ್ ಪರ ಸಂಘಟಿತ ಆಕ್ರಮಕಾರಿ ಬೌಲಿಂಗ್ ಪ್ರದರ್ಶನ ಕಂಡು ಬಂತು. ಮಿಚೆಲ್ ಸ್ಟಾರ್ಕ್ 3 ವಿಕೆಟ್ ಉರುಳಿಸಿದರೆ, ವರುಣ್ ಚಕ್ರವರ್ತಿ 2 ವಿಕೆಟ್ ಮತ್ತು ವೈಭವ್ ಅರೋರಾ, ಹರ್ಷಿತ್ ರಾಣಾ, ಸುನಿಲ್ ನರೈನ್ ಹಾಗು ಆಂಡ್ರೆ ರಸೆಲ್ 1 ವಿಕೆಟ್ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications