Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024 Qualifier-1: ಕೋಲ್ಕತ್ತಾ-ಹೈದರಾಬಾದ್ ನಡುವೆ ಮೆಗಾ ಫೈಟ್‌; ಟಾಸ್‌ ವರದಿ, ಆಡುವ 11ರ ಬಳಗ

ಮೇ 21 ಮಂಗಳವಾರ, 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ ಕ್ವಾಲಿಫೈಯರ್ -1 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಸೆಣಸಾಡುತ್ತಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಕೆಆರ್‌ ಮತ್ತು ಎಸ್‌ಆರ್‌ಹೆಚ್‌ ನಡುವೆ ಫೈನಲ್‌ಗಾಗಿ ಹೋರಾಟ ಆರಂಭವಾಗಿದೆ.‌

ಮೊದಲು ಟಾಸ್‌ ಗೆದ್ದ ಸನ್‌ ರೈಸರ್ಸ್ ಹೈದರಾಬಾದ್‌ ನಾಯಕ ಪ್ಯಾಟ್‌ ಕಮ್ಮಿನ್ಸ್ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಶ್ರೇಯಸ್‌ ಅಯ್ಯರ್‌ ಮುನ್ನೆಡೆಸುತ್ತಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಬೌಲಿಂಗ್‌ ಮಾಡಲಿದೆ.

KKR vs SRH Qualifier-1 IPL 2024 Kolkata Knight Riders vs Sunrisers Hyderabad Toss Report

ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಐಪಿಎಲ್‌ 2024ರ ಫೈನಲ್‌ಗೆ ಎಂಟ್ರಿ ಕೊಡಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಆಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಹೋರಾಡಲಿದೆ.

ಕೆಕೆಆರ್‌ vs ಎಸ್‌ಆರ್‌ಹೆಚ್‌ ಪಂದ್ಯದ ಟಿವಿ,ಲೈವ್‌ ಸ್ಟ್ರೀಮಿಂಗ್‌ ವಿವರ

ಕೋಲ್ಕತ್ತಾ ನೈಟ್‌ ರೈಡರ್ಸ್‌ vs ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಆರಂಭವಾಗಿರುವ ಐಪಿಎಲ್‌ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್‌ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದು, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಫ್ಲಿಕೇಶನ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಆಗಲಿದೆ.

ಕೆಕೆಆರ್‌ vs ಎಸ್‌ಆರ್‌ಹೆಚ್‌ ಆಡುವ 11ರ ಬಳಗ

ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಸನ್ ರೈಸರ್ಸ್ ಹೈದರಾಬಾದ್ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್(ವಿ.ಕೀ), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್ ವ್ಯಾಸಕಾಂತ್, ಟಿ ನಟರಾಜನ್.

Story first published: Tuesday, May 21, 2024, 19:10 [IST]
Other articles published on May 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+