For Quick Alerts
ALLOW NOTIFICATIONS  
For Daily Alerts
 

IPL 2024 Qualifier-1: ಶ್ರೇಯಸ್‌- ವೆಂಕಟೇಶ್‌ ಬ್ಯಾಟಿಂಗ್ ಅಬ್ಬರ‌; ಫೈನಲ್‌ಗೆ ಎಂಟ್ರಿ ಕೊಟ್ಟ ಕೆಕೆಆರ್‌

ಮೇ 21 ಮಂಗಳವಾರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ ಕ್ವಾಲಿಫೈಯರ್ -1 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೆದ್ದು ಬೀಗಿದೆ.

ಭರ್ಜರಿಯಾಗಿ ಬ್ಯಾಟಿಂಗ್‌ ಮಾಡಿದ ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಹೊಡೆದು ಕೆಕೆಆರ್‌ಗೆ ಗೆಲುವು ತಂದು ಕೊಟ್ಟರು. ಕೇವಲ 13.4 ಓವರ್‌ಗಳಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ಕೆಕೆಆರ್‌ ಐಪಿಎಲ್‌ 2024ರ ಫೈನಲ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ.

KKR vs SRH Qualifier-1 IPL 2024 Kolkata Knight Riders win against Sunrisers Hyderabad Report

ಸೋತಿರುವ ಹೈದರಾಬಾದ್‌ ತಂಡಕ್ಕೆ ಮತ್ತೊಂದು ಅವಕಾಶವಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಕ್ವಾಲಿಫೈಯರ್‌-2 ಆಡಲಿದೆ.

ಹೈದರಾಬಾದ್‌ ನೀಡಿದ 160 ರನ್‌ ಟಾರ್ಗೆಟ್‌ ಬೆನ್ನಟ್ಟಿದ ಕೆಕೆಆರ್‌ ಪರ ರಹಮಾನುಲ್ಲಾ ಗುರ್ಬಾಜ್ ಮತ್ತು ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕೀಳಿದರು. ಶುರುವಿನಿಂದಲ್ಲೇ ಅಬ್ಬರದ ಬ್ಯಾಟಿಂಗ್‌ ಮಾಡಿದ ಆರಂಭಿಕ ಜೋಡಿ ಉತ್ತಮ ರನ್‌ ಕಲೆಹಾಕಿದರು.

ರಹಮಾನುಲ್ಲಾ ಗುರ್ಬಾಜ್ 24 ರನ್‌ ಹೊಡೆದು ಟಿ ನಟರಾಜನ್ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ಮತ್ತೊಂದೆಡೆ ಸ್ಪೋಟಕ ಬ್ಯಾಟರ್‌ ಸುನಿಲ್‌ ನರೈನ್‌ 21 ರನ್‌ ಗಳಿಸಿ ಪ್ಯಾಟ್ ಕಮ್ಮಿನ್ಸ್ ಅವರಿಗೆ ವಿಕೆಟ್‌ ಒಪ್ಪಿಸಿದರು.

ಬಳಿಕ ಒಂದಾದ ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ ಹೈದರಾಬಾದ್‌ ಬೌಲರ್ಸ್‌ಗಳನ್ನು ಬೆಂಡೆತ್ತಿದರು. ಸಿಡಿಲಬ್ಬರ ಬ್ಯಾಟಿಂಗ್‌ ಮಾಡಿದ ಈ ಜೋಡಿ 97 ರನ್‌ಗಳ ಜೊತೆಯಾಟವಾಡಿದರು.

ಶ್ರೇಯಸ್‌ ಅಯ್ಯರ್‌ ಎದುರಿಸಿದ ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್‌ ಹಾಗು 5 ಬೌಂಡರಿ ಮೂಲಕ 58 ರನ್‌ ಗಳಿಸಿ ಮಿಂಚಿದರು. ಮತ್ತೊಂದೆಡೆ ವೆಂಕಟೇಶ್‌ ಅಯ್ಯರ್‌ 28 ಎಸೆತಗಳಲ್ಲಿ 4 ಸಿಕ್ಸರ್‌ ಹಾಗು 5 ಬೌಂಡರಿ ನೆರವಿನಿಂದ 51 ರನ್‌ ಬಾರಿಸಿದರು.

ಹೈದರಾಬಾದ್‌ ಪರ ಪ್ಯಾಟ್ ಕಮ್ಮಿನ್ಸ್ ಮತ್ತು ಟಿ ನಟರಾಜನ್ 1 ವಿಕೆಟ್‌ ಪಡೆದುಕೊಂಡರು.

ಎಸ್‌ಆರ್‌ಹೆಚ್‌ ಮೊದಲ ಇನ್ನಿಂಗ್ಸ್‌

ಟಾಸ್‌ ಗೆದ್ದ ಮೊದಲು ಬ್ಯಾಟಿಂಗ್‌ ಶುರು ಮಾಡಿದ ಸನ್‌ ರೈಸರ್ಸ್ ಹೈದರಾಬಾದ್‌ ಉತ್ತಮ ಆರಂಭ ಪಡೆಯಲಿಲ್ಲ. ಎಸ್ಆರ್‌ಹೆಚ್‌ ಸ್ಪೋಟಕ ಬ್ಯಾಟರ್‌ಗಳೆಲ್ಲ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಉರಿ ದಾಳಿಗೆ ತತ್ತರಿಸಿ ಹೋದರು.

‌ಟ್ರಾವಿಸ್ ಹೆಡ್, ಶಹಬಾಜ್ ಅಹ್ಮದ್, ಸನ್ವೀರ್ ಸಿಂಗ್ ಮೂವರು ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡರು. ಅಭಿಷೇಕ್ ಶರ್ಮಾ 3 ರನ್‌ಗಳಿಗೆ ಔಟಾದರೆ, ನಿತೀಶ್ ರೆಡ್ಡಿ 9 ರನ್‌ಗಳಿಸಿ ವಿಕೆಟ್‌ ಕಳೆದುಕೊಂಡರು. ರಾಹುಲ್ ತ್ರಿಪಾಠಿ 55 ರನ್ ಗಳಿಸಿ ತಂಡಕ್ಕೆ ನೆರವಾದರು.

ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ 32 ರನ್ ಹಾಗು ಕೊನೆಯಲ್ಲಿ ನಾಯಕ ಪಾಟ್ ಕಮಿನ್ಸ್ 30 ರನ್ ಗಳಿಸುವ ಮೂಲಕ ಎಸ್‌ಆರ್‌ಹೆಚ್‌ 159 ರನ್‌ ಗಳಿಸಲು ಕಾರಣನಾದರು.

ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಬಳಿಸಿ ಸಂಭ್ರಮಿಸಿದರೆ, ವರುಣ್ ಚಕ್ರವರ್ತಿ 2 ವಿಕೆಟ್ ಪಡೆದರು. ವೈಭವ್ ಅರೋರಾ, ಹರ್ಷಿತ್ ರಾಣಾ, ಸುನಿಲ್ ನರೇನ್, ಆಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರು.

Story first published: Tuesday, May 21, 2024, 23:30 [IST]
Other articles published on May 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+