KKR vs SRH IPL Final 2024: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ದುಬಾರಿ ಆಟಗಾರರು ಮುಖಾಮುಖಿ
ಮೇ 25 ಶನಿವಾರ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಕ್ವಾಲಿಫೈಯರ್ -2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಎದುರು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಅಮೋಘ ಗೆಲುವು ಸಾಧಿಸಿದೆ.
ಹೈದರಾಬಾದ್ ಈ ಗೆಲುವಿಮ ಮೂಲಕ ಐಪಿಎಲ್ 2024ರ ಫೈನಲ್ ತಲುಪಿದ್ದು, ನಾಳೆ ಅಂದರೆ (ಮೇ 26) ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಗೆದ್ದ ತಂಡ 17ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

ಎರಡು ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಖತ್ ಸ್ಟ್ರಾಂಗ್ ಇವೆ. ಹೀಗಾಗಿ ಭಾನುವಾರ ಇಂತಹ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಮತ್ತೊಂದೆಡೆ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ನಲ್ಲಿ ಇಬ್ಬರು ದುಬಾರಿ ಆಟಗಾರರು ಮುಖಮುಖಿಯಾಗುತ್ತಿದ್ದಾರೆ. ಹೀಗಾಗಿ ಈ ಜೋಡಿಯ ಪ್ರದರ್ಶನದ ಮೇಲೆಗೆ ಎಲ್ಲರು ಕಣ್ಣು ಬಿದ್ದಿದೆ.
ಆ ದುಬಾರಿ ಆಟಗಾರರು ಬೇರೆ ಯಾರು ಅಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮೂರು ಮಾದರಿಯಲ್ಲೂ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗು ಅದೇ ತಂಡದ ಪ್ರಮುಖ ವೇಗದ ಬೌಲರ್ ಅಗಿ ಮಿಂಚಿದ ಮಿಚೆಲ್ ಸ್ಟಾರ್ಕ್.

ಸದ್ಯ ಈ ಇಬ್ಬರು ಆಟಗಾರರು ಐಪಿಎಲ್ 2024ರಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದು, ಭಾನುವಾರ ಕಣಕ್ಕಳೀಯಲು ಸಜ್ಜಾಗಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಅವರನ್ನು 20.5 ಕೋಟಿ ರೂ.ಗಳಿಗೆ ಸನ್ ರೈಸರ್ಸ್ ಹೈದರಾಬಾದ್ ಖರೀದಿ ಮಾಡಿತ್ತು. ಬಳಿಕ ತಂಡದ ನಾಯಕರಾಗಿ ಮಾಡಿದೆ.
ಹೀಗಾಗಿ ಎಸ್‌ಆರ್‌ಗೆಚ್ ತಂಡವನ್ನು ಈ ಋತುವಿನಲ್ಲಿ ನಾಯಕನಾಗಿ ಪ್ಯಾಟ್ ಮುನ್ನಡೆಸುತ್ತಿದ್ದಾರೆ. ಇನ್ನೊಂದೆಡೆ ಮಿಚೆಲ್ ಸ್ಟಾರ್ಕ್ ಅವರಿಗೆ ಬರೋಬ್ಬರಿ 24.75 ಕೋಟಿ ರೂ.ಗಳನ್ನು ಕೆಕೆಆರ್ ಫ್ರಾಂಚೈಸಿ ನೀಡಿತ್ತು. ಈ ಮೊತ್ತ ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದಿದೆ. ಸ್ಟಾರ್ಕ್ ಕೆಕೆಆರ್ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನೆಡೆಸುತ್ತಿದ್ದಾರೆ
ಇದೀಗ ಐಪಿಎಲ್‌ನಲ್ಲಿ ಈ ಇಬ್ಬರು ಆಸೀಸ್ ಆಟಗಾರರ ಕದನ ಕೂತುಹಲ ಹೆಚ್ಚಿಸಿದೆ. ಕಳೆದ ಕ್ವಾಲಿಫೈಯರ್-1 ರಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆಯನ್ನು ಆರಂಭದಲ್ಲೇ ಕಟ್ಟಿ ಆಗುವುದಲ್ಲಿ ಮಿಚೆಲ್ ಸ್ಟಾರ್ಕ್ ಯಶಸ್ವಿಯಾಗಿದ್ದರು. ಹೀಗಾಗಿ ಕೆಕೆಆರ್ ಎದುರು ಹೈದರಾಬಾದ್ ಸೋಲು ಕಂಡಿತ್ತು. ಕೆಕೆಆರ್ ಎದುರು ಈ ಸೋಲಿನ ಸೇಡಿಗೆ ಕಮ್ಮಿನ್ಸ್ ಪಡೆ ಸಜ್ಜಾಗಿದೆ.

ಟೂರ್ನಿಯ ಮೊದಲಾರ್ಧದಲ್ಲಿ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಮಿಚೆಲ್ ಸ್ಟಾರ್ಕ್ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದರು. 24.75 ಕೋಟಿ ರೂ. ಗಳನ್ನು ಸ್ಟಾರ್ಕ್‌ಗೆ ನೀಡಿರುವುದು ವ್ಯರ್ಥ ಎಂದೆಲ್ಲಾ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಟೀಕೆಗಳನ್ನು ಮೆಟ್ಟಿ ನಿಂತ ಮಿಚೆಲ್ ಸ್ಟಾರ್ಕ್ ಹೈದರಾಬಾದ್ ಎದುರು ನಾಕೌಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 4 ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್‌ಗಳನ್ನು ಉರುಳಿಸಿದ್ದರು.
ಇನ್ನು ಪ್ಯಾಟ್ ಕಮ್ಮಿನ್ಸ್ ಆರಂಭದಿಂದಲ್ಲೂ ಎಸ್‌ಆರ್‌ಹೆಚ್ ತಂಡವನ್ನು ಉತ್ತಮವಾಗಿ ಮುನ್ನೆಡೆಸುತ್ತಿದ್ದು, ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಪರಿಣಾಮ ಇಂದು ಎಸ್‌ಆರ್‌ಹೆಚ್ ತಂಡ ಫೈನಲ್ ತಲುಪಿದೆ.
ಪಂದ್ಯದ ವೇಳೆ ಯಾವ ಸಂದರ್ಭದಲ್ಲಿ ಯಾವ ಬೌಲರ್‌ನಿಂದ ಬೌಲಿಂಗ್ ಮಾಡಿಸಬೇಕು ಎಂಬುದನ್ನು ಪ್ಯಾಟ್ ಚೆನ್ನಾಗಿ ಅರಿತುಕೊಂಡಿದ್ದಾರೆ. ಜೊತೆಗೆ ಬ್ಯಾಟಿಂಗ್‌ನಲ್ಲೂ ಆನೇಕ ಬದಲಾವಣೆ ಜೊತೆಗೆ ಯಶಸ್ಸು ಅನ್ನು ಕಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications