IPL Auction 2023: ಹರಾಜಿನಲ್ಲಿ ಹೆಚ್ಚು ಆಟಗಾರರನ್ನು ಖರೀದಿಸಲಿದೆ ಕೆಕೆಆರ್, ಈ ಆಟಗಾರರೇ ಟಾರ್ಗೆಟ್
ಐಪಿಎಲ್ 2024 ರ ಹರಾಜಿನ ಮೇಲೆ ಕೋಲ್ಕತ್ತಾ ಫ್ರಾಂಚೈಸಿ ಕಣ್ಣು ನೆಟ್ಟಿದೆ. ಹರಾಜಿನಲ್ಲಿ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಖರೀದಿಸಲು ಈ ಫ್ರಾಂಚೈಸಿಗೆ ಅವಕಾಶ ಇದೆ. ಇತರ ತಂಡಗಳು 6 ರಿಂದ 8 ಆಟಗಾರರ ಮೇಲೆ ಬಾಜಿ ಕಟ್ಟಬೇಕಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಪೂರ್ಣ 12 ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ಈ ಖಾಲಿ ಸ್ಲಾಟ್‌ಗಳನ್ನು ಭರ್ತಿ ಮಾಡಲು ಕೆಕೆಆರ್ ಪರ್ಸ್‌ನಲ್ಲಿ 32.7 ಕೋಟಿ ರೂ. ಗಳು ಉಳಿದಿವೆ.
ಈಗಾಗಲೇ ಎಲ್ಲ ತಂಡಗಳು ದುಬೈನಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನು ಟಾರ್ಗೆಟ್ ಮಾಡಬೇಕು ಎಂಬ ಲೀಸ್ಟ್ ರೆಡಿ ಮಾಡಿಕೊಂಡಿವೆ. ತಮ್ಮ ತಂಡದ ಸಮತೋಲನವನ್ನು ಗುರಿಯಾಗಿಸಿಕೊಂಡು ಫ್ರಾಂಚೈಸಿಗಳು ಆಟಗಾರರಿಗೆ ಬಾಜಿ ಕೂಗುತ್ತಾರೆ. ಈ ಬಾರಿ ಅತಿ ಹಚ್ಚು ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಕೆಕೆಆರ್ ತಂಡಕ್ಕಿದೆ. ಹೀಗಾಗಿ ಹರಾಜಿನಲ್ಲಿ ಕೆಕೆಆರ್ ಪದೇ ಪದೇ ಕಾಣಿಸಿಕೊಂಡರು ಅಚ್ಚರಿಯಿಲ್ಲ.

ಈ ಬಾರಿ ಕೋಲ್ಕತ್ತಾ ಫ್ರಾಂಚೈಸಿ ತನ್ನ ತಂಡದಿಂದ ಒಟ್ಟು 12 ಆಟಗಾರರನ್ನು ಬಿಡುಗಡೆ ಮಾಡಿತ್ತು. ಇವರಲ್ಲಿ ಹೆಚ್ಚಿನ ಸಂಖ್ಯೆಯವರು ವೇಗದ ಬೌಲರ್‌ಗಳಾಗಿದ್ದರು. ಈ ಪರಿಸ್ಥಿತಿಯಲ್ಲಿ ಕೆಕೆಆರ್ ಈ ಬಾರಿಯ ಹರಾಜಿನಲ್ಲಿ ವೇಗದ ಬೌಲರ್‌ಗಳನ್ನು ಗುರಿಯಾಗಿಸಲಿದೆ. ಅಲ್ಲದೆ ಹರಾಜಿನಲ್ಲಿ ದೇಶೀಯ ಸ್ಟಾರ್ ವೇಗದ ಬೌಲರ್‌ಗಳತ್ತ ಕೆಕೆಆರ್ ಚಿತ್ತ ನೆಟ್ಟಿದೆ.
ಕೆಕೆಆರ್ ತನ್ನ ತಂಡದಿಂದ ಸ್ಟಾರ್ ವೇಗದ ಬೌಲರ್‌ಗಳಾದ ಲಾಕಿ ಫರ್ಗುಸನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ ಮತ್ತು ಉಮೇಶ್ ಯಾದವ್ ಅವರನ್ನು ಕೈಬಿಟ್ಟಿತ್ತು. ಈಗ ಆಂಡ್ರೆ ರಸೆಲ್ ಮತ್ತು ವೈಭವ್ ಅರೋರಾ ಹೊರತುಪಡಿಸಿ ಯಾವುದೇ ಉತ್ತಮ ವೇಗದ ಬೌಲರ್‌ಗಳು ತಂಡದಲ್ಲಿ ಇಲ್ಲ. ಈ ಪರಿಸ್ಥಿತಿಯಲ್ಲಿ ಡಿಸೆಂಬರ್ 19ರಂದು ನಡೆಯಲಿರುವ ಹರಾಜಿನಲ್ಲಿ ಕನಿಷ್ಠ ನಾಲ್ಕೈದು ಸ್ಪೆಷಲಿಸ್ಟ್ ವೇಗದ ಬೌಲರ್ ಗಳನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಕೆಕೆಆರ್ ತಂಡ ಸಿಲುಕಿದೆ.
ಕೆಕೆಆರ್ ವಿದೇಶಿ ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಗಸ್ ಅಟ್ಕಿನ್ಸನ್, ಜೆರಾಲ್ಡ್ ಕೋಟ್ಜಿ, ಡೇವಿಡ್ ವಿಲ್ಲಿ ಮತ್ತು ಕ್ರಿಸ್ ವೋಕ್ಸ್ ಅವರ ಮೇಲೆ ಹೆಚ್ಚಿನ ಬಾಜಿ ಕೂಗುವ ಸಾಧ್ಯತೆ ಇದೆ. ಅಲ್ಲದೆ ಕೆಕೆಆರ್ ತಂಡದಲ್ಲಿ ಎರಡು-ಮೂರು ಭಾರತೀಯ ವೇಗದ ಬೌಲರ್‌ಗಳನ್ನು ಸೇರಿಸಿಕೊಳ್ಳಬೇಕು. ಇವರಲ್ಲಿ ಹರ್ಷಲ್ ಪಟೇಲ್ ಅವರಂತಹ ಬೌಲರ್ ಗಳ ಮೇಲೆ ಫ್ರಾಂಚೈಸಿ ಕಣ್ಣು ನೆಟ್ಟಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಕೆಕೆಆರ್ ಸಮತೋಲಿತವಾಗಿದೆ. ಆದರೆ, ಇಲ್ಲಿ ಒಂದಿಬ್ಬರು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳ ಕೊರತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ, ಕೋಲ್ಕತ್ತಾ ಫ್ರಾಂಚೈಸಿ ಹರಾಜಿನಲ್ಲಿ ಕೆಲವು ಉತ್ತಮ ಬ್ಯಾಟ್ಸ್‌ಮನ್‌ಗಳತ್ತ ಗಮನ ಹರಿಸಬೇಕಾಗಿದೆ. ಕೆಕೆಆರ್ ವಿದೇಶಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಅಥವಾ ಇಬ್ಬರು ಪ್ಲೇಯರ್‌ಗಳಿಗೆ ತಮ್ಮ ತಂಡದಲ್ಲಿ ಬರಮಾಡಿಕೊಂಡರೂ ಅಚ್ಚರಿಯಿಲ್ಲ.
ಕೈ ಬಿಟ್ಟ ಆಟಗಾರರು: ಶಕೀಬ್ ಅಲ್ ಹಸನ್, ಲಿಟನ್ ದಾಸ್, ಆರ್ಯ ದೇಸಾಯಿ, ನಾರಾಯಣ ಜಗದೀಸನ್, ಮನ್ದೀಪ್ ಸಿಂಗ್, ಕುಲ್ವಂತ್ ಖೆಜ್ರೋಲಿಯಾ, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್, ಡೇವಿಡ್ ವೈಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications