Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಕೆಎಲ್ ರಾಹುಲ್ ಮನೆಗೆ ಕಾಲಿಟ್ಟ ಮಹಾಲಕ್ಷ್ಮಿ

ಭಾರತ ತಂಡದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಕೆ ಎಲ್ ರಾಹುಲ್ ಮತ್ತು ನಟಿ ಅತಿಯಾ ಶೆಟ್ಟಿ ದಂಪತಿ ಮನೆಗೆ ಮಹಾಲಕ್ಷ್ಮಿ ಕಾಲಿಟ್ಟಿದ್ದಾಳೆ. ಕೆ ಎಲ್ ರಾಹುಲ್ ಪತ್ನಿ ಅತಿಯಾ ಶೆಟ್ಟಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅತಿಯಾ ಮತ್ತು ರಾಹುಲ್ ತಮ್ಮ ಹೆಣ್ಣು ಮಗುವಿನ ಆಗಮನದ ಬಗ್ಗೆ ಘೋಷಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಕೆ ಎಲ್ ರಾಹುಲ್ ಅವರು ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ.

ಸೋಮವಾರ, ಕೆಎಲ್ ರಾಹುಲ್ ಮತ್ತು ಅತಿಯಾ ದಂಪತಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಸಿಹಿ ಸುದ್ದಿ ತಿಳಿದ ಕ್ರಿಕೆಟ್ ಅಭಿಮಾನಿಗಳು ಸ್ಟಾರ್ ದಂಪತಿಗಳಿಗೆ ಶುಭ ಕೋರಿದ್ದಾರೆ.

KL Rahul and Athiya Shetty Welcome Their Baby Girl Share Heartwarming Announcement

ಕೆ ಎಲ್ ರಾಹುಲ್ ಬಾಲಿವುಡ್ ಸೂಪರ್‌ಸ್ಟಾರ್ ಸುನಿಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿ ಅವರನ್ನು ಜನವರಿ 23, 2023 ರಂದು ಮುಂಬೈನ ಖಂಡಾಲಾದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ವಿವಾಹವಾದರು. ಇದಾದ ಬಳಿಕ ಅತಿಯಾ, ಕೆಎಲ್ ರಾಹುಲ್ ಅವರೊಂದಿಗೆ ಕಳೆದ ನವೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಷಕರಾಗುತ್ತಿರುವ ಬಗ್ಗೆ ಘೋಷಿಸಿದ್ದರು.

ಐಪಿಎಲ್ 2025ರ ನಾಲ್ಕನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಕೆಎಲ್ ರಾಹುಲ್ ಡೆಲ್ಲಿ ತಂಡದ ಭಾಗವಾಗಿದ್ದಾರೆ. ಆದರೆ, ಅವರು ತಂಡದ ಪರ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಈಗ ಅವರು ಈ ಪಂದ್ಯದಲ್ಲಿ ಆಡದಿರಲು ಕಾರಣ ಬೆಳಕಿಗೆ ಬಂದಿದೆ. ಅವರ ಪತ್ನಿ ಅತಿಯಾ ಮಗುವಿಗೆ ಜನ್ಮ ನೀಡಿರುವುದರಿಂದ ಈ ಸಮಯದಲ್ಲಿ ಕುಟುಂಬ ಜೊತೆಗೆ ಇರಲು ಬಯಸಿದ್ದರು. ಇದರಿಂದಾಗಿ ಅವರು ಪಂದ್ಯ ಆಡಲು ಸಾಧ್ಯವಾಗಲಿಲ್ಲ.

Story first published: Monday, March 24, 2025, 21:04 [IST]
Other articles published on Mar 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+