ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಾಯದ ಸಮಸ್ಯೆಯಿಂದ ಅವಕಾಶ ಸಿಗದೇ ಟೀಮ್ ಇಂಡಿಯಾದ ಹೊರಬಿದ್ದಿರುವ ನಾಲ್ವರು ಆಟಗಾರರ ಪಟ್ಟಿ

KL Rahul and other major players of India who are out of the team due to fitness issue

ಕ್ರಿಕೆಟ್‌ನಲ್ಲಿ ಸತತವಾಗಿ ಭಾಗವಹಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಆಟಗಾರರು ಸಾಲು ಸಾಲು ಅಂತರರಾಷ್ಟ್ರೀಯ ಸರಣಿಗಳು ಮತ್ತು ಫ್ರಾಂಚೈಸಿ ಕ್ರಿಕೆಟ್‌ ಲೀಗ್‌ಗಳಲ್ಲಿ ಭಾಗವಹಿಸಿ ಒತ್ತಡಕ್ಕೆ ಸಿಲುಕಿದ್ದು ಕೆಲ ಸರಣಿಗಳಲ್ಲಿ ಭಾಗವಹಿಸದೇ ತಂಡಗಳಿಂದ ಹೊರಗುಳಿದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಒಂದೆಡೆ ಕೆಲ ಆಟಗಾರರು ವಿಶ್ರಾಂತಿ ತೆಗೆದುಕೊಂಡು ತಮ್ಮ ತಂಡಗಳ ಪರ ಕಣಕ್ಕಿಳಿಯದೇ ತಂಡದಿಂದ ಹೊರಗುಳಿದಿದ್ದರೆ, ಇನ್ನೂ ಕೆಲವರು ಗಾಯದ ಸಮಸ್ಯೆಯಿಂದಾಗಿ ತಂಡಗಳಿಂದ ಹೊರಬಿದ್ದಿದ್ದು ಅವಕಾಶ ವಂಚಿತರಾಗಿದ್ದಾರೆ.

IND vs WI: ರೋಹಿತ್ ಶರ್ಮಾ, ಎಂಎಸ್ ಧೋನಿ, ಕೊಹ್ಲಿ ದಾಖಲೆ ಹಿಂದಿಕ್ಕಲಿದ್ದಾರೆ ಶಿಖರ್ ಧವನ್!IND vs WI: ರೋಹಿತ್ ಶರ್ಮಾ, ಎಂಎಸ್ ಧೋನಿ, ಕೊಹ್ಲಿ ದಾಖಲೆ ಹಿಂದಿಕ್ಕಲಿದ್ದಾರೆ ಶಿಖರ್ ಧವನ್!

ಹೌದು, ಸದ್ಯ ಟೀಮ್ ಇಂಡಿಯಾದ ಒಟ್ಟು ಮೂವರು ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದು, ಕಣಕ್ಕಿಳಿಯುವ ಅವಕಾಶ ಸಿಗದೇ ಹೊರಬಿದ್ದಿದ್ದಾರೆ. ಕೆಲವರು ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವ ವೇಳೆ ಗಾಯದ ಸಮಸ್ಯೆಗೊಳಗಾಗಿದ್ದರೆ, ಇನ್ನೂ ಕೆಲವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಗಾಯಕ್ಕೊಳಗಾಗಿದ್ದಾರೆ. ಹೀಗೆ ಗಾಯಕ್ಕೊಳಗಾಗಿ ಅವಕಾಶ ಕಳೆದುಕೊಂಡಿರುವ ಟೀಮ್ ಇಂಡಿಯಾದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

ದೀಪಕ್ ಚಹರ್

ದೀಪಕ್ ಚಹರ್

ಟೀಮ್ ಇಂಡಿಯಾದ ಯುವ ಬೌಲರ್ ದೀಪಕ್ ಚಹರ್ ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ ಟ್ವೆಂಟಿ ಪಂದ್ಯದ ವೇಳೆ ಭುಜದ ಗಾಯದ ಸಮಸ್ಯೆಗೊಳಗಾಗಿದ್ದರು. ಇದೇ ಕಾರಣಕ್ಕಾಗಿ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ದೀಪಕ್ ಚಹರ್ ಕಣಕ್ಕಿಳಿದಿರಲಿಲ್ಲ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಪಕ್ ಚಹರ್ ಮತ್ತೆ ಬೆನ್ನಿನ ಗಾಯದ ಸಮಸ್ಯೆಗೊಳಗಾಗಿದ್ದು, ಇತ್ತೀಚಿನ ಸರಣಿಗಳಲ್ಲಿ ಅವಕಾಶ ಸಿಗದೇ ಹೊರಬಿದ್ದಿದ್ದಾರೆ.

ಕುಲದೀಪ್ ಯಾದವ್

ಕುಲದೀಪ್ ಯಾದವ್

ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕುಲದೀಪ್ ಯಾದವ್ ತವರಿನಲ್ಲಿ ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಿಂದ ಹೊರಬಿದ್ದಿದ್ದರು. ನಂತರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಗೆ ಒಳಪಟ್ಟ ಕುಲದೀಪ್ ಯಾದವ್ ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಎಲ್ ರಾಹುಲ್ ಟೂರ್ನಿ ಮುಕ್ತಾಯವಾದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಭಾಗವಹಿಸಲು ಆಗಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ಕೆ ಎಲ್ ರಾಹುಲ್ ತೊಡೆಸಂದು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದರು. ಸದ್ಯ ಇತ್ತೀಚೆಗಷ್ಟೇ ಈ ಕುರಿತಾಗಿ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಪಡೆದಿರುವ ಕೆ ಎಲ್ ರಾಹುಲ್ ಸದ್ಯ ತಂಡದಿಂದ ಹೊರಗುಳಿದಿದ್ದಾರೆ.

Story first published: Thursday, July 21, 2022, 21:38 [IST]
Other articles published on Jul 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X