ಕೆಎಲ್ ರಾಹುಲ್, ರಿಷಭ್ ಪಂತ್ ಭಾರತದ ಉಪನಾಯಕರಾಗಲು ಗವಾಸ್ಕರ್ ಸಲಹೆ

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಕ್ಕೆ ಕೆಎಲ್ ರಾಹುಲ್, ರಿಷಭ್ ಪಂತ್ ಆಗುವಂತೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ರಾಹುಲ್ ಮತ್ತು ಪಂತ್‌ಗೆ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಉತ್ತಮ ಭವಿಷ್ಯವಿದೆ ಎಂದು ಗವಾಸ್ಕರ್ ಅಭಿಪ್ರಾಯಿಸಿದ್ದಾರೆ. ಭಾರತ ತಂಡಕ್ಕೆ ಮುಂದೆ ಟಿ20ಯಲ್ಲಿ ರೋಹಿತ್ ಶರ್ಮಾ ನಾಯಕರಾಗಲಿದ್ದಾರೆ. ಈ ವೇಳೆ ಉಪನಾಯಕರ ಸ್ಥಾನಕ್ಕೆ ರಾಹುಲ್ ಮತ್ತು ಪಂತ್ ಅವರನ್ನು ಗವಾಸ್ಕರ್ ಸೂಚಿಸಿದ್ದಾರೆ.
ಸದ್ಯ ಟೀಮ್ ಇಂಡಿಯಾಕ್ಕೆ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವದಲ್ಲಿ ಬದಲಾವಣೆಯಾಗಲಿದೆ. ಏಕದಿನ ಮತ್ತು ಟೆಸ್ಟ್‌ನಲ್ಲೂ ನಾಯಕತ್ವ ಬದಲಾದರೆ ಅಚ್ಚರಿಯಿಲ್ಲ.

ರೋಹಿತ್ ಶರ್ಮಾಗೆ ಕೆಎಲ್ ರಾಹುಲ್, ರಿಷಭ್ ಪಂತ್ ಉಪನಾಯಕರಾಗಲಿ
ಸ್ಟಾರ್ ಸ್ಪೋರ್ಟ್ಸ್ ಶೋನ 'ಕ್ರಿಕೆಟ್ ಕನೆಕ್ಟ್' ಕಾರ್ಯಕ್ರಮದಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಟಿ20 ಕ್ರಿಕೆಟ್ ಮಾದರಿಯಲ್ಲಿ ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾದರೆ ಅವರಿಗೆ ಉಪನಾಯಕರಾಗಿ ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ನಾಯಕರಾದರೆ ಚೆನ್ನ ಎಂದು ಹೇಳಿದ್ದಾರೆ. "ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮಾ ನಾಯಕರಾದರೆ ಅವರಿಗೆ ಉಪನಾಯಕರಾಗಿ ಕೆಎಲ್ ರಾಹುಲ್ ಬರುವುದನ್ನು ನಾನು ಬಯಸುತ್ತಿದ್ದೇನೆ. ಇದೇ ವೇಳೆ ನನ್ನ ತಲೆಯಲ್ಲಿ ರಿಷಭ್ ಪಂತ್ ಹೆಸರೂ ಬರುತ್ತದೆ," ಎಂದು ಲಿಟ್ಲ್ ಮಾಸ್ಟರ್ ಗವಾಸ್ಕರ್ ಹೇಳಿದ್ದಾರೆ. ರಾಹುಲ್ ಮತ್ತು ಪಂತ್ ಇಬ್ಬರೂ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪ್ರೌಢ ಆಟ ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ಭಾರತ ತಂಡಕ್ಕೆ ನಾಯಕರಾಗುವ ಲಕ್ಷಣವಿದೆ ಎಂದು ಗವಾಸ್ಕರ್ ಅಭಿಪ್ರಾಯಿಸಿದ್ದಾರೆ.

ರಿಷಭ್ ಪಂತ್, ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ
ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ರಿಷಭ್ ಪಂತ್ ವಹಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್‌ಗೆ ಕೆಎಲ್ ರಾಹುಲ್ ನಾಯಕರಾಗಿದ್ದಾರೆ. ಇಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 11 ಪಂದ್ಯಗಳನ್ನಾಡಿರುವ ಪಂತ್ 38.88ರ ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. ಇತ್ತ ರಾಹುಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದಾರೆ. 10 ಪಂದ್ಯಗಳಲ್ಲಿ 52.75ರ ಸರಾಸರಿಯಲ್ಲಿ 422 ರನ್ ಗಳಿಸಿದ್ದಾರೆ. ಐಪಿಎಲ್ ಅತ್ಯಧಿಕ ರನ್ ಪಟ್ಟಿಯಲ್ಲಿ ಸದ್ಯ ಡೆಲ್ಲಿಯ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ. 11 ಪಂದ್ಯಗಳಲ್ಲಿ 45.40ರ ಸರಾಸರಿಯಲ್ಲಿ 454 ರನ್ ಗಳಿಸಿದ್ದಾರೆ. ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಸಂಜು ಸ್ಯಾಮ್ಸನ್ ಇದ್ದಾರೆ. ಸಂಜು 11 ಪಂದ್ಯಗಳಲ್ಲಿ 452 ರನ್ ಗಳಿಸಿದ್ದಾರೆ.

ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಕ್ಕೆ
ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. 16 ತಂಡಗಳು ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಟೂರ್ನಿ ಬಳಿಕ ನಾಯಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಆದರೆ ಟೆಸ್ಟ್ ಮತ್ತು ಏಕದಿನ ನಾಯಕತ್ವ ಮುಂದುವರೆಸಲಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ. ಅಂತೂ ಟಿ20 ಫಲಿತಾಂಶದ ಬಳಿಕ ಕೊಹ್ಲಿ ಟೆಸ್ಟ್ ಮತ್ತು ಏಕದಿನ ನಾಯಕತ್ವದಿಂದಲೂ ಕೆಳಗಿಳಿದರೂ ಅಚ್ಚರಿಯಿಲ್ಲ. ಯಾಕೆಂದರೆ ಕೊಹ್ಲಿ ಸುದೀರ್ಘ ಸಮಯದಿಂದ ಭಾರತೀಯ ತಂಡವನ್ನು ಟೆಸ್ಟ್, ಏಕದಿನ ಮತ್ತು ಟಿ20ಐನಲ್ಲಿ ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ನಾಯಕತ್ವದಲ್ಲಿ ಬದಲಾವಣೆ ಬೇಕು ಎಂದು ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿರುವುದರಿಂದ ಕೊಹ್ಲಿ ಸದ್ಯಕ್ಕೆ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications