ದಶಕದ ಬಳಿಕ ರಣಜಿ ಟೂರ್ನಿಯಲ್ಲಿ ಬೌಲಿಂಗ್ ಮಾಡಿದ ಕೆಎಲ್ ರಾಹುಲ್
ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಂತೆಯೇ ದೇಶೀಯ ರಣಜಿ ಟ್ರೋಫಿ ಮೇಲೂ ಎಲ್ಲರೂ ಒಂದು ದೃಷ್ಟಿ ನೆಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕ ತಂಡಗಳು ಕಾದಾಟ ನಡೆಸಿದವು. ಶನಿವಾರ ಪಂದ್ಯದ ಕೊನೆಯ ದಿನದಾಟ ನಡೆಯುತ್ತಿದೆ. ಐದನೇ ದಿನದಾಟದಂದೂ ಸಹ ಜಮ್ಮು ಮತ್ತು ಕಾಶ್ಮೀರ ತಂಡ ತನ್ನ ಬಿಗಿ ಹಿಡಿತವನ್ನು ಮುಂದುವರಿಸಿದೆ. ದಶಕಗಳ ಕಾಲ ಕಾಣದ ದೃಶ್ಯ ಈ ಬಾರಿ ಕಾಣಿಸಿಕೊಂಡಿತು. ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಬೌಲಿಂಗ್ ಮಾಡಿ ಗಮನ ಸೆಳೆದರು.
ಜಮ್ಮು ಮತ್ತು ಕಾಶ್ಮೀರ ತಂಡ ಈ ಪಂದ್ಯದಲ್ಲಿ ಟಾಸ್ ಗೆದ್ದು ದೊಡ್ಡ ಮೊತ್ತವನ್ನು ಕಲೆ ಹಾಕಿತು. ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 293 ರನ್‌ಗಳಿಗೆ ಆಲ್‌ಔಟ್ ಆಯಿತು. ಫಾಲೋ ಆನ್ ಹೇರುವ ಅವಕಾಶ ಇದ್ದರೂ, ಜಮ್ಮು ಕಾಶ್ಮೀರ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ಆದರೆ ಎರಡನೇ ಇನಿಂಗ್ಸ್‌ನಲ್ಲೂ ಜಮ್ಮು ಕಾಶ್ಮೀರ ತಂಡದ ಬ್ಯಾಟರ್‌ಗಳು ಕರ್ನಾಟಕದ ಬೌಲರ್‌ಗಳನ್ನು ಕಾಡಿದರು. ಇನಿಂಗ್ಸ್‌ನ 81ನೇ ಓವರ್ ಆರಂಭವಾದಾಗ ಎಲ್ಲರ ಕಣ್ಣುಗಳು ಬೌಲರ್ ಮೇಲೆ ನೆಟ್ಟವು. ಕಾರಣ ಇನಿಂಗ್ಸ್‌ನ 81ನೇ ಓವರ್ ಮಾಡಲು ಕೆಎಲ್ ರಾಹುಲ್ ಮುಂದಾದರು.

ಬೌಲಿಂಗ್ ಮಾಡಿದ ರಾಹುಲ್
ಕೆಎಲ್ ರಾಹುಲ್ ಚೆಂಡನ್ನು ಕೈಯಲ್ಲಿ ಹಿಡಿದು ಬೌಲಿಂಗ್ ಮಾಡಲು ಮುಂದಾದರು. ಆಗ ನೆರೆದ ಪ್ರೇಕ್ಷಕರು ಆಶ್ಚರ್ಯಚಕಿತರಾದರು. ರಾಹುಲ್ ಸಾಮಾನ್ಯವಾಗಿ ತಮ್ಮ ಕಲಾತ್ಮಕ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿದ್ದರು. ಆದರೆ 80ನೇ ಓವರ್ ಬಳಿಕ ದೇವದತ್ ಚೆಂಡನ್ನು ರಾಹುಲ್‌ಗೆ ನೀಡಿದಾಗ ನೀಡಿದಾಗ ಸ್ಪಿನ್ ಬೌಲಿಂಗ್ ಮಾಡಿ ಗಮನ ಸೆಳೆದರು. 10 ವರ್ಷಗಳಿಗೂ ಹೆಚ್ಚು ಕಾಲದ ನಂತರ ರಾಹುಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿದ್ದು ಇದೇ ಮೊದಲು.
ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ 2 ಓವರ್ ಬೌಲಿಂಗ್ ನಡೆಸಿದರು. ಈ ವೇಳೆ 15 ರನ್ ನೀಡಿ ಕೈ ಸುಟ್ಟುಕೊಂಡರು. ಆದರೆ ಯಾವ ಕೆಲಸಕ್ಕಾಗಿ ದೇವದತ್ ಇವರ ಕೈಯಲ್ಲಿ ಚೆಂಡನ್ನು ನೀಡಿದರೋ ಆ ಕೆಲಸವನ್ನು ಮಾತ್ರ ಮಾಡಲಿಲ್ಲ. ಜಮ್ಮು ಕಾಶ್ಮೀರ ರಣಜಿ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications