For Quick Alerts
ALLOW NOTIFICATIONS  
For Daily Alerts
 

KL Rahul: ದ್ರಾವಿಡ್‌ ದಾಖಲೆ ಅಳಿಸಿದ ಕೆಎಲ್‌, ಗವಾಸ್ಕರ್‌ ರೆಕಾರ್ಡ್‌ ಸಮಕ್ಕೆ

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್‌ ನಡುವಣ ಮೊದಲ ಟೆಸ್ಟ್‌ ರೋಚಕ ಘಟ್ಟದತ್ತ ಮುಖ ಮಾಡಿದೆ. ಇಂಗ್ಲೆಂಡ್‌ಗೆ 371 ರನ್‌ಗಳ ಗುರಿಯನ್ನು ಭಾರತ ನೀಡಿದೆ. ಟೀಮ್ ಇಂಡಿಯಾದ ಪರ ಎರಡನೇ ಇನಿಂಗ್ಸ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಇವರು ಸೋಮವಾರ ತಮ್ಮ ಟೆಸ್ಟ್‌ ಕ್ರಿಕೆಟ್‌ ಜೀವನದ ಮತ್ತೊಂದು ಶತಕವನ್ನು ಜೋಡಿಸಿದರು. ಲೀಡ್ಸ್‌ನಲ್ಲಿ ರಾಹುಲ್‌ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವದರು.

ಮೊದಲ ಇನಿಂಗ್ಸ್‌ನಲ್ಲಿ 42 ರನ್‌ ಬಾರಿಸಿ ಬಿಗ್‌ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗಿದ್ದ ರಾಹುಲ್‌, ಎರಡನೇ ಇನಿಂಗ್ಸ್‌ನಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಎರಡನೇ ಇನಿಂಗ್ಸ್‌ನಲ್ಲಿ ರಾಹುಲ್‌ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಬೌನ್ಸಿ ಟ್ರ್ಯಾಕ್‌ನಲ್ಲಿ ಆಡುವ ಕಲೆಯ ಟೀಸರ್‌ ತೋರಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಇದರ ಫುಲ್‌ ಫಿಚ್ಚರ್ ತೋರಿಸಿದರು. ಡಿಫೆನ್ಸ್‌ ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ರಾಹುಲ್‌, ತಮ್ಮ ಗುರುವಿನ ನೆನಪನ್ನು ಮರು ಕಳಿಸಿದರು.

KL Rahul Breaks Dravid s Record Matches Gavaskar with Sensational Century

ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ತಮ್ಮ ಕಲಾತ್ಮಕ ಬ್ಯಾಟಿಂಗ್‌ನ್ನು ಸೇನಾ ರಾಷ್ಟ್ರಗಳಲ್ಲಿ ಮುಂದುವರೆಸಿದೆ. ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ದೇಶಗಳನ್ನು ಒಟ್ಟಾರೆಯಾಗಿ ಸೇನಾ ರಾಷ್ಟ್ರಗಳು ಎನ್ನುತ್ತಾರೆ. ಕೆಎಲ್ ರಾಹುಲ್‌ ಎರಡನೇ ಇನಿಂಗ್ಸ್‌ನಲ್ಲಿ 55.46ರ ಸರಾಸರಿಯಲ್ಲಿ 137 ರನ್‌ ಸಿಡಿಸಿದರು. ಇದರಲ್ಲಿ 18 ಬೌಂಡರಿ ಸೇರಿಗಳು ಸೇರಿವೆ. ಈ ಶತಕದ ಮೂಲಕ ರಾಹುಲ್ ಹಲವು ದಾಖಲೆಗಳನ್ನು ಬರೆದರು.

ಗುರುವಿನ ದಾಖಲೆ ಅಳಿಸಿದ ಕೆಎಲ್

ಸೇನಾ ರಾಷ್ಟ್ರಗಳಲ್ಲಿ ರಾಹುಲ್‌ ಸಿಡಿಸಿದ ಆರನೇ ಶತಕವಾಗಿದೆ. ಇದರಲ್ಲಿ ಇಂಗ್ಲೆಂಡ್‌ನಲ್ಲಿ ಮೂರು, ಆಸ್ಟ್ರೇಲಿಯಾದಲ್ಲಿ ಒಂದು, ದಕ್ಷಿಣ ಆಫ್ರಿಕಾದಲ್ಲಿ ಎರಡು ಶತಕ ಬಾರಿಸಿದರು. ಈ ಮೂಲಕ ರಾಹುಲ್‌, ದಿಗ್ಗಜ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಅಳಿಸಿದರು. ರಾಹುಲ್ ಇಂಗ್ಲೆಂಡ್‌ನಲ್ಲಿ 2 ಶತಕ ಸಿಡಿಸಿದ್ದರು. ರಾಹುಲ್ ಈ ದಾಖಲೆಯನ್ನು ಅಳಿಸಿ ಹಾಕಿದರು. ಇನ್ನು ಭಾರತದ ಪರ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದೆ.

ಗವಾಸ್ಕರ್‌ ದಾಖಲೆಯ ಸಮಕ್ಕೆ

ಎರಡನೇ ಇನಿಂಗ್ಸ್‌ನಲ್ಲಿ ರಾಹುಲ್‌ ಶತಕ ಬಾರಿಸುವ ಮೂಲಕ ಇಂಗ್ಲೆಂಡ್‌ ವಿರುದ್ಧ ಒಟ್ಟಾರೆಯಾಗಿ ನಾಲ್ಕನೇ ಶತಕ ಬಾರಿಸಿದರು. ಈ ಮೂಲಕ ಸುನಿಲ್ ಗವಾಸ್ಕರ್‌ ಅವರ ದಾಖಲೆಯ ಸಮಕ್ಕೆ ನಿಂತರು. ಸೇನಾ ರಾಷ್ಟ್ರಗಳಲ್ಲಿ ರಾಹುಲ್‌ ಸಿಡಿಸಿದ ಐದನೇ ಶತಕ ಇದಾಗಿದೆ. ಸುನಿಲ್‌ ಗವಾಸ್ಕರ್‌ ಸೇನಾ ದೇಶಗಳಲ್ಲಿ ಒಂಬತ್ತು ಶತಕ ಸಿಡಿಸಿದ್ದಾರೆ.

ಸಚಿನ್‌ಗೆ ಅಗ್ರಸ್ಥಾನ

ರಾಹುಲ್‌ ಮುಂದಿನ ಗುರಿ ಮೊಹಮ್ಮದ್‌ ಅಜರುದ್ಧಿನ್‌ ಹಾಗೂ ರಿಷಭ್‌ ಪಂತ್‌ (6 ಶತಕ) ಅವರ ದಾಖಲೆಯ ಮೇಲೆ ನೆಟ್ಟಿದೆ. ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಹೆಗ್ಗಳಿಕೆಗೆ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಇವರು ಒಟ್ಟು 17 ಶತಕ ಸಿಡಿಸಿದ್ದರು. ಈ ಬಳಿಕ ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (12 ಶತಕ), ಮೂರನೇ ಸ್ಥಾನದಲ್ಲಿ (10 ಶತಕ) ಇದ್ದಾರೆ. ಇನ್ನು ಇಂಗ್ಲೆಂಡ್‌ನಲ್ಲಿ ರಾಹುಲ್‌ 10 ಪಂದ್ಯಗಳ 20 ಇನಿಂಗ್ಸ್‌ನಲ್ಲಿ 40.84ರ ಸರಾಸರಿಯಲ್ಲಿ 776 ರನ್‌ ಸಿಡಿಸಿದ್ದಾರೆ.

Story first published: Tuesday, June 24, 2025, 9:24 [IST]
Other articles published on Jun 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+