ಕರ್ನಾಟಕದ ಸೂಪರ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2025) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ತಮ್ಮ ಮಾಜಿ ತಂಡದ ವಿರುದ್ಧ ಕೆಎಲ್ ರಾಹುಲ್ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಹೊಸ ಇತಿಹಾಸವನ್ನು ಬರೆದರು. ಐಪಿಎಲ್‌ನಲ್ಲಿ ರಾಹುಲ್ ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ನಮೂದಿಸಿಕೊಂಡಿದ್ದಾರೆ.
ಮಂಗಳವಾರ ನಡೆದ 18ನೇ ಆವೃತ್ತಿಯ ಐಪಿಎಲ್‌ನ 40ನೇ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಲಕ್ನೋ ತಂಡದ ನಾಯಕ ರಿಷಭ್ ಪಂತ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಅವರ ಮೇಲೆ ನೆಟ್ಟಿದ್ದವು. ಏಕೆಂದರೆ ಡೆಲ್ಲಿ ತಂಡದ ಪರ ರಿಷಭ್, ಎಲ್‌ಎಸ್‌ಜಿ ಪರ ರಾಹುಲ್ ಕಳೆದ ಬಾರಿ ಆಡುತ್ತಿದ್ದರು. ಆದರೆ ಈಗ ಉಭಯ ಆಟಗಾರರು ಸ್ಥಾನ ಬದಲಾಗಿದೆ. ರಾಹುಲ್ ಲಕ್ನೋನಲ್ಲಿ ಅಕ್ಷರಶಃ ಬಾಜಿ ಗೆದ್ದಿದ್ದಾರೆ.

ತಮ್ಮ ಮಾಜಿ ತಂಡದ ವಿರುದ್ಧ ಅಮೋಘ ಬ್ಯಾಟಿಂಗ್ ಮಾಡಿದ ರಾಹುಲ್, 42 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 57 ರನ್ ಸಿಡಿಸಿ ಮಿಂಚಿದರು. ಕೆಎಲ್ ರಾಹುಲ್ ಪ್ರಸಕ್ತ ಐಪಿಎಲ್‌ನಲ್ಲಿ ಸೊಗಸಾದ ಫಾರ್ಮ್‌ನಲ್ಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಗರಿಷ್ಠ ರನ್ ಕಲೆ ಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಆಡಿದ 7 ಪಂದ್ಯಗಳಲ್ಲಿ 64ರ ಸರಾಸರಿಯಲ್ಲಿ 323 ರನ್ ಕಲೆ ಹಾಕಿದ್ದು, ಈ ವೇಳೆ ಮೂರು ಅರ್ಧಶತಕ ಬಾರಿಸಿದ್ದಾರೆ. ಮಂಗಳವಾರ ಬಾರಿಸಿದ 57 ರನ್‌ಗಳ ಇನಿಂಗ್ಸ್‌ನಿಂದ ರಾಹುಲ್ ಮತ್ತೊಂದು ದಾಖಲೆ ಬರೆದಿದ್ದಾರೆ.
ಲಕ್ನೋ ವಿರುದ್ದದ 57 ರನ್‌ಗಳ ಇನಿಂಗ್ಸ್ ಮೂಲಕ ರಾಹುಲ್ ಐಪಿಎಲ್‌ನಲ್ಲಿ ವೇಗವಾಗಿ 5 ಸಾವಿರ ರನ್ ಕಲೆ ಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕನ್ನಡಿಗ ಡೇವಿಡ್ ವಾರ್ನರ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ವಾರ್ನರ್ ಐಪಿಎಲ್‌ನಲ್ಲಿ ಐದು ಸಾವಿರ ರನ್ ಬಾರಿಸಲು 135 ಇನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ರಾಹುಲ್ ಇವರಿಗಿಂತ 5 ಇನಿಂಗ್ಸ್ ಮುಂಚಿತವಾಗಿಯೇ ಈ ಸಾಧನೆ ಮಾಡಿದ್ದಾರೆ.
ಕೆಎಲ್ ರಾಹುಲ್, 130 ಇನಿಂಗ್ಸ್
ಡೇವಿಡ್ ವಾರ್ನರ್, 135 ಇನಿಂಗ್ಸ್
ವಿರಾಟ್ ಕೊಹ್ಲಿ, 157 ಇನಿಂಗ್ಸ್
ಎಬಿಡಿ ವಿಲಿಯರ್ಸ್, 161 ಇನಿಂಗ್ಸ್
ಶಿಖರ್ ಧವನ್, 168 ಇನಿಂಗ್ಸ್
ಲಕ್ನೋ ವಿರುದ್ಧ ಅರ್ಧಶತಕದ ಇನಿಂಗ್ಸ್ ಮೂಲಕ ರಾಹುಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ (4965 ರನ್), ರಾಬಿನ್ ಉತ್ತಪ್ಪ (4952 ರನ್) ಅವರನ್ನು ಹಿಂದಿಕ್ಕಿ ಎಂಟನೇ ಸ್ಥಾನಕ್ಕೆ ಎಂಟ್ರಿ ಪಡೆದಿದ್ದಾರೆ.
ವಿರಾಟ್ ಕೊಹ್ಲಿ, 260 ಪಂದ್ಯ, 8326 ರನ್
ರೋಹಿತ್ ಶರ್ಮಾ, 264 ಪಂದ್ಯ, 6786 ರನ್
ಶಿಖರ್ ಧವನ್, 22 ಪಂದ್ಯ, 6769 ರನ್
ಡೇವಿಡ್ ವಾರ್ನರ್, 184 ಪಂದ್ಯ, 6565 ರನ್
ಸುರೇಶ್ ರೈನಾ, 205 ಪಂದ್ಯ, 5528 ರನ್