ಸದ್ಯ ಅಂತಾರಾಷ್ಟ್ರೀ ವೇದಿಕೆಗಳಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವುದು ಕಡಿಮೆ ಆಗಿದೆ. ಈಗ ಎಲ್ಲ ತಂಡಗಳು ಚಾಂಪಿಯನ್ಸ್ ಟ್ರೋಫಿಯ ಮೇಲೆ ನಿತ್ತ ನೆಟ್ಟಿವೆ. ಪಾಕಿಸ್ತಾನದಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ತನ್ನ ತಂಡವನ್ನು ಪ್ರಕಟಿಸಬೇಕಿದೆ. ಭಾರತ ತಂಡ ಪ್ರಕಟವಾಗುವ ಮುನ್ನವೇ ಭಾರತೀಯ ಅಭಿಮಾನಿಗಳು ಫುಲ್ ಖುಷ ಆಗುವ ಸುದ್ದಿಯೊಂದು ಬಂದಿದೆ. ಈ ಸುದ್ದಿ ನಿಜಕ್ಕೂ ಕೆಎಲ್ ರಾಹುಲ್ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಐಸಿಸಿ ನೂತನವಾಗಿ ಪ್ರಕಟಿಸಿರುವ ಟೆಸ್ಟ್ ಹಾಗೂ ಟಿ20 ಶ್ರೇಯಾಂಕದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡಿಲ್ಲ. ಇನ್ನು ಕಳೆದ ವಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಟೆಸ್ಟ್ ಹಾಗೂ ಟಿ20 ಪಂದ್ಯಗಳು ನಡೆಯದೇ ಇರುವ ಕಾರಣ ಯಾವುದೇ ಬದಲಾವಣೆ ಆಗಿಲ್ಲ. ಇನ್ನು ಇದೇ ವೇಳೆ ಭಾರತ ಸಹ ಯಾವುದೇ ಏಕದಿನ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಈಗ ಅಂಗಳದಲ್ಲಿ ಯಾವುದೇ ಪಂದ್ಯ ಆಡದೇ ಇದ್ದರೂ ಕೆಎಲ್ ರಾಹುಲ್ ಶ್ರೇಯಾಂಕದಲ್ಲಿ ಎರಡು ಸ್ಥಾನ ಬಡ್ತಿ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ರಾಹುಲ್ ಅಂಗಳವನ್ನು ಪ್ರವೇಶಿಸುವ ಮುನ್ನವೇ ಗುಡ್ ನ್ಯೂಸ್ ಸಿಕ್ಕಿದೆ. ಇವರು ಶ್ರೇಯಾಂಕದಲ್ಲಿ ಟಾಪ್ 10ರ ಸನಿಹಕ್ಕೆ ಬಂದು ನಿಂತಿದ್ದಾರೆ. ರಾಹುಲ್ 644 ರೇಟಿಂಗ್ ಪಾಯಿಂಟ್‌ಗಳೊಂದಿಗೆ 13ನೇ ಸ್ಥಾನ ಪಡೆದಿದ್ದಾರೆ. ಇನ್ನು ಟೀಮ್ ಇಂಡಿಯಾದಿಂದ ಹೊರಗಿರುವ ಶ್ರೇಯಸ್ ಅಯ್ಯರ್ 658 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದು, 11ನೇ ಶ್ರೇಯಾಂಕದಲ್ಲಿದ್ದಾರೆ.
ಇನ್ನು ಐಸಿಸಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪಾಕಿಸ್ತಾನ ಬ್ಯಾಟರ್ ಬಾಬರ್ ಅಜಮ್ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇವರು 795 ರೇಟಿಂಗ್ ಪಾಯಿಂಟ್ ಅಂಕಗಳನ್ನು ಕಲೆ ಹಾಕಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ಆಟಗಾರನಿಗೂ ಹಾಗೂ ಮೊದಲ ಸ್ಥಾನದಲ್ಲಿರುವ ಬಾಬರ್‌ಗೂ 30 ಪಾಯಿಂಟ್‌ಗಳ ವ್ಯತ್ಯಾಸವಿದೆ. ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದು ಇವರ ಬುಟ್ಟಿಯಲ್ಲಿ 765 ರೇಟಿಂಗ್ ಪಾಯಿಂಟ್‌ಗಳಿವೆ. ಮೂರನೇ ಶ್ರೇಯಾಂಕದಲ್ಲಿ ಶುಭಮನ್ ಗಿಲ್ ಇದ್ದು, ಇವರು 763 ರೇಟಿಂಗ್ ಹೊಂದಿದ್ದಾರೆ. 746 ರೇಟಿಂಗ್ ಪಾಯಿಂಟ್‌ಗಳೊಂದಿಗೆ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾದ ಪರ ಮೂವರು ಸ್ಟಾರ್ ಬೌಲರ್ಸ್‌ಗಳು ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರಾಶೀದ್ ಖಾನ್ ಇದ್ದು ಇವರು 669 ರನ್ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಚೈನಾ ಮೆನ್ ಬೌಲರ್ ಕುಲ್ದೀಪ್ ಯಾದವ್ ಇದ್ದಾರೆ. ಇವರು 665 ಅಂಕಗಳನ್ನು ಹೊಂದಿದ್ದಾರೆ. ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಒಂದು ಸ್ಥಾನ ಕುಸಿತ ಕಂಡಿದ್ದು ಸದ್ಯ 7ನೇ ಸ್ಥಾನದಲ್ಲಿದ್ದಾರೆ. ಇನ್ನು ವೇಗದ ಬೌಲರ್ ಮೊಹಮ್ಮದ್ ಸಿರಾಜ್ 643 ಅಂಕಗಳಿಂದ 8ನೇ ಸ್ಥಾನ ಹೊಂದಿದ್ದಾರೆ.