Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: 3 ತಂಡಗಳ ಪರ 1000 ರನ್‌ ಸಾಧನೆ ಮಾಡಿದ ಕನ್ನಡಿಗ ಕೆಎಲ್ ರಾಹುಲ್

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ನಡೆಯುತ್ತಿದೆ. ಈ ವೇಳೆ ದೇಶ ಹಾಗೂ ವಿದೇಶಿ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಸಹ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ. ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್‌ ಆರೆಂಜ್ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್‌) ವಿರುದ್ಧದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡದ ಪರ ಕೆಎಲ್ 23 ರನ್‌ಗಳ ಚಿಕ್ಕ ಇನಿಂಗ್ಸ್‌ ಕಟ್ಟಿದರು. ಈ ಚಿಕ್ಕ ಇನಿಂಗ್ಸ್‌ ಮೂಲಕ ರಾಹುಲ್‌ ಐಪಿಎಲ್‌ನಲ್ಲಿ ಯಾವೊಬ್ಬ ಬ್ಯಾಟರ್‌ ಮಾಡದ ಸಾಧನೆಯನ್ನು ಮಾಡಿದ್ದಾರೆ.

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ಆಟಗಾರ ರಾಹುಲ್‌ ಚಿಕ್ಕ ಇನಿಂಗ್ಸ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಾ 1000 ರನ್‌ ಬಾರಿಸಿದರು. ಈ ಮೂಲಕ ಐಪಿಎಲ್‌ನ ಮೂರು ವಿವಿಧ ಫ್ರಾಂಚೈಸಿಗಳ ಪರ ಬ್ಯಾಟ್ ಮಾಡುತ್ತಾ ರಾಹುಲ್‌ 1000 ಅಥವಾ ಅದಕ್ಕಿಂತ ಹೆಚ್ಚು ರನ್‌ ಬಾರಿಸಿದ ಮೊದಲ ಬ್ಯಾಟರ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈ ದಾಖಲೆಯನ್ನು ಮುರಿಯುವುದು ಕೊಂಚ ಕಷ್ಟ ಎಂದೇ ಹೇಳಲಾಗುತ್ತಿದೆ.

KL Rahul

ರಾಹುಲ್‌ ಐಪಿಎಲ್‌ನಲ್ಲಿ ಮೂರು ತಂಡಗಳ ಪರ 1000ಕ್ಕೂ ಹೆಚ್ಚು ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಮೊದಲು ಇವರು ಪಂಜಾಬ್ ತಂಡದ ಭಾಗವಾಗಿದ್ದರು. ಆಗ ರಾಹುಲ್ 55 ಪಂದ್ಯಗಳಲ್ಲಿ 56.62ರ ಸರಾಸರಿಯಲ್ಲಿ 2548 ರನ್‌ ಕಲೆ ಹಾಕಿದ್ದಾರೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಪರ ಸಹ ರಾಹುಲ್ 38 ಪಂದ್ಯಗಳನ್ನು ಆಡಿದ್ದು 41.47ರ ಸರಾಸರಿಯಲ್ಲಿ 1410 ರನ್‌ ಸಿಡಿಸಿದ್ದಾರೆ. ಈಗ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟ್ ಮಾಡುತ್ತಿರುವ ರಾಹುಲ್‌ ಆಡಿದ 24 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಕನ್ನಡಿಗ ಕೆಎಲ್ ರಾಹುಲ್ ಅಪ್‌ಡೇಟ್‌ ವರ್ಷನ್‌ ಬ್ಯಾಟಿಂಗ್: ಟೀಕೆಗಗಳಿಗೆ ಬ್ಯಾಟ್‌ನಿಂದ ಉತ್ತರ

ಕನ್ನಡಿಗ ಕೆಎಲ್ ರಾಹುಲ್ ಅಪ್‌ಡೇಟ್‌ ವರ್ಷನ್‌ ಬ್ಯಾಟಿಂಗ್: ಟೀಕೆಗಗಳಿಗೆ ಬ್ಯಾಟ್‌ನಿಂದ ಉತ್ತರ

ಪಂತ್ ದಾಖಲೆ ಅಳಿಸಿದ ರಾಹುಲ್‌

ರಾಹುಲ್‌ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟ್ ಮಾಡುವಾಗ ಅತಿ ಕಡಿಮೆ ಇನಿಂಗ್ಸ್‌ನಲ್ಲಿ ಸಾವಿರ ರನ್‌ ದಾಖಲಿಸಿದ ಹೆಗ್ಗಳಿಕೆ ಪಡೆದಿದ್ದಾರೆ. ಇವರು ಡಿಸಿ ಪರ ಕೇವಲ 23 ಇನಿಂಗ್ಸ್‌ ಆಡಿ ಈ ಸಾಧನೆ ಮಾಡಿದ್ದಾರೆ. ಈ ಮೊದಲು ಈ ದಾಖಲೆ ರಿಷಭ್‌ ಪಂತ್‌ ಹೆಸರಿನಲ್ಲಿ ಇತ್ತು. ಇವರು 35 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

DC vs KKR; ಕೋಲ್ಕತ್ತಾ ಸ್ಪಿನ್ ಬೌಲಿಂಗ್‌ಗೆ ಲಾಕ್‌ ಆದ ಕ್ಯಾಪಿಟಲ್ಸ್‌

DC vs KKR; ಕೋಲ್ಕತ್ತಾ ಸ್ಪಿನ್ ಬೌಲಿಂಗ್‌ಗೆ ಲಾಕ್‌ ಆದ ಕ್ಯಾಪಿಟಲ್ಸ್‌

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ರಾಹುಲ್‌ 4 ಬೌಂಡರಿ ಬಾರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಒಟ್ಟಾರೆಯಾಗಿ 500 ಬೌಂಡರಿ ಬಾರಿಸಿದ ಸಾಧನೆ ಮಾಡಿದರು. ಈ ಮೂಲಕ ಐಪಿಎಲ್‌ನಲ್ಲಿ 500ಕ್ಕೂ ಹೆಚ್ಚು ಬೌಂಡರಿ ಬಾರಿಸಿದ 7ನೇ ಆಟಗಾರ ಎಂಬ ಹಿರಿಮೆ ರಾಹುಲ್ ಅವರದ್ದಾಗಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಇದ್ದು, ಇವರು 813 ಬೌಂಡರಿ ಸಿಡಿಸಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್ಸ್‌

ವಿರಾಟ್ ಕೊಹ್ಲಿ, 277 ಪಂದ್ಯ, 813 ಬೌಂಡರಿ
ಶಿಖರ್ ಧವನ್, 222 ಪಂದ್ಯ, 768 ಬೌಂಡರಿ
ಡೇವಿಡ್ ವಾರ್ನರ್, 184 ಪಂದ್ಯ, 663 ಬೌಂಡರಿ
ರೋಹಿತ್ ಶರ್ಮಾ, 272 ಪಂದ್ಯ, 659 ಬೌಂಡರಿ
ಅಜಿಂಕ್ಯ ರಹಾನೆ, 186 ಪಂದ್ಯ, 527 ಬೌಂಡರಿ
ಸುರೇಶ್ ರೈನಾ, 200 ಪಂದ್ಯ, 506 ಬೌಂಡರಿ
ಕೆಎಲ್ ರಾಹುಲ್, 145 ಪಂದ್ಯ, 500 ಬೌಂಡರಿ

Story first published: Saturday, May 9, 2026, 9:28 [IST]
Other articles published on May 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+