For Quick Alerts
ALLOW NOTIFICATIONS  
For Daily Alerts
 

ರಾಹುಲ್ ಮತ್ತೊಂದು ಅವಕಾಶಕ್ಕೆ ಅರ್ಹ, ಮೂರು ಪಂದ್ಯಗಳಲ್ಲೂ ಆತ ಆಡಬೇಕು: ಗಂಭೀರ್

KL Rahul deserves another chance and should play all 3 ODIs, says Gautam Gambhir

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದರು. ಮೊದಲ ಮೂರು ಪಂದ್ಯಗಳಲ್ಲಿ ಎರಡು ಶೂನ್ಯ ಹಾಗೂ ಒಂದು ಒಂಟಿ ರನ್ ಪಡೆದ ರಾಹುಲ್ ನಾಲ್ಕನೇ ಪಂದ್ಯದಲ್ಲಿ ಎರಡಂಕಿಯನ್ನು ತಲುಪಲಷ್ಟೇ ಶಕ್ತರಾದರು. ಹೀಗಾಗಿ ಅಂತಿಮ ಟಿ20 ಪಂದ್ಯದಿಂದ ಅವರು ಹೊರಗುಳಿದಿದ್ದರು. ಈಗ ಏಕದಿನ ಸರಣಿಗೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ರಾಹುಲ್ ಆಡುವ ಬಳಗದಲ್ಲಿ ಮತ್ತೊಂದು ಅವಕಾಶವನ್ನು ಪಡೆಯಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೆಎಲ್ ರಾಹುಲ್‌ಗೆ ಮತ್ತೊಂದು ಅವಕಾಶ ದೊರೆಯಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಮತ್ತೊಂದು ಅವಕಾಶವನ್ನು ಪಡೆಯಲು ಅರ್ಹರಾಗಿದ್ದಾರೆ. ಏಕದಿನ ಸರಣಿಯ ಮೂರು ಪಮದ್ಯದಲ್ಲೂ ಆತನ ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯಬೇಕು ಎಂದು ಗಂಭೀರ್ ಹೇಳಿದ್ದಾರೆ.

ಕೆಎಲ್ ರಾಹುಲ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದರು. ಟೂರ್ನಿಯಲ್ಲಿ ರಾಹುಲ್ 1 ಶತಕ 5 ಅರ್ಧ ಶತಕ ದಾಖಲಿಸಿ 670 ರನ್‌ಗಳನ್ನು ಗಳಿಸಿದ್ದರು. ಬರೊಬ್ಬರಿ 55.83ರ ಸರಾಸರಿಯಲ್ಲಿ ರಾಹುಲ್ ಬ್ಯಾಟ್ ಬೀಸಿದ್ದರು. ಅದಕ್ಕೂ ಹಿಂದೆ ಕಳೆದ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ರಾಹುಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು.

"ಆಟಗಾರನನ್ನು ತಂಡದಿಂದ ಹೊರಗಿಡುವುದು ಯಾವುದೇ ರೀತಿಯಲ್ಲೂ ಆತನ ಪರವಾಗಿರುವಂತೆ ಮಾಡುವುದಿಲ್ಲ. ಆತ ಮೂರು ಏಕದಿನ ಪಂದ್ಯಗಳಲ್ಲೂ ಆಡಬೇಕು. ಯಾರಾದರೂ ಫಾರ್ಮ್‌ ಕಳೆದುಕೊಂಡರೆ ಅದನ್ನು ಗಳಿಸಲು ಆತನಿಗೆ ಹೆಚ್ಚಿನ ಅವಕಾಶವನ್ನು ನೀಡುವುದು ಮಾತ್ರವೇ ಏಕೈಕ ದಾರಿಯಾಗಿದೆ" ಎಂದು ಗಂಭೀರ್ ಹೇಳಿದ್ದಾರೆ.

"ಮೀವು ಬೆಂಚ್‌ಮಲ್ಲಿ ಕಾಯುತ್ತಿದ್ದೀರಿ ಎಂದಾದರೆ ಅದು ಉತ್ತಮ ಅನುಭವವಲ್ಲ. ಯಾಕೆಂದರೆ ನೀವು ಸ್ಥಾನವನ್ನು ಕಳೆದುಕೊಂಡಿದ್ದೀರಿ ಎಂಬುದು ನಿಮಗೆ ತಿಳಿದಿದೆ. ಆ ಭಾವನೆ ಖಂಡಿಯಾ ಉತ್ತಮ ಭಾವನೆಯಲ್ಲ ಎಂದು ಗಂಭೀರ್ ಹೇಳಿಕೆಯನ್ನು ನೀಡಿದ್ದಾರೆ.

Story first published: Monday, March 22, 2021, 23:18 [IST]
Other articles published on Mar 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+