Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ವಿರಾಟ್‌ ಕೊಹ್ಲಿ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

ಶನಿವಾರ ಮಧ್ಯಾಹ್ನ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟವನ್ನು ನಡೆಸಿದವು. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ಈ ಪಂದ್ಯದಲ್ಲಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಡೆಲ್ಲಿಗೆ ತಾನು ಅಂದುಕೊಂಡತಹ ಆರಂಭ ಸಿಗಲಿಲ್ಲ. ಆದರೆ ಆರಂಭಿಕ ಆಟಗಾರ ಮನಮೋಹಕ ಬ್ಯಾಟಿಂಗ್ ನಡೆಸಿದರು.

ಖಲೀಲ್‌ ಅಹ್ಮದ್ ಎಸೆದ ಮೊದಲ ಓವರ್‌ನಲ್ಲಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಇಲ್ಲದ ಶಾಟ್‌ಗೆ ಮುಂದಾಗಿ ಔಟ್ ಆದರು. ಒಂದು ವಿಕೆಟ್‌ ಬೇಗನೆ ಬೀಳುತ್ತಿದ್ದಂತೆ ಕೆಎಲ್ ರಾಹುಲ್ ಸೇರಿಕೊಂಡ ಯುವ ಆಟಗಾರ ಅಭಿಷೇಕ್‌ ಪೋರೆಲ್‌ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಪವರ್‌ ಪ್ಲೇನಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಂಡರು. ಈ ಜೋಡಿ ಎರಡನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಅಭಿಷೇಕ್‌ 33 ರನ್‌ ಸಿಡಿಸಿ ಔಟ್ ಆದರು.

KL Rahul Equals Virat Kohli s IPL Record with Brilliant 77 Against CSK

ರಾಹುಲ್ ಅರ್ಧಶತಕ

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್‌ ಪ್ರಸಕ್ತ ಐಪಿಎಲ್‌ನಲ್ಲಿ ಎರಡನೇ ಪಂದ್ಯವನ್ನು ಆಡಿದರು. ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ಅಬ್ಬರಿಸಿದರು. ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸಲು ನೆರವಾದರು. ಇವರು 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕ ಬಾರಿಸುತ್ತಿದ್ದಂತೆ ರಾಹುಲ್‌ ಗೇರ್ ಶಿಫ್ಟ್ ಮಾಡಿದರು. ಅಂತಿಮವಾಗಿ ಕೆಎಲ್‌ ರಾಹುಲ್ 51 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 77 ರನ್‌ ಸಿಡಿಸಿ ಔಟ್ ಆದರು. ಈ ಅಮೋಘ ಇನಿಂಗ್ಸ್‌ ಮೂಲಕ ರಾಹುಲ್‌ ದಾಖಲೆ ಬರೆದರು.

ವಿರಾಟ್ ದಾಖಲೆ ಸರಿಗಟ್ಟಿದ ರಾಹುಲ್

ಕೆಎಲ್ ರಾಹುಲ್‌ 38 ಅರ್ಧಶತಕ ಬಾರಿಸಿ ಅಬ್ಬರಿಸಿದರು. ಅಲ್ಲದೆ ಐಪಿಎಲ್‌ನಲ್ಲಿ ಇವರ ಬ್ಯಾಟ್‌ನಿಂದ 4 ಶತಕಗಳು ಬಂದಿವೆ. ಈ ಅಮೋಘ ಇನಿಂಗ್ಸ್‌ ಮೂಲಕ ಕೆಎಲ್ ರಾಹುಲ್ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ರಾಹುಲ್‌ ಆರಂಭಿಕನಾಗಿ ಐಪಿಎಲ್‌ನಲ್ಲಿ 40ನೇ ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ರಾಹುಲ್‌ ವಿರಾಟ್ ಕೊಹ್ಲಿ ಅವರ ದಾಖಲೆ ಸರಿಗಟ್ಟಿದರು. ಆರಂಭಿಕನಾಗಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅವರ ದಾಖಲೆಯನ್ನು ರಾಹುಲ್ ಸರಿ ಗಟ್ಟಿದ್ದಾರೆ.

KL Rahul Equals Virat Kohli s IPL Record with Brilliant 77 Against CSK

ವಾರ್ನರ್‌ಗೆ ಅಗ್ರ ಸ್ಥಾನ

ಐಪಿಎಲ್‌ನಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಡೇವಿಡ್ ವಾರ್ನರ್‌ಗೆ ಅಗ್ರಸ್ಥಾನ. ಇವರು 60 ಬಾರಿ 50ಕ್ಕೂ ಹೆಚ್ಚು ರನ್‌ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಶಿಖರ್‌ ಧವನ್‌ಗೆ ಎರಡನೇ ಸ್ಥಾನ. ಇವರ ಬುಟ್ಟಿಯಲ್ಲಿ 49 ಅರ್ಧಶತಗಳು ಇವೆ. ಇನ್ನು ಮೂರನೇ ಸ್ಥಾನವನ್ನು ವಿರಾಟ್ ಕೊಹ್ಲಿ, ಕೆಎಲ್‌ ರಾಹುಲ್‌ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

Story first published: Saturday, April 5, 2025, 20:38 [IST]
Other articles published on Apr 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+