ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕನ್ನಡಿಗ KL Rahul ಆಟ ಕಾರಣ
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಸೋಲಿನ ಭೀತಿಯನ್ನು ಅನುಭವಿಸುತ್ತಿತ್ತು. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಇರಾದೆಯೊಂದಿಗೆ ಡೆಲ್ಲಿ ಮೈದಾನಕ್ಕೆ ಇಳಿಯಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ರಾಯಲ್ಸ್ ತಂಡದ ಸ್ಫೋಟಕ ಆಟಗಾರರಾದ ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ನಿರಾಸೆ ಅನುಭವಿಸಿದರು. ರಿಯಾನ್ ಪರಾಗ್ (90) ಹಾಗೂ ಧ್ರುವ್ ಜುರೇಲ್ (42), ಡೊನೊವನ್ ಫೆರೀರಾ (47) ತಂಡದ ಮೊತ್ತ ಹಿಗ್ಗಿಸುವಲ್ಲಿ ಶ್ರಮಿಸಿದರು. ಅಂತಿಮವಾಗಿ ಆರ್‌ಆರ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 225 ರನ್ ಸೇರಿಸಿತು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಅವರಿಗೆ ಆರಂಭದಲ್ಲೇ ಖೆಡ್ಡಾ ತೋಡಿದ್ದು ಸಹ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಕೆಎಲ್ ರಾಹುಲ್ ಹಾಗೂ ಪತುಮ್ ನಿಸ್ಸಂಕಾ ಜೋಡಿ (62) ಶತಕದ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಕೆಎಲ್ ರಾಹುಲ್ ಈ ಪಂದ್ಯದಲ್ಲಿ ತಮ್ಮ ಕ್ಲಾಸ್ ಆಟದ ಪರಿಚಯವನ್ನು ನೀಡಿದರು. ಕೆಟ್ಟ ಎಸೆತಗಳನ್ನು ಬೌಂಡರಿ ಗೆರೆ ದಾಟಿಸುತ್ತಾ ಸ್ಟ್ರೈಕ್ ರೋಟೇಟ್ ಮಾಡಿದ ರಾಹುಲ್ ಆರ್ಭಟಿಸಿದರು.
ಇವರೇ ಗೆಲುವಿನ ಹೀರೋ
ಕೆಎಲ್ ರಾಹುಲ್ ಆರ್‌ಸಿಬಿ ವಿರುದ್ಧ ಕಂಡಿದ್ದ ನಿರಾಸೆಯಿಂದ ಪಾಠ ಕಲಿತು ಬ್ಯಾಟ್ ಮಾಡಿದಂತೆ ಕಂಡು ಬಂದಿತು. ಇವರು 40 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 75 ರನ್ ಸಿಡಿಸಿದರು. ಇವರ ಇನಿಂಗ್ಸ್ ರಾಯಲ್ಸ್ ಕೈಯಿಂದ ಗೆಲುವನ್ನು ಕಸಿದುಕೊಂಡು ಡೆಲ್ಲಿ ಪರ ವಾಲುವಂತೆ ಮಾಡಿದರು. ಈ ಮೂಲಕ ಡೆಲ್ಲಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಹೆಗ್ಗಳಿಕೆಗೆ ಈ ಪಂದ್ಯ ಸಾಕ್ಷಿಯಾಯಿತು. ಅಂತಿಮವಾಗಿ ಡೆಲ್ಲಿ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 226 ರನ್ ಸೇರಿಸಿತು.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 225 ರನ್: ರಿಯಾನ್ ಪರಾಗ್ 90, ಧ್ರುವ್ ಜುರೇಲ್ 42, ರವೀಂದ್ರ ಜಡೇಜಾ 20, ಡೊನೊವನ್ ಫೆರೀರಾ 47, ಮಿಚೆಲ್ ಸ್ಟಾರ್ಕ್ 40 ರನ್‌ಗೆ 3 ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 226 ರನ್: ಪತುಮ್ ನಿಸ್ಸಂಕಾ 62, ಕೆಎಲ್ ರಾಹುಲ್ 75, ನಿತೀಶ್ ರಾಣಾ 33, ಆಶುತೋಷ್ ಶರ್ಮಾ ಅಜೇಯ 25, ತುಷಾರ್ ದೇಶಪಾಂಡೆ 38ಕ್ಕೆ 1
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications