For Quick Alerts
ALLOW NOTIFICATIONS  
For Daily Alerts
 

KL Rahul: 51 ರನ್‌ ಬಾರಿಸುತ್ತಿದ್ದಂತೆ ಕೆಎಲ್‌ ರಾಹುಲ್‌ ದೊಡ್ಡ ದಾಖಲೆ

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಕರ್ನಾಟದ ಸ್ಟಾರ್ ಆಟಗಾರ ಕೆಎಲ್ ರಾಹುಲ್‌, ಮಂಗಳವಾರ ಲಕ್ನೋ ಸೂಪರ್‌ ಜೈಂಟ್ಸ್ (Lucknow Super Giants) ವಿರುದ್ಧ ಕಣಕ್ಕೆ ಇಳಿಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ರಾಹುಲ್ ಈ ಹಿಂದೆ ಲಕ್ನೋ ತಂಡದ ಪರ ನಾಯಕರಾಗಿ ಕಾಣಿಸಿಕೊಂಡಿದ್ದರು. ಏ.22 ರಂದು ಅದೇ ತಂಡದ ವಿರುದ್ಧ ಕಣಕ್ಕೆ ಇಳಿಯಲಿರುವ ರಾಹುಲ್‌ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಕೆಎಲ್ ರಾಹುಲ್‌ (KL Rahul) ಈ ಬಾರಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪರ ಒಬ್ಬ ನುರಿತ ಬ್ಯಾಟರ್‌ ಆಗಿ ಕಾಣಿಸಿಕೊಂಡಿದ್ದಾರೆ. ಇವರು ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್‌ಗೆ ಬಲ ತುಂಬಿದ ಆಟಗಾರ. ರಾಹುಲ್‌ ತಮ್ಮ ಹಳೆಯ ತಂಡದ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಇವರ ಕಣ್ಣುಗಳು ಡೇವಿಡ್ ವಾರ್ನರ್‌ ಅವರ ದಾಖಲೆಯ ಮೇಲೆ ನೆಟ್ಟಿರಲಿದೆ. ಆ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

KL Rahul Eyes Massive IPL Milestone with 51-Run Knock Against Former Team LSG

33 ವರ್ಷದ ರಾಹುಲ್‌ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 128 ಇನಿಂಗ್ಸ್‌ ಆಡಿದ್ದಾರೆ. ಈ ವೇಳೆ 45ರ ಸರಾಸರಿಯಲ್ಲಿ 4949 ರನ್‌ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಇವರು 51 ರನ್‌ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾದರೆ, ದೊಡ್ಡ ದಾಖಲೆಯನ್ನು ಬರೆಯಬಹುದು.

ಡೇವಿಡ್‌ ವಾರ್ನರ್‌ ದಾಖಲೆಯ ಮೇಲೆ ಕಣ್ಣು

ರಾಹುಲ್ ತಮ್ಮ ಹಳೆಯ ತಂಡದ ವಿರುದ್ಧ 51 ರನ್‌ ಬಾರಿಸಿದ್ದೇ ಆದಲ್ಲಿ ಐಪಿಎಲ್‌ನಲ್ಲಿ ವೇಗವಾಗಿ 5 ಸಾವಿರ ರನ್‌ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಗುರಿಯಾಗಬಹುದು. ಐಪಿಎಲ್‌ನಲ್ಲಿ ವೇಗವಾಗಿ 5 ಸಾವಿರ ರನ್‌ ಕಲೆ ಹಾಕಿದ ಕೀರ್ತಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರಿಗೆ ಸಲ್ಲುತ್ತದೆ. ಇವರು 135 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಈ ಸಾಧನೆಯನ್ನು ಮಾಡಲು 157 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು.

ಡೆಲ್ಲಿ ಪರ ಗರಿಷ್ಠ ರನ್

ಕೆಎಲ್ ರಾಹುಲ್‌ ಪ್ರಸಕ್ತ ಐಪಿಎಲ್‌ (IPL 2025) ನಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ ಆಗಿ ಕಾಣಿಸಿಕೊಂಡಿರುವ ಆಟಗಾರ. ಇಲ್ಲಿಯವರೆಗೆ ಇವರು ಡೆಲ್ಲಿ ಪರ ಆಡಿದ 6 ಪಂದ್ಯಗಳ 6 ಇನಿಂಗ್ಸ್‌ಗಳಲ್ಲಿ 53.20 ಸರಾಸರಿಯಲ್ಲಿ 266 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 2 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಇನ್ನು ಈ ಆವೃತ್ತಿಯಲ್ಲಿ ರಾಹುಲ್‌ ಡೆಲ್ಲಿ ತಂಡದ ಪರ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೊಗಸಾದ ಪ್ರದರ್ಶನ ನೀಡಿದ್ದರ ಹಿಂದೆ ಕೆಎಲ್ ರಾಹುಲ್ ಅವರ ಶ್ರಮವಿದೆ.

ರಾಹುಲ್‌ ಸಾಧನೆ

ಕೆಎಲ್‌ ರಾಹುಲ್‌ ತಮ್ಮ ಐಪಿಎಲ್‌ ವೃತ್ತಿ ಜೀವನವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆರಂಭಿಸಿದರು. ಇವರು ಆರ್‌ಸಿಬಿ ಪರ 2013ರಲ್ಲಿ ಚೊಚ್ಚಲ ಪಂದ್ಯವನ್ನು ಆಡಿದರು. ಬಳಿಕ ಇವರು ಎರಡು ಆವೃತ್ತಿಗಳಲ್ಲಿ ಎಸ್‌ಆರ್‌ಎಚ್‌ ತಂಡದ ಪರ ಕಾಣಿಸಿಕೊಂಡಿದ್ದಾರೆ. 2016ರಲ್ಲಿ ಮತ್ತೆ ಇವರು ಆರ್‌ಸಿಬಿ ಪರ ಕಣಕ್ಕೆ ಇಳಿದರು. ಮತ್ತೆ ಇವರು ಮೆಗಾ ಹರಾಜಿನಲ್ಲಿ ಪಂಜಾಬ್‌ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕೆ ಇಳಿದು ಸೈ ಎನಿಸಿಕೊಂಡಿದ್ದಾರೆ.

Story first published: Tuesday, April 22, 2025, 12:41 [IST]
Other articles published on Apr 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+