KL Rahul: 4 ಸಿಕ್ಸರ್ ಬಾರಿಸುತ್ತಿದ್ದಂತೆ ದಾಖಲೆ ಬರೆಯಲಿರುವ ರಾಹುಲ್
ಐಪಿಎಲ್‌ನಲ್ಲಿ ಸ್ಟಾರ್ ಆಟಗಾರರು ಕಮಾಲ್ ಪ್ರದರ್ಶನ ನೀಡುತ್ತಲೇ ಇದ್ದಾರೆ. ಈ ಶ್ರೀಮಂತ ಲೀಗ್‌ನಲ್ಲಿ ಬ್ಯಾಟರ್‌ಗಳು ಆರ್ಭಟಕ್ಕೆ ಕಡಿವಾಣ ಹಾಕುವುದೇ ಬೌಲರ್‌ಗಳೇ ಬಿಗ್ ಚಾಲೆಂಜ್. ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟರ್‌ಗಳು ಆರ್ಭಟ ನಡೆಸಿರುತ್ತಾರೆ. ಇದೇ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ಕನ್ನಡಿಗ ಕೆಎಲ್ ರಾಹುಲ್. ಈ ಬಾರಿಯ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲಿದ್ದಾರೆ.
ರಾಹುಲ್ ಅವರನ್ನು ಐಪಿಎಲ್ ಹರಾಜಿಗೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೈ ಬಿಟ್ಟಿತ್ತು. ಇವರು 2 ಕೋಟಿಯ ಮೂಲ ಬೆಲೆಯೊಂದಿಗೆ ಹರಾಜು ಅಖಾಡ ಪ್ರವೇಶಿಸಿದರು. ಈ ವೇಳೆ ಇವರನ್ನು ಕೊಳ್ಳಲು ಜಿದ್ದು ಕಂಡಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ಬಿಡುವ ಯಾವ ಲಕ್ಷಣಗಳನ್ನು ಮಾಡಲಿಲ್ಲ. ಕೊನೆಗೆ ರಾಹುಲ್ 14 ಕೋಟಿ ರೂಪಾಯಿಯೊಂದಿಗೆ ಡಿಸಿ ತಂಡದ ಪಾಲಾದ್ರು. ಈ ಬಾರಿಯ ಐಪಿಎಲ್‌ನಲ್ಲಿ ರಾಹುಲ್ ಡೆಲ್ಲಿ ತಂಡದ ಪರ ಬ್ಯಾಟ್ ಮಾಡಲಿದ್ದಾರೆ.

ಕೆಎಲ್ ರಾಹುಲ್ ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅವರ ಮನೆಗೆ ಹೊಸ ಅತಿಥಿಯ ಆಗಮನ ವಾಗಲಿದ್ದು, ರಾಹುಲ್ ಅವರ ಕುಟುಂಬಸ್ಥರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಬಾರಿ ರಾಹುಲ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಬಹುದು. ಇವರು ಬಹಳ ದಿನಗಳ ಬಳಿಕ ಶ್ರೀಮಂತ ಲೀಗ್‌ನಲ್ಲಿ ಒಬ್ಬ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಹುಲ್ ಈ ಟೂರ್ನಿಯಲ್ಲಿ ಹಲವು ವರ್ಷಗಳ ಕಾಲ ನಾಯಕತ್ವ ವಹಿಸಿದ್ದರು. ರಾಹುಲ್ ಈ ಬಾರಿ ಬ್ಯಾಟ್ ಮಾಡಲು ಇಳಿಯುತ್ತಿದ್ದಂತೆ ಇವರ ಕಣ್ಣುಗಳು ದಾಖಲೆಯ ಮೇಲೆ ನೆಟ್ಟಿರಲಿವೆ.
4 ಸಿಕ್ಸರ್ ಬಾರಿಸಿದರೆ ದಾಖಲೆ
ಈ ಬಾರಿಯ ಐಪಿಎಲ್‌ನಲ್ಲಿ ರಾಹುಲ್ ಹೆಸರಿನಲ್ಲಿ ಒಂದು ದೊಡ್ಡ ದಾಖಲೆ ದಾಖಲಾಗಲಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರಲ್ಲಿ ಅವರು ಶೇನ್ ವ್ಯಾಟ್ಸನ್‌ರನ್ನು ಹಿಂದಿಕ್ಕಬಹುದು. ಕೆಎಲ್ ರಾಹುಲ್ ಡಿಸಿ ಪರ ಆರಂಭಿಕರಾಗಿ ಕಾಣಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಇವರು ಆರಂಭಿಕರಾಗಿ ಆಡಿದ್ರೆ ಇವರಿಗೆ ಶೇನ್ ವ್ಯಾಟ್ಸನ್ ದಾಖಲೆ ಮುರಿಯಲು ಬೆಸ್ಟ್ ಚಾನ್ಸ್. ರಾಹುಲ್ ಐಪಿಎಲ್‌ನಲ್ಲಿ 132 ಪಂದ್ಯಗಳಲ್ಲಿ 187 ಸಿಕ್ಸರ್ ಬಾರಿಸಿದ್ದಾರೆ. ಶೇನ್ ವ್ಯಾಟ್ಸನ್ 145 ಪಂದ್ಯಗಳಲ್ಲಿ 190 ಸಿಕ್ಸರ್ ಚಚ್ಚಿದ್ದಾರೆ. ರಾಹುಲ್ ಇನ್ನು 4 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ಅವರು ಶೇನ್ ವ್ಯಾಟ್ಸನ್ ದಾಖಲೆಯನ್ನು ಹಿಂದಿಕ್ಕಬಹುದು. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್ ಸದ್ಯ 12ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 10 ಆಟಗಾರರು
- ಕ್ರಿಸ್ ಗೇಲ್, 142 ಪಂದ್ಯ, 357 ಸಿಕ್ಸರ್
- ರೋಹಿತ್ ಶರ್ಮಾ, 257 ಪಂದ್ಯ, 280 ಸಿಕ್ಸರ್
- ವಿರಾಟ್ ಕೊಹ್ಲಿ, 252 ಪಂದ್ಯ, 272 ಸಿಕ್ಸರ್
- ಎಂಎಸ್ ಧೋನಿ, 264 ಪಂದ್ಯ, 252 ಸಿಕ್ಸರ್
- ಎಬಿಡಿ ವಿಲಿಯರ್ಸ್, 184 ಪಂದ್ಯ, 251 ಸಿಕ್ಸರ್
- ಡೇವಿಡ್ ವಾರ್ನರ್, 184 ಪಂದ್ಯ, 236 ಸಿಕ್ಸರ್
- ಕಿರನ್ ಪೋಲಾರ್ಡ್, 189 ಪಂದ್ಯ, 223 ಸಿಕ್ಸರ್
- ಆಂಡ್ರಿ ರಸೆಲ್, 127 ಪಂದ್ಯ, 209 ಸಿಕ್ಸರ್
- ಸಂಜು ಸ್ಯಾಮ್ಸನ್, 168 ಪಂದ್ಯ, 206 ಸಿಕ್ಸರ್
- ಸುರೇಶ್ ರೈನಾ, 205 ಪಂದ್ಯ, 203 ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications