KL Rahul: ಮುಂಬೈ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸರ್ ಬಾರಿಸುತ್ತಿದ್ದಂತೆ ರಾಹುಲ್ ದಾಖಲೆ
ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಪ್ರಸಕ್ತ ಐಪಿಎಲ್ ಲೀಗ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ಪ್ಲೇಯರ್ ತಮ್ಮ ಅಮೋಘ ಫಾರ್ಮ್‌ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೆಂಗಳೂರಿನಲ್ಲಿ ಜಯದ ಮಾಲೆ ತೊಡಿಸಿದ್ದರು. ಈ ಸ್ಟಾರ್ ಪ್ಲೇಯರ್ ತಮ್ಮ ಅತ್ಯುತ್ತಮ ಲಯದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ವಿರುದ್ಧ ಪಂದ್ಯವನ್ನು ಆಡಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರ ಮೇಲೆ ನೆಟ್ಟಿರಲಿವೆ.
ಸಂಘಟಿತ ಆಟದ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಅಜೇಯ ಓಟವನ್ನು ಮುಂದುವರೆಸಿದೆ. ಈ ವೇಳೆ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಡೆಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸು ಇರಾದೆಯನ್ನು ಹೊಂದಿದೆ. ಸತತ ಕಳಪೆ ಪ್ರದರ್ಶನ ನೀಡುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಹುಲ್ ದೊಡ್ಡ ದಾಖಲೆಯನ್ನು ಬರೆಯುವ ಸನಿಹದಲ್ಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್ ತಮ್ಮ ಸಿಕ್ಸರ್‌ಗಳ ಮೂಲಕ ತಂಡಕ್ಕೆ ನೆರವಾಗುತ್ತಾರೆ. ಈ ಸಿಕ್ಸರ್ ಬಾರಿಸುವ ವಿಷಯದಲ್ಲಿ ಕೆಎಲ್ ರಾಹುಲ್ ನಿಸ್ಸೀಮರು. ಕೆಎಲ್ ರಾಹುಲ್ ಸಾಮಾನ್ಯವಾಗಿ ತಮ್ಮ ಶಾಂತ ಸ್ವಭಾವದ ಆಟಕ್ಕೆ ಹೆಸರುವಾಸಿ. ಒಮ್ಮೆ ಅವರು ಮೈದಾನದಲ್ಲಿ ತಳವೂರಿ ನಿಂತಲ್ಲಿ ಬಿಗ್ ಹಿಟ್‌ಗಳು ಸಲೀಸಾಗಿ ಬರುತ್ತವೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಹೊಸ ಸಾಧನೆ ಮಾಡಬಹುದಾಗಿದೆ. ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳ ಮಾರ್ಕ್ ಮುಟ್ಟಲು ಕೆಎಲ್‌ಗೆ ಇನ್ನು ಮೂರು ಸಿಕ್ಸರ್‌ಗಳ ಅವಶ್ಯಕತೆ ಇದೆ.
ದಾಖಲೆಯ ಹೊಸ್ತಿಲಲ್ಲಿ ರಾಹುಲ್
ಆರ್‌ಸಿಬಿ ವಿರುದ್ಧ ರಾಹುಲ್ ಆಡಿದ ಧಾಟಿಯಲ್ಲೇ ಬ್ಯಾಟ್ ಮಾಡಿದರೆ, ಕೆಎಲ್ ರಾಹುಲ್ ಈ ಮೈಲಿಗಲ್ಲನ್ನು ಸುಲಭವಾಗಿ ಮುಟ್ಟ ಬಹುದು. ಮುಂಬೈ ಇಂಡಿಯನ್ಸ್ ವಿರುದ್ಧದ ಮುಂಬರುವ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಮತ್ತೊಂದು ಸಾಧನೆ ಮಾಡಬಹುದು. ಮುಂಬೈ ಇಂಡಿಯನ್ಸ್ ವಿರುದ್ಧ 1000 ರನ್ ಪೂರ್ಣಗೊಳಿಸಲು ಅವರಿಗೆ ಕೇವಲ 50 ರನ್‌ಗಳು ಬೇಕು. ರಾಹುಲ್ ಈ ಎರಡರಲ್ಲಿ ಯಾವ ದಾಖಲೆಗೆ ತಮ್ಮ ಹೆಸರನ್ನು ಬೇಗ ನಮೂದಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರಿಗೆ ಸಲ್ಲುತ್ತದೆ. ಇವರು ಆಡಿದ 142 ಪಂದ್ಯಗಳಲ್ಲಿ 357 ಸಿಕ್ಸರ್ ಸಿಡಿಸಿದ್ದಾರೆ.
ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಸ್
ಕ್ರಿಸ್ ಗೇಲ್, 357
ರೋಹಿತ್ ಶರ್ಮಾ, 282
ವಿರಾಟ್ ಕೊಹ್ಲಿ, 280
ಎಂ ಎಸ್ ಧನಿ, 259
ಎಬಿಡಿ ವಿಲಿಯರ್ಸ್, 251
ಡೇವಿಡ್ ವಾರ್ನರ್, 236
ಕಿರನ್ ಪೋಲಾರ್ಡ್, 223
ಸಂಜು ಸ್ಯಾಮ್ಸನ್, 213
ಆಂಡ್ರೆ ರಸೆಲ್, 210
ಸುರೇಶ್ ರೈನಾ, 203
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications