Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟಿ20ಐ ಶ್ರೇಯಾಂಕ : ಕೆಎಲ್ ರಾಹುಲ್, ಫಿಂಚ್ ಭರ್ಜರಿ ಜಿಗಿತ!

ಟಿ20ಐ ಶ್ರೇಯಾಂಕದಲ್ಲಿ ಕೆಎಲ್ ರಾಹುಲ್, ಫಿಂಚ್ ಭರ್ಜರಿ ಜಿಗಿತ! | Oneindia Kannada
KL Rahul, Finch make big gains in ICC T20I rankings

ಬೆಂಗಳೂರು, ಜುಲೈ 09: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಅರೋನ್ ಫಿಂಚ್, ಪಾಕಿಸ್ತಾನದ ಫಖಾರ್ ಜಮಾನ್ ಹಾಗೂ ಭಾರತ ಕೆಎಲ್ ರಾಹುಲ್ ಅವರು ಐಸಿಸಿ ಪ್ರಕಟಿಸಿರುವ ಟಿ20ಐ ಶ್ರೇಯಾಂಕದಲ್ಲಿ ಮೊದಲ ಮೂರು ಸ್ಥಾನಕ್ಕೇರಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದ ಬಳಿಕ ಶ್ರೇಯಾಂಕ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಟಿ20ಐ ಸರಣಿಯಲ್ಲಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮ ಶತಕ ಸಿಡಿಸಿ, ಉತ್ತಮ ಪ್ರದರ್ಶನ ನೀಡಿದರು.

ಇತ್ತ ಫಿಂಚ್ ಅವರು ಆಸ್ಟ್ರೇಲಿಯಾದ ಟಿ20ಐ ತಂಡದ ನೂತನ ನಾಯಕರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಂಬಾಬ್ವೆ, ಪಾಕಿಸ್ತಾನ ಜತೆಗಿನ ತ್ರಿಕೋನ ಸರಣಿಯಲ್ಲಿ 68, 172(ವಿಶ್ವದಾಖಲೆ), 16, 3 ಹಾಗೂ 47ರನ್ ಗಳಿಸಿದರು. ಇಂಗ್ಲೆಂಡ್ ವಿರುದ್ಧ 84ರನ್ ಗಳಿಸಿ, ನಂ.4 ಸ್ಥಾನದಿಂದ ನಂ 1 ಬ್ಯಾಟ್ಸ್ ಮನ್ ಸ್ಥಾನಕ್ಕೇರಿದರು.

ಇನ್ನು ಪಾಕಿಸ್ತಾನದ ಜಮಾನ್ ಅವರು, ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ 46 ಎಸೆತಗಳಲ್ಲಿ 91ರನ್ ಗಳಿಸಿ, ತಂಡದ ಮೊತ್ತ 183/8 ದಾಟುವಂತೆ ಮಾಡಿ, ಪಾಕಿಸ್ತಾನಕ್ಕೆ ಕಪ್ ಗೆಲ್ಲಲು ನೆರವಾದರು.

ಜಮಾನ್ ಅವರು ಸರಣಿಯಲ್ಲಿ 61,6,47, 73 ಹಾಗೂ 91ರನ್ ಗಳಿಸಿ, 842 ಅಂಕಗಳೊಂದಿಗೆ 44 ಸ್ಥಾನಗಳು ಜಿಗಿದು, 2ಸ್ಥಾನಕ್ಕೇರಿದ್ದಾರೆ. 812 ಅಂಕಗಳೊಂದಿಗೆ ಕೆಎಲ್ ರಾಹುಲ್ ಅವರು (101, 6 ಹಾಗೂ 19ರನ್)ಮೂರನೇ ಸ್ಥಾನಕ್ಕೇರಿದ್ದಾರೆ.

Story first published: Monday, July 9, 2018, 17:53 [IST]
Other articles published on Jul 9, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+