ಶ್ರೀಲಂಕಾ ವಿರುದ್ಧದ ಟಿ20ಯಲ್ಲಿ ದಾಖಲೆ ಬರೆದ ಕೆಎಲ್ ರಾಹುಲ್

Posted By:
ಶ್ರೀಲಂಕಾ ವಿರುದ್ಧದ ಟಿ20ಯಲ್ಲಿ ದಾಖಲೆ ಬರೆದ ಕೆಎಲ್ ರಾಹುಲ್ | Oneindia Kannada
KL Rahul First Indian to be out hit-wicket in a T20i

ಕೊಲಂಬೋ, ಮಾರ್ಚ್ 13: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ (ಮಾರ್ಚ್ 12) ಸಂಜೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರು ದಾಖಲೆ ಪುಟ ಸೇರಿದ್ದಾರೆ. ಬ್ಯಾಟ್ ಮೂಲಕ ಹೆಚ್ಚು ಕೊಡುಗೆ ನೀಡಲಾಗದಿದ್ದರೂ, ರಾಹುಲ್ ಔಟ್ ಆದ ರೀತಿ ಹೊಸ ಸಾಧನೆ ಎನಿಸಿಕೊಂಡಿದೆ.

ರಾಹುಲ್ ಅವರು ಹಿಟ್ ವಿಕೆಟ್ ಮಾಡುವ ಮೂಲಕ ಔಟಾದರು. ಈ ಮೂಲಕ ಟಿ20 ಆಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಈ ರೀತಿ ಔಟಾದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.

ಸ್ಕೋರ್ ಕಾರ್ಡ್

ಶ್ರೀಲಂಕಾದ ಸ್ಪಿನ್ನರ್ ಜೀವನ್ ಮೆಂಡಿಸ್ ಓವರ್ ನಲ್ಲಿ ಕೆಎಲ್ ರಾಹುಲ್ ಅವರು ಕ್ರೀಸ್ ನ ಹಿಂಬಸಿ ಸರಿಯುವ ಭರದಲ್ಲಿ ಅವರ ಪಾದವು ವಿಕೆಟ್ ಗೆ ತಗುಲಿ ಬೇಲ್ಸ್ ಉದುರಿತು. 17 ಎಸೆತಗಳಲ್ಲಿ 18 ರನ್ ಗಳಿಸಿದ್ದ ರಾಹುಲ್ ಅವರು ನಿರಾಶೆಯಿಂದ ಪೆವಿಲಿಯನ್ ಗೆ ಮರಳಿದರು.

ಲಾಲಾ ಅಮರನಾಥ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಹಾಗೂ ನಯನ್ ಮೊಂಗಿಯಾ ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹಿಟ್ ವಿಕೆಟ್ ಆದ ಮೊದಲ ಭಾರತೀಯ ಕ್ರಿಕೆಟರ್ ಗಳಾಗಿದ್ದಾರೆ.

ಮತ್ತೊಬ್ಬ ಕರ್ನಾಟಕ ಪರ ಆಟಗಾರ ಮನೀಶ್ ಪಾಂಡೆ ಅವರು 31 ಎಸೆತದಲ್ಲಿ 42 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಇತ್ತು. ಇದು ಭಾರತದ ಗೆಲುವಿಗೆ ನೆರವಾಯಿತು.

Story first published: Tuesday, March 13, 2018, 12:01 [IST]
Other articles published on Mar 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ