Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್‌ ಓಪನರ್ ಆಗಿ ಕೆಎಲ್ ರಾಹುಲ್ ಬದಲು ಅನುಭವಿ ಬ್ಯಾಟ್ಸ್‌ಮನ್‌ಗೆ ಮಣೆ?

‘KL Rahul going through tough time’ - Chief selector MSK Prasad hints at new Test opener

ನವದೆಹಲಿ, ಸೆಪ್ಟೆಂಬರ್ 10: ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಇಳಿಯುತ್ತಿರುವ ಕೆಎಲ್ ರಾಹುಲ್ ಉತ್ತಮ ಪ್ರದರ್ಶನವೇನೂ ನೀಡುತ್ತಿಲ್ಲ. ಹೀಗಾಗಿ ರಾಹುಲ್ ಸ್ಥಾನವನ್ನು ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಆವರಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಭಾರತ ತಂಡದ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಕೂಡ ಇದರ ಉಳಿವು ನೀಡಿದ್ದಾರೆ.

ವಿಶ್ವಕಪ್‌ ಟೂರ್ನಿ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಪಾಲ್ಗೊಂಡಿತ್ತು. ಇದರಲ್ಲಿ ರಾಹುಲ್‌ಗೆ ಆರಂಭಿಕರಾಗಿ ಅವಕಾಶ ನೀಡಲಾಗಿತ್ತು. ಆದರೆ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ರಾಹುಲ್ ಬದಲು ಹಿಟ್‌ಮ್ಯಾನ್‌ ರೋಹಿತ್ ಆರಂಭಿಕರಾಗಿ ಇಳಿಯುವ ಎಲ್ಲಾ ಸಾಧ್ಯತೆಯಿದೆ.

ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಆಡಿರಲಿಲ್ಲ. ಪ್ರವಾಸ ತಂಡದಲ್ಲಿದ್ದ ರೋಹಿತ್, ಟೆಸ್ಟ್‌ ವೇಳೆ ವಿಶ್ರಾಂತಿಯಲ್ಲಿದ್ದರು.

ಪರಿಗಣಿಸಲಿದ್ದೇವೆ

ಪರಿಗಣಿಸಲಿದ್ದೇವೆ

'ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಆಯ್ಕೆ ಸಮಿತಿ ಒಟ್ಟು ಸೇರಿಲ್ಲ. ನಾವು ಖಂಡಿತವಾಗಿಯೂ ರೋಹಿತ್ ಶರ್ಮಾ ಅವರನ್ನು ಆರಂಭಿಕರಾಗಿ ಇಳಿಸುವ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದೇವೆ. ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲ್ಲಿದ್ದೇವೆ,' ಎಂದು ಎಂಎಸ್‌ಕೆ ಪ್ರಸಾದ್ ಇಂಡಿಯಾ ಟುಡೇ ಜೊತೆ ಹೇಳಿಕೊಂಡಿದ್ದಾರೆ.

ನಿಜಕ್ಕೂ ಕಾಳಜಿಯಿದೆ

ನಿಜಕ್ಕೂ ಕಾಳಜಿಯಿದೆ

'ಕೆಎಲ್ ರಾಹುಲ್ ನಿಜಕ್ಕೂ ಪ್ರತಿಭಾನ್ವಿತ ಆಟಗಾರ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು ಸ್ವಲ್ಪ ಪರದಾಡುತ್ತಿದ್ದಾರೆ. ಅವರ ಫಾರ್ಮ್ ಬಗ್ಗೆ ನಮಗೆ ನಿಜಕ್ಕೂ ಕಾಳಜಿಯಿದೆ. ಫಾರ್ಮ್‌ಗೆ ಬರಲು ಅವರು ವಿಕೆಟ್‌ ಕಾವಲು ಕಾಯಬೇಕು. ಆ ಮೂಲಕ ಫಾರ್ಮ್‌ಗೆ ಮರಳಬೇಕಿದೆ,' ಎಂದು ಪ್ರಸಾದ್ ಸೇರಿಸಿದರು. ವಿಂಡೀಸ್ 2 ಟೆಸ್ಟ್‌ಗಳಲ್ಲಿ ರಾಹುಲ್ ಕ್ರಮವಾಗಿ 44, 38, 13, 6 ರನ್‌ ಬಾರಿಸಿದ್ದರು.

ಗಂಗೂಲಿ ಸಲಹೆ

ಗಂಗೂಲಿ ಸಲಹೆ

ಇದಕ್ಕೂ ಮುನ್ನ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ರೋಹಿತ್‌ಗೆ ಅವಕಾಶ ನೀಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರಾಹುಲ್ ಪರದಾಡುತ್ತಿರುವುದನ್ನು ಗಮನಿಸಿದ್ದ ಗಂಗೂಲಿ, ಆರಂಭಿಕರಾಗಿ ರಾಹುಲ್ ಬದಲು ರೋಹಿತ್‌ಗೆ ಅವಕಾಶ ನೀಡಬೇಕು ಎಂದು ಹೇಳಿದ್ದರು. ಗಂಗೂಲಿ ಸಲಹೆಯನ್ನು ಆಯ್ಕೆ ಸಮಿತಿ ಪರಿಗಣಿಸುವ ಸೂಚನೆ ದೊರೆತಿದೆ.

ಸೆಪ್ಟೆಂಬರ್‌ 15ರಿಂದ ಶುರು

ಸೆಪ್ಟೆಂಬರ್‌ 15ರಿಂದ ಶುರು

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸರಣಿ ಸೆಪ್ಟೆಂಬರ್ 15ರಿಂದ 3 ಪಂದ್ಯಗಳ ಟಿ20 ಮೂಲಕ ಆರಂಭಗೊಳ್ಳಲಿದೆ. ಟಿ20 ಬಳಿಕ ಅಂದರೆ ಅಕ್ಟೋಬರ್ 2ರಿಂದ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಟಿ20 ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶುರುವಾದರೆ, ಟೆಸ್ಟ್‌ ಸರಣಿ ಆಂಧ್ರ ಪ್ರದೇಶದ ವಿಶಾಖಪಟ್ನಂನಲ್ಲಿ ಚಾಲನೆಗೊಳ್ಳಲಿದೆ.

Story first published: Tuesday, September 10, 2019, 15:27 [IST]
Other articles published on Sep 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+