Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಕೆಎಲ್ ರಾಹುಲ್‌ಗೆ ಹೊಸ ಹೆಸರು ನೀಡಿದ ಬ್ಯಾಟಿಂಗ್ ಕೋಚ್- ಏನದು?

ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಟ್ರಬಲ್‌ಶೂಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನ ಬೌನ್ಸಿ ಪಿಚ್‌ನಲ್ಲಿ ನಿರಾಸೆ ಅನುಭವಿಸಿದರೆ, ಕೆಎಲ್ ರಾಹುಲ್ ಒನ್ ಮ್ಯಾನ್ ಆರ್ಮಿಯಂತೆ ಗಟ್ಟಿಯಾಗಿ ನಿಂತರು.

ಡಿಸೆಂಬರ್ 26 ಕೆಎಲ್ ರಾಹುಲ್‌ಗೆ ಅದೃಷ್ಟದ ದಿನವಾಗಿದೆ. ಅವರು 2014 ರಲ್ಲಿ ಇದೇ ದಿನದಂದು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2021 ರಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ 121 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಗಮನ ಸೆಳೆದರು. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ರಾಹುಲ್ ಶತಕದ ಸನಿಹದಲ್ಲಿದ್ದಾರೆ. ಕೆಎಲ್ ರಾಹುಲ್ ಅವರ ಈ ಅತ್ಯುತ್ತಮ ಇನ್ನಿಂಗ್ಸ್ ನೋಡಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರಿಗೆ ಹೊಸ ಹೆಸರು ಇಟ್ಟಿದ್ದಾರೆ.

Kl Rahul Got New Name Given by Batting Coach- What Is That?

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್‌ನಲ್ಲಿ 70 ರನ್ ಗಳಿಸಿ ಅಜೇಯರಾಗಿದ್ದಾರೆ. ಈ ವೇಳೆ ಅವರು 105 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಮಳೆ ಬಾಧಿತ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 8 ವಿಕೆಟ್‌ಗೆ 208 ರನ್ ಗಳಿಸಿದೆ. ರಾಹುಲ್ ಜೊತೆಗೆ ಇನ್ನೊಂದು ತುದಿಯಲ್ಲಿ ಮೊಹಮ್ಮದ್ ಸಿರಾಜ್ ಅವರು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶಾರ್ದೂಲ್ ಠಾಕೂರ್ ಜೊತೆಗೆ ರಾಹುಲ್ 43 ರನ್ ಸೇರಿಸಿದರೆ ಬುಮ್ರಾ ಜೊತೆ 27 ರನ್ ಜೊತೆಯಾಟ ನಡೆಸಿದರು. ರಾಹುಲ್ ಸಿರಾಜ್ ಜೊತೆ ಅಜೇಯ 17 ರನ್ ಸೇರಿಸಿದ್ದಾರೆ.

ಕಷ್ಟದ ಸಂದರ್ಭಗಳಲ್ಲಿ ಕೆಎಲ್ ರಾಹುಲ್ ತೋರಿದ ತಾಳ್ಮೆಯನ್ನು ಟೀಮ್ ಇಂಡಿಯಾ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ವಿಕ್ರಮ್ ರಾಥೋಡ್ ಕೂಡ ರಾಹುಲ್ ಬ್ಯಾಟಿಂಗ್‌ನ್ನು ಶ್ಲಾಘಿಸಿದ್ದಾರೆ. ರಾಹುಲ್‌ ನಮ್ಮ ತಂಡಕ್ಕೆ ಟ್ರಬಲ್ ಶೂಟರ್‌ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹಲವು ಬಾರಿ ಸಂಕಷ್ಟದ ಪರಿಸ್ಥಿತಿಯಿಂದ ತಂಡವನ್ನು ಹೊರತರುವಲ್ಲಿ ಕೆಎಲ್ ಯಶಸ್ವಿಯಾಗಿದ್ದಾರೆ. ಅವರು ತಮ್ಮ ಆಟದ ಯೋಜನೆ ಸ್ಪಷ್ಟವಾಗಿದೆ. ಉತ್ತಮ ಎಸೆತಗಳಿಗೆ ಮನ್ನಣೆ ನೀಡಿ ಮತ್ತು ದುರ್ಬಲ ಎಸೆತಗಳಲ್ಲಿ ರನ್ ಗಳಿಸಬೇಕು ಎಂಬುದು ಅವರಿಗೆ ಗೊತ್ತಿದೆ ಎಂದಿದ್ದಾರೆ.

ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಕೀಪಿಂಗ್

ಕೆಎಲ್ ರಾಹುಲ್ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿಗಳ ದಾಳಿಯನ್ನು ರಾಹುಲ್ ಇಲ್ಲಿಯವರೆಗೆ ಉತ್ತಮವಾಗಿ ಎದುರಿಸಿದ್ದಾರೆ. ಪಂದ್ಯದ ಎರಡನೇ ದಿನದಲ್ಲಿ ರಾಹುಲ್ ಶತಕ ಪೂರೈಸುವ ವಿಶ್ವಾಸವನ್ನು ಹೊಂದಿದ್ದಾರೆ. ಇವರಿಗೆ ಟೀಮ್ ಇಂಡಿಯಾದ ಉಳಿದ ಬ್ಯಾಟರ್‌ಗಳ ನೆರವು ಅಗತ್ಯ.

Kl Rahul Got New Name Given by Batting Coach- What Is That?

ರೋಹಿತ್ ಬೆಂಬಲಕ್ಕೆ ಬ್ಯಾಟಿಂಗ್ ಕೋಚ್

ಇನ್ನು ರೋಹಿತ್ ಶರ್ಮಾ ಅವರ ಬಗ್ಗೆಯೂ ಬ್ಯಾಟಿಂಗ್ ಕೋಚ್ ಮಾತನಾಡಿದ್ದಾರೆ. ರೋಹಿತ್ ಹೆಚ್ಚು ರನ್ ಗಳಿಸುವುದೇ ಪುಲ್ ಶಾಟ್ ಗಳಿಂದ. ಆ ಶಾಟ್‌ನಲ್ಲಿ ರೋಹಿತ್ ಶರ್ಮಾ ಅವರಿಗೆ ವಿಶ್ವಾಸವಿದೆ. ಫುಲ್ ಶಾಟ್‌ನಲ್ಲಿ ರೋಹಿತ್ ಅದೆಷ್ಟೋ ಬಾರಿ ಯಶ ಕಂಡಿದ್ದಾರೆ. ಇನ್ನು ಎಷ್ಟೋ ಬಾರಿ ನಿರಾಸೆ ಅನುಭವಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಶಾಟ್ ಸೆಲೆಕ್ಷನ್ ಬಗ್ಗೆ ಯಾವುದೇ ತೊಂದರೆ ಇಲ್ಲ . ಇಲ್ಲ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದಿದ್ದಾರೆ.

Story first published: Wednesday, December 27, 2023, 9:09 [IST]
Other articles published on Dec 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+