Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ವೃದ್ಧಿಮಾನ್ ಸಾಹ ಹೇಳಿದ್ದೇನು?

Kl Rahul Has Adjusted Well To His Role Feels Wriddhiman Saha

ಮಹೇಂದ್ರ ಸಿಂಗ್ ಧೋನಿ ಕಳೆದ ವಿಶ್ವಕಪ್‌ನಿಂದ ಟೀಮ್ ಇಂಡಿಯಾದಿಂದ ದೂರವಾದ ನಂತರ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆ ಎದುರಾಗಿದ್ದಾಗ ಸುಲಭವಾಗಿದ್ದ ಹೆಸರು ರಿಷಭ್ ಪಂತ್. ಆದರೆ ಸಾಕಷ್ಟು ಅವಕಾಶಗಳ ನಂತರವೂ ರಿಷಭ್ ನಿರೀಕ್ಷಿತ ಫಲಿತಾಂಶ ನೀಡಲು ವಿಫಲರಾದರು. ಸಂಜು ಸ್ಯಾಮ್ಸನ್ ಕೂಡ ಸಿಕ್ಕ ಕೆಲ ಅವಕಾಶವನ್ನು ಕೈಚೆಲ್ಲಿಕೊಂಡರು.

ಇಂತಾ ಸಂದರ್ಭದಲ್ಲಿ ಅನಿವಾರ್ಯವಾಗಿ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ಆಗ್ರ ಕ್ರಮಾಂಕದ ಆಟಗಾರ ಕೆಎಲ್ ರಾಹುಲ್‌ಗೆ ವಹಿಸಲಾಯಿತು. ಕನ್ನಡಿಗ ಕೆಎಲ್ ರಾಹುಲ್ ಈ ಹೊಸ ಜವಾಬ್ಧಾರಿಯಲ್ಲೂ ಸೈ ಎನಿಸಿಕೊಂಡು ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈಗ ಟೀಮ್ ಇಂಡಿಯಾದ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ಉತ್ತಮವಾಗಿ ನಿರ್ವಹಣೆ

ಉತ್ತಮವಾಗಿ ನಿರ್ವಹಣೆ

ಕೆಎಲ್ ರಾಹುಲ್ ತನಗೆ ಸಿಕ್ಕ ಜವಾಬ್ಧಾರಿಯನ್ನು ಕೆಟ್ಟದಾಗಿ ನಿರ್ವಹಿಸುತ್ತಿಲ್ಲ. ಬ್ಯಾಟ್ ಹಾಗೂ ವಿಕೆಟ್‌ನ ಹಿಂದೆ ಕೆಎಲ್ ರಾಹುಲ್ ಉತ್ತಮವಾಗಿ ಆಡುತ್ತಿದ್ದಾರೆ. ಅವರು ಅದಕ್ಕೆ ತುಂಬಾ ಚೆನ್ನಾಗಿ ಹೊಂದಾಣಿಕೆಯಾಗುತ್ತಿದ್ದಾರೆ ಎಂದು ವೃದ್ಧಿಮಾನ್ ಸಾಹ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಆತನೊಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್

ಆತನೊಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್

ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲಿ ಇನ್ನಷ್ಟು ಪಳಗುವ ಸಲುವಾಗಿ ರಾಹುಲ್ ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಇದು ಟೀಮ್ ಇಂಡಿಯಾದ ಪಾಲಿಗೆ ಅತ್ಯುತ್ತಮ ವಿಚಾರವಾಗಿದೆ ಎಂದು ಕೆಎಲ್ ರಾಹುಲ್ ಬಗ್ಗೆ ವೃದ್ಧಿಮಾನ್ ಸಾಹ ಹೇಳಿದ್ದಾರೆ.

ಧೋನಿ ಬಗ್ಗೆ ಸಾಹ ಮಾತು

ಧೋನಿ ಬಗ್ಗೆ ಸಾಹ ಮಾತು

"ಆನ್‌ ದಿ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್ ಎರಡರಲ್ಲೂ ಧೋನಿ ಓರ್ವ ದಿಗ್ಗಜ ಆಟಗಾರ. ಆತ ಯಾವಾಗಲೂ ಯಾವಾಗಲೂ ಊಹಿಸಲು ಅಸಾಧ್ಯವಾಗುವಂತಾ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ. ಆತನನ್ನು ನಾನು ಯಾವಾಗಲೂ ಸಕಾರಾತ್ಮಕವಾಗಿಯೇ ನೋಡಿದ್ದೇನೆ. ಆತನ ದೇಹದಲ್ಲಿ ಒಂದೇ ಒಂದು ಋಣಾತ್ಮಕ ಎಲುಬಿಲ್ಲ" ಎಂದು ಧೋನಿಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ

ಧೋನಿಯ ಜೊತೆಗೆ ಒಂದೇ ಬಾರಿ ಆಡುವ ಬಳಗದಲ್ಲಿ

ಧೋನಿಯ ಜೊತೆಗೆ ಒಂದೇ ಬಾರಿ ಆಡುವ ಬಳಗದಲ್ಲಿ

ಟೆಸ್ಟ್ ತಂಡದ ಖಾಯಂ ವಿಕೆಟ್ ಕೀಪರ್ ಎನಿಸಿರುವ ವೃದ್ಧಿಮಾನ್ ಸಾಹ 2010ರಲ್ಲಿ ಟೀಮ್ ಇಂಡಿಯಾಗೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಪದಾರ್ಪಣೆಯನ್ನು ಮಾಡಿದ್ದರು. ವಿಚಿತ್ರವೆಂದರೆ ಈ ಒಂದೇ ಸಂದರ್ಭದಲ್ಲಿ ಧೊನಿ ಹಾಗೂ ವೃದ್ಧಿಮಾನ್ ಸಾಹ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಮತ್ಯಾವತ್ತೂ ಇಬ್ಬರು ಜೊತೆಯಾಗಿ ಆಡುವ ಬಳಗದಲ್ಲಿ ಕಣಕ್ಕಿಳಿಯಲಿಲ್ಲ.

Story first published: Tuesday, August 18, 2020, 15:57 [IST]
Other articles published on Aug 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+