For Quick Alerts
ALLOW NOTIFICATIONS  
For Daily Alerts
 

KL Rahul: ಭಾರತ ತಂಡಕ್ಕೆ ಪೆಟ್ಟು: ಆರಂಭಿಕ ಆಟಗಾರನಿಗೆ ಗಾಯ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಸರಣಿ ನಡೆಯುತ್ತಿದೆ. ಈ ಸರಣಿಯ ನಾಲ್ಕನೇ ಪಂದ್ಯಕ್ಕೆ ಮೆಲ್ಬರ್ನ್‌ ಅಂಗಳ ಸಿದ್ಧವಾಗುತ್ತಿದೆ. ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈಗಾಗಲೇ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು, ಒಂದು ಪಂದ್ಯ ಡ್ರಾ ಆಗಿದ್ದರಿಂದ, ನಾಲ್ಕನೇ ಟೆಸ್ಟ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೆಲ್ಬರ್ನ್‌ ಟೆಸ್ಟ್‌ಗೆ ದಿನಗಣನೆ ಆರಂಭವಾಗಿದೆ. ಈ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ ಕ್ಯಾಂಪ್‌ ನಿಂದ ಕೆಟ್ಟ ಸುದ್ದಿ ಬಂದಿದೆ.

ಮೆಲ್ಬರ್ನ್‌ ಟೆಸ್ಟ್‌ ಆರಂಭಕ್ಕೂ ಮುನ್ನ ಉಭಯ ತಂಡಗಳು ಅಭ್ಯಾಸವನ್ನು ಆರಂಭಿಸಿದವು. ಇದೇ ವೇಳೆ ಟೀಮ್ ಇಂಡಿಯಾ ಸಹ ಅಭ್ಯಾಸ ಆರಂಭಿಸಿತು. ಆರಂಭಿಕ ಆಟಗಾರ ಕರ್ನಾಟಕದ ಕೆಎಲ್ ರಾಹುಲ್ ಸಹ ಈ ವೇಳೆ ಕಾಣಿಸಿಕೊಂಡರು. ಅಲ್ಲದೆ ಇವರು ಅಭ್ಯಾಸ ಮಾಡುವಾಗ ಇವರ ಬಲಗೈಗೆ ಚೆಂಡು ಬಡೆದು ಪೆಟ್ಟಾಗಿದೆ. ಬಳಿಕ ತಂಡದ ಫಿಜಿಯೋ ಸ್ಥಳಕ್ಕೆ ಬಂದು ಉಪಚಾರವನ್ನು ಮಾಡಿದ್ದಾರೆ. ಅವರ ಗಾಯದ ಗಂಭೀರತೆಯ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಬಿಸಿಸಿಐ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಿಲ್ಲ.

KL Rahul Injured Ahead of Fourth Test Against Australia Team India Faces Major Setback

ಭರ್ಜರಿ ಫಾರ್ಮ್‌ನಲ್ಲಿರುವ ಕೆಎಲ್

ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಕೆಎಲ್ ರಾಹುಲ್‌ ತುಂಬ ಮುಖ್ಯ. ಈ ಹಿನ್ನೆಲೆಯಲ್ಲಿ ಇವರು ಸಂಪೂರ್ಣ ಫಿಟ್ ಆಗಿರಲಿ ಎಂದು ಅಭಿಮಾನಿಗಳು ಹರಕೆ ಹೊತ್ತುಕೊಳ್ಳುತ್ತಿದ್ದಾರೆ. ಇನ್ನು ಇವರು ಟೀಮ್ ಇಂಡಿಯಾ ಪರ ಪ್ರಸಕ್ತ ಸರಣಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಆಟಗಾರ. ಅಲ್ಲದೆ ಬೌನ್ಸಿ ಪಿಚ್‌ನಲ್ಲಿ ನೆಲಕ್ಕೂರಿ ನಿಂತು ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರ ಉಪಸ್ಥಿತಿ ತಂಡಕ್ಕೆ ಅನಿವಾರ್ಯ. ಒಂದು ವೇಳೆ ಇವರ ಗಾಯ ಗಂಭೀರ ಸ್ವರೂಪದ್ದಾಗಿದ್ದರೆ, ಆಗ ಟೀಮ್ ಇಂಡಿಯಾಕ್ಕೆ ಇದು ತಲೆ ನೋವಾಗಲಿದೆ.

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಕೆಎಲ್ ರಾಹುಲ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಅಲ್ಲದೆ ನಿಂತು ಆಡಿ ಬಿಗ್ ಇನಿಂಗ್ಸ್ ಕಟ್ಟುವ ಕ್ಷಮತೆಯನ್ನು ತೋರಿಸಿದ್ದಾರೆ. ಇವರು ಆಡಿದ 6 ಇನಿಂಗ್ಸ್‌ಗಳಲ್ಲಿ 47 ಸರಾಸರಿಯಲ್ಲಿ 235 ರನ್ ಗಳಿಸಿದ್ದು, ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಇನ್ನು ಬ್ರಿಸ್ಬೇನ್‌ನಲ್ಲಿ ಟೀಮ್ ಇಂಡಿಯಾ ಫಾಲೋ ಆನ್‌ ತಪ್ಪಿಸಿಕೊಳ್ಳುವಲ್ಲಿ ಇವರ ಕೊಡುಗೆ ಸಹ ದೊಡ್ಡದಿದೆ. ಇವರು ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸುವಲ್ಲಿ ವಿಫಲರಾದರೂ ಸಹ, ಇವರ 84 ರನ್‌ಗಳ ಇನಿಂಗ್ಸ್‌ ಯಾವ ಶತಕಕ್ಕೂ ಕಮ್ಮಿ ಏನು ಇರಲಿಲ್ಲ.

KL Rahul Injured Ahead of Fourth Test Against Australia Team India Faces Major Setback

ಜವಾಬ್ದಾರಿ ನಿಭಾಯಿಸುತ್ತಿರುವ ರಾಹುಲ್

ಟೀಮ್ ಇಂಡಿಯಾ ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನಯಾರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಬೇಕು ಎಂಬ ಚಿಂತೆಯಲ್ಲಿತ್ತು. ಆಗ ಒಕ್ಕೊರಲಿನ ಅಭಿಪ್ರಾಯದಂತೆ ಕೆಎಲ್ ರಾಹುಲ್ ಇನಿಂಗ್ಸ್‌ ಆರಂಭಿಸಿ ಭರವಸೆ ಮೂಡಿಸಿದರು. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ರಾಹುಲ್‌, ತಮ್ಮಲ್ಲಿರುವ ಬ್ಯಾಟಿಂಗ್ ಕ್ಷಮತೆಯನ್ನು ಹೊರ ಹಾಕಿದರು. ಇದರ ಫಲವಾಗಿ ರೋಹಿತ್ ಶರ್ಮಾ ಕಮ್ ಬ್ಯಾಕ್‌ ಆದ ಮೇಲೂ ಇವರಿಗೆ ಆರಂಭಿಕರಾಗಿ ಆಡುವ ಅವಕಾಶ ನೀಡಲಾಯಿತು. ಇವರು ಈ ಅವಕಾಶದಲ್ಲಿ ಅಬ್ಬರಿಸಿದ್ದಾರೆ.

Story first published: Sunday, December 22, 2024, 7:00 [IST]
Other articles published on Dec 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+