For Quick Alerts
ALLOW NOTIFICATIONS  
For Daily Alerts
 

ಕನ್ನಡಿಗ ಕೆಎಲ್ ರಾಹುಲ್ ಅಪ್‌ಡೇಟ್‌ ವರ್ಷನ್‌ ಬ್ಯಾಟಿಂಗ್: ಟೀಕೆಗಗಳಿಗೆ ಬ್ಯಾಟ್‌ನಿಂದ ಉತ್ತರ

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್‌ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡದ ಪರ ಕಣಕ್ಕಿಳಿದು ಮಿಂಚು ಹರಿಸುತ್ತಿದ್ದಾರೆ. ಇವರ ಬಗ್ಗೆ ಕೆಲವು ವರ್ಷಗಳಿಂದ ಒಂದು ಟೀಕೆ ಕೇಳಿಸುತ್ತಿತ್ತು. ಇವರು ಐಪಿಎಲ್‌ನಲ್ಲಿ 2018 ಹಾಗೂ 2023ರ ಐಪಿಎಲ್‌ ಹೊರತು ಪಡಿಸಿ ಉಳಿದೆಲ್ಲಾ ಆವೃತ್ತಿಗಳಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಆದರೆ ಇವರ ಸ್ಟ್ರೈಕ್ ರೇಟ್‌ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಬಾರಿಯ ಐಪಿಎಲ್‌ನಲ್ಲಿ ಇವರು ತಮ್ಮ ಭರ್ಜರಿ ಸ್ಟ್ರೈಕ್‌ ರೇಟ್‌ ಮೂಲಕ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 433 ರನ್‌ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ. ಇವರು ರಾಜಸ್ಥಾನ್ ರಾಯಲ್ಸ್ ವಿರುದ್ಧ 40 ಎಸೆತಗಳಲ್ಲಿ 75 ರನ್‌ ಬಾರಿಸಿ ಅಬ್ಬರಿಸಿದ್ದಾರೆ. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಕೆಎಲ್ ರಾಹುಲ್ ಈ ಬಾರಿಯ ಐಪಿಎಲ್‌ನಲ್ಲಿ 185.84ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕುತ್ತಿದ್ದಾರೆ.

KL Rahul

ಕೆಎಲ್ ರಾಹುಲ್ ಈ ಸ್ಟ್ರೈಕ್‌ ರೇಟ್‌ ಬಗ್ಗೆ ಮಾತನಾಡಿದ್ದಾರೆ. ಸ್ಟ್ರೈಕ್ ದರದ ಬಗ್ಗೆ ವರ್ಷಗಳಿಂದ ಹೆಚ್ಚು ಮಾತನಾಡಲಾಗುತ್ತಿದೆ. ನಾನು ಇದಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ತಂಡಕ್ಕೆ ಅಗತ್ಯಕ್ಕೆ ತಕ್ಕಂತೆ ನಾನು ಬ್ಯಾಟ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಟಿ20 ಸ್ವರೂಪದಲ್ಲಿ ಹೊಸ ರೀತಿಯಲ್ಲಿ ಬ್ಯಾಟಿಂಗ್ ಮಾಡುವುದನ್ನು ರೂಡಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ರಾಹುಲ್ ಅವರ ಸ್ಟ್ರೈಕ್‌ ರೇಟ್‌

2018, 659 ರನ್‌, 158.41 ಸ್ಟ್ರೈಕ್‌ ರೇಟ್‌
2019, 593 ರನ್‌, 135.38 ಸ್ಟ್ರೈಕ್‌ ರೇಟ್‌
2020, 670 ರನ್‌, 129.34 ಸ್ಟ್ರೈಕ್‌ ರೇಟ್‌
2021, 626 ರನ್‌, 138.80 ಸ್ಟ್ರೈಕ್‌ ರೇಟ್‌
2022, 616 ರನ್‌, 135.38 ಸ್ಟ್ರೈಕ್‌ ರೇಟ್‌
2023, 274 ರನ್‌, 113.22 ಸ್ಟ್ರೈಕ್‌ ರೇಟ್‌
2024, 520 ರನ್‌, 136.13 ಸ್ಟ್ರೈಕ್‌ ರೇಟ್‌
2025, 539 ರನ್‌, 149.72 ಸ್ಟ್ರೈಕ್‌ ರೇಟ್‌
2026*, 433 ರನ್‌, 185.84 ಸ್ಟ್ರೈಕ್‌ ರೇಟ್

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ರಾಹುಲ್‌

19ನೇ ಆವೃತ್ತಿ ಐಪಿಎಲ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇವರು ಸಹ ಈ ಬಾರಿ ಆರೆಂಜ್ ಕ್ಯಾಪ್‌ ರೇಸ್‌ನಲ್ಲಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ ರನ್‌ ಕಲೆ ಹಾಕುತ್ತಿದ್ದಾರೆ. ಇವರ ಭರ್ಜರಿ ಫಾರ್ಮ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಶಸ್ತಿ ಕನಸನ್ನು ಚಿಗುರಿಸಿದೆ.

Story first published: Monday, May 4, 2026, 8:05 [IST]
Other articles published on May 4, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+