ಕೆಎಲ್ ರಾಹುಲ್ ಹೊರಗುಳಿಯುತ್ತಾರಾ? ಒಂದೇ ಮಾತಿನಲ್ಲಿ ಬಾಯ್ಮುಚ್ಚಿಸಿದ ವಿರಾಟ್ ಕೊಹ್ಲಿ!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯ ಸೊಲಿನ ಬಳಿಕ ಪ್ರತಿಕ್ರಿಯಿಸಿದರು. ಸಂದರ್ಭದಲ್ಲಿ ಫಾರ್ಮ್ ಕಳೆದುಕೊಂಡು ಕಳೆದ ಮೂರು ಪಂದ್ಯಗಳಲ್ಇಯು ಕಳಪೆ ಪ್ರದರ್ಶನವನ್ನು ನೀಡಿದ ಕೆಎಲ್ ರಾಹುಲ್ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ ಟೀಮ್ ಇಂಡಿಯಾ ನಾಯಕ ಕೊಹ್ಲಿ.
ಕಳೆದ ಮೂರು ಟಿ20 ಪಂದ್ಯಗಳಲ್ಲಿ ರಾಹುಲ್ ಪ್ರದರ್ಶನ ಅಚ್ಚರಿ ಮೂಡಿಸುವಂತಿದೆ. ಮೂರು ಪಂದ್ಯಗಳಲ್ಲಿ ಎರಡು ಶೂನ್ಯ ಸುತ್ತಿರುವ ಕೆಎಲ್ ರಾಹುಲ್ ಒಂದು ಬಾರಿ ಒಂದು ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ತಂಡದಲ್ಲಿ ಆತನ ಸ್ಥಾನದ ಬಗ್ಗೆ ಅನುಮಾನಗಳು ಏಳುವಂತೆ ಮಾಡಿದ್ದವು. ಮುಂದಿನ ಪಂದ್ಯದಿಂದ ರಾಹುಲ್ ಹೊರಗುಳಿಯುವುದು ಪಕ್ಕಾ ಎಂಬಂತಾಗಿತ್ತು. ಯಾಕೆಂದರೆ ತಂಡದಲ್ಲಿ ಪ್ರತಿಯೊಂದು ಸ್ಥಾನಕ್ಕೂ ಅಷ್ಟು ಪೈಪೋಟಿಯಿದೆ.

ಆತ ಚಾಂಪಿಯನ್ ಆಟಗಾರ
ಆದರೆ ನಾಯಕ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಅವರಂತಾ ಅದ್ಭುತ ಆಟಗಾರನ ಬೆಂಬಲಕ್ಕೆ ನಿಲ್ಲುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕೆಎಲ್ ರಾಹುಲ್ ಓರ್ವ ಚಾಂಪಿಯನ್ ಆಟಗಾರ ಎಂದು ಕರೆದಿರುವ ವಿರಾಟ್ ಕೊಹ್ಲಿ ಆರಂಭಿಕನಾಗಿ ರೋಹಿತ್ ಶರ್ಮಾ ಜೊತೆಗೆ ಆತ ಮುಂದುವರಿಯುತ್ತಾರೆ ಎಂದು ತಿಳಿಸಿದ್ದಾರೆ.

ಅಗ್ರ ಕ್ರಮಾಂಕದಲ್ಲಿ ಮುಂದುವರಿಯುತ್ತಾರೆ
"ಕೆಎಲ್ ರಾಹುಲ್ ಓರ್ವ ಚಾಂಪಿಯನ್ ಆಟಗಾರ. ಆತ ನಮ್ಮ ತಂಡದ ಮುಖ್ಯ ಆಟಗಾರನಾಗಿ ರೋಹಿತ್ ಶರ್ಮಾ ಜೊತೆಗೆ ಅಗ್ರ ಕ್ರಮಾಂಕದಲ್ಲಿ ಮುಂದುವರಿಯುತ್ತಾರೆ" ಎಂದು ವಿರಾಟ್ ಕೊಹ್ಲಿ ಪಂದ್ಯದ ಮುಕ್ತಾಯದ ಬಳಿಕ ಪ್ರಶಸ್ತಿ ವಿತರಣ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕೇವಲ 5-6 ಎಸೆತಗಳ ವಿಚಾರ
"ಈ ಚುಟುಕು ಮಾದರಿಯಲ್ಲಿ ಕೆಎಲ್ ರಾಹುಲ್ ಅವರಂತಾ ಆಟಗಾರ ಫಾರ್ಮ್‌ಗೆ ಮರಳುವುದು ಕೇವಲ 5 ರಿಂದ 6 ಎಸೆತಗಳ ವಿಚಾರವಷ್ಟೆ" ಎಂದು ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಬಗ್ಗೆ ತಮ್ಮ ಭರವಸೆಯನ್ನು ಬಹಿತಂರವಾಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ಪಂದಯದಿಂದ ಕೆಎಲ್ ರಾಹುಲ್ ಹೊರಗುಳಿಯಹುದು ಎಂಬ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಕೊಹ್ಲಿಯೂ ಎಡವಿದ್ದರು
ವಿರಾಟ್ ಕೊಹ್ಲಿ ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಬಳಿಕ ಟಿ20 ಸರಣಿಯ ಮೊದಲ ಪಂದ್ಯದಲ್ಲಿಯೂ ಶೂನ್ಯಕ್ಕೆ ಔಟಾಗಿ ಫೆವಿಲಿಯನ್ ಸೇರಿದ್ದರು. ಆದರೆ ಅದಾದ ಬಳಿಕ ಸತತ ಎರಡು ಪಂದ್ಯಗಳಲ್ಲಿ ನಾಯಕ ಕೊಹ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು ಎರಡು ಪಂದ್ಯಗಳಲ್ಲಿಯೂ 70+ ರನ್‌ಗಳ ಕೊಡುಗೆಯನ್ನು ನೀಡಿದರು. ಆದರೆ ಮೂರನೇ ಪಂದ್ಯವನ್ನು ಭಾರತ ಗೆಲ್ಲುವಲ್ಲಿ ವಿಫಲವಾಗಿದ್ದು ಸರಣಿಯಲ್ಲಿ 1-2 ಅಂತರದಿಂದ ಹಿನ್ನೆಡೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications