For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ನನ್ನ ನೆಚ್ಚಿನ ಬ್ಯಾಟ್ಸ್‌ಮನ್: ಬ್ರಿಯಾನ್ ಲಾರಾ

KL Rahul is my favourite batsman in International cricket currently: Brian Lara

ನವದೆಹಲಿ: ಸದ್ಯದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌, ಕನ್ನಡಿಗ ಕೆಎಲ್ ರಾಹುಲ್ ತನ್ನ ಫೇವರಿಟ್ ಬ್ಯಾಟ್ಸ್‌ಮನ್ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಹೇಳಿದ್ದಾರೆ. ಕೆಎಲ್ ರಾಹುಲ್ ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.

ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ನಡೆಸಿಕೊಡುವ ಚಾಹಲ್ ಟಿವಿ ಜೊತೆ ಮಾತನಾಡಿದ ಬ್ರಿಯಾನ್ ಲಾರ, ಸದ್ಯದ ಅಂತಾರಾಷ್ಟ್ರೀಯ ಕ್ರಿಕೆಟಿಗರಲ್ಲಿ ಕೆಎಲ್ ರಾಹುಲ್ ತನ್ನ ನೆಚ್ಚಿನ ಬ್ಯಾಟ್ಸ್‌ಮನ್ ಎಂದಿದ್ದಾರೆ. ಭಾರತ vs ಆಸ್ಟ್ರೇಲಿಯಾ ಸರಣಿಯಲ್ಲಿ 3 ಇನ್ನಿಂಗ್ಸ್‌ಗಳನ್ನಾಡಿರುವ ರಾಹುಲ್ 93 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಸೋಲು ಕಂಡಿದ್ದರೆ, ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿತ್ತು. ಮಂಗಳವಾರ (ಡಿಸೆಂಬರ್ 8) ನಡೆದ ಮೂರನೇ ಟಿ20ಯಲ್ಲಿ ರಾಹುಲ್ 0 ರನ್‌ಗೆ ವಿಕೆಟ್ ಒಪ್ಪಿಸಿದ್ದರು.

ಕೆಎಲ್ ರಾಹುಲ್ 36 ಟೆಸ್ಟ್ ಪಂದ್ಯಗಳಲ್ಲಿ 2006 ರನ್, 35 ಏಕದಿನ ಪಂದ್ಯಗಳಲ್ಲಿ 1332 ರನ್, 43 ಟಿ20ಐ ಪಂದ್ಯಗಳಲ್ಲಿ 1542 ರನ್ ಮತ್ತು 81 ಟಿ20ಐ ಪಂದ್ಯಗಳಲ್ಲಿ 2647 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 5 ಶತಕ, ಏಕದಿನದಲ್ಲಿ 4, ಟಿ20ಐ ಮತ್ತು ಐಪಿಎಲ್‌ನಲ್ಲಿ ತಲಾ 2 ಶತಕಗಳನ್ನು ಬಾರಿಸಿದ್ದಾರೆ.

Story first published: Tuesday, December 8, 2020, 17:39 [IST]
Other articles published on Dec 8, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+