Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್, ವಿರಾಟ್, ಎಬಿ ಡಿ ಅಲ್ಲ: ಆರ್ಚರ್‌ಗೆ ಕಠಿಣ ಬ್ಯಾಟ್ಸ್‌ಮನ್ ಕನ್ನಡಿಗ

Kl Rahul Is The Toughest Batsman I Have Ever Bowled To, Reveals Jofra Archer

ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರು ಈಗ ಮಿಂಚುತ್ತಿದ್ದಾರೆ. ಅದರಲ್ಲಿ ಇಂಗ್ಲೆಂಡ್‌ನ ಯುವ ವೇಗಿ ಜೋಫ್ರಾ ಆರ್ಚರ್ ಕೂಡ ಒಬ್ಬರು. ಇಂಗ್ಲೆಂಡ್ ಬೌಲಿಂಗ್ ವಿಭಾಗಕ್ಕೆ ಆರ್ಚರ್ ಬಹುದೊಡ್ಡ ಅಸ್ತ್ರವಾಗಿ ಪರಿಣಮಿಸಿದ್ದಾರೆ. ಸಿಕ್ಕ ಅವಕಾಶವನ್ನು ಬಹುಬೇಗನೆ ಆರ್ಚನ್ ತಮ್ಮ ಪರವಾಗಿ ಉಪಯೋಗಿಸಿಕೊಂಡಿದ್ದಾರೆ.

ಸದ್ಯ ಜೋಫ್ರಾ ಆರ್ಚರ್‌ಕೂಡ ಕೊರೊನಾ ವೈರಸ್‌ ಕಾರಣದಿಂದಾಗಿ ತಮ್ಮ ಮನೆಯಲ್ಲೇ ಉಳಿದಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂವಾದದಲ್ಲಿ ಭಾಗಿಯಾಗಿದ್ದಾರೆ. ರಾಜಸ್ತಾನ್ ರಾಯಲ್ಸ್‌ನ ತಮ್ಮ ಸಹ ಆಟಗಾರ ಇಶ್ ಸೋಧಿ ಜೊತೆಗೆ ನಡೆಸಿದ ಸಂವಾದದ ತುಣುಕೊಂದನ್ನು ರಾಜಸ್ತಾನ ರಾಯಲ್ಸ್ ಫ್ರಾಂಚೈಸಿ ಹಂಚಿಕೊಂಡಿದೆ.

ಈ ಸಂವಾದದ ತುಣುಕಿನಲ್ಲಿ ಜೋಫ್ರಾ ಆರ್ಚರ್ ತಮಗೆ ಬೌಲಿಂಗ್ ಮಾಡಲು ಅತ್ಯಂತ ಕಠಿಣ ಬ್ಯಾಟ್ಸ್‌ಮನ್ ಯಾರು ಎಂಬುದನ್ನು ಹೇಳಿದ್ದಾರೆ. ಅಚ್ಚರಿ ಏನೆಂದರೆ ವಿರಾಟ್, ಡಿವಿಲಿಯರ್ಸ್, ರೋಹಿತ್ ತಂತಾ ಆಟಗಾರರನ್ನೂ ಲೀಗ್ ಟೂರ್ನಿಗಳಲ್ಲಿ ಎದುರಿಸಿದ ಆರ್ಚರ್‌ಗೆ ಕಠಿಣ ಎನಿಸಿದ್ದು ಕನ್ನಡದ ಹೆಮ್ಮೆಯ ಕ್ರಿಕೆಟಿಗ.

ಸಾಕಷ್ಟು ಲೀಗ್‌ ಟೂರ್ನಿಗಳಲ್ಲಿ ಆಡಿರುವ ಆರ್ಚರ್

ಸಾಕಷ್ಟು ಲೀಗ್‌ ಟೂರ್ನಿಗಳಲ್ಲಿ ಆಡಿರುವ ಆರ್ಚರ್

ಜೋಫ್ರಾ ಆರ್ಚರ್ ಲೀಗ್ ಕ್ರಿಕೆಟ್ ಮೂಲಕವೇ ತನ್ನ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿದ ಆಟಗಾರ. ಆ ಮೂಲಕವೇ ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಆರ್ಚರ್ ಯಶಸ್ವಿಯಾಗಿದ್ದು. ವಿಶ್ವದ ಹಲವು ಟೂರ್ನಿಯಲ್ಲಿ ಭಾಗಿಯಾಗಿರುವ ಆರ್ಚರ್ ಅನೇಕ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಎದುರಿಸಿದ್ದಾರೆ.

ಕಠಿಣ ಬ್ಯಾಟ್ಸ್‌ಮನ್ ಯಾರು?

ಕಠಿಣ ಬ್ಯಾಟ್ಸ್‌ಮನ್ ಯಾರು?

ರಾಜಸ್ತಾನ್ ರಾಯಲ್ಸ್ ತಂಡ ಹಂಚಿಕೊಂಡಿರುವ ವಿಡಿಯೋ ತುಣುಕಿನಲ್ಲಿ ಆರ್ಚರ್ ಈ ವಿಚಾರವನ್ನು ತಿಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕಠಿಣ ಬ್ಯಾಟ್ಸ್‌ಮನ್ ಯಾರು ಎಂದು ಜೋಫ್ರಾ ಆರ್ಚರ್‌ಗೆ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಆಟಗಾರ ಇಶ್ ಸೋಧಿ ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಆರ್ಚರ್ ಕನ್ನಡಿಗನ ಹೆಸರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಕೆಎಲ್ ರಾಹುಲ್ ಅತ್ಯಂತ ಕಠಿಣ ಬ್ಯಾಟ್ಸ್‌ಮನ್

ಕೆಎಲ್ ರಾಹುಲ್ ಅತ್ಯಂತ ಕಠಿಣ ಬ್ಯಾಟ್ಸ್‌ಮನ್

ಜೋಫ್ರಾ ಆರ್ಚರ್ ಹೆಸರಿಸಿದ ಬ್ಯಾಟ್ಸ್‌ಮನ್ ಬೇರೆ ಯಾರೂ ಅಲ್ಲ. ಅದು ಕನ್ನಡಿಗ ಕೆಎಲ್ ರಾಹುಲ್. ಆತನನ್ನು ಔಟ್ ಮಾಡುವುದು ಅತ್ಯಂತ ಕಠಿಣ ಎಂದು ಜೋಫ್ರಾ ಆರ್ಚರ್ ನೇರವಾಗಿಯೇ ಹೇಳಿದ್ದಾರೆ. ಆತನನ್ನು ಹಲವು ಬಾರಿ ನಾನು ಎದುರಿಸಿದ್ದೇನೆ. ಆದರೆ ಆತನ ಮುಂದೆ ಬೇರೆ ಯಾರೂ ನನಗೆ ಕಠಿಣ ಬ್ಯಾಟ್ಸ್‌ಮನ್ ಅನಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ದಿಗ್ಗಜರನ್ನು ಎದುರಿಸಿದ ಆರ್ಚರ್

ದಿಗ್ಗಜರನ್ನು ಎದುರಿಸಿದ ಆರ್ಚರ್

ಜೋಫ್ರಾ ಆರ್ಚರ್ ನೀಡಿದ ಉತ್ತರ ಸಹಜವಾಗಿಯೇ ಅಚ್ಚರಿಯನ್ನು ಮೂಡಿಸುತ್ತದೆ. ಯಾಕೆಂದರೆ ಆರ್ಷರ್ ದಿಗ್ಗಜ ಆಟಗಾರನ್ನು ಲೀಗ್ ಟೂರ್ನಿಗಳಲ್ಲಿ ಎದುರಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಎಬಿ ಡಿ ವಲಿಯರ್ಸ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್‌ರಂತಾ ಆಟಗಾರರು ಎದುರಾಗಿದ್ದರು. ಆದರೆ ಪ್ರಾಮಾಣಿಕವಾಗಿ ಉತ್ತರಿಸಿದ ಆರ್ಚರ್ ಕೆಎಲ್ ರಾಹುಲ್ ಹೆಸರನ್ನು ಹೇಳಿದ್ದಾರೆ.

ಧ್ವನಿಗೂಡಿಸಿದ ಇಶ್ ಸೋಧಿ

ಧ್ವನಿಗೂಡಿಸಿದ ಇಶ್ ಸೋಧಿ

ಜೋಫ್ರಾ ಆರ್ಚರ್ ಈ ಉತ್ತರವನ್ನು ನೀಡುತ್ತಿದ್ದಂತೆಯೇ ನ್ಯೂಜಿಲೆಂಡ್ ಕ್ರಿಕೆಟಿಗ ಇಶ್ ಸೋಧಿ ಕೂಡ ಇದಕ್ಕೆ ತಲೆಯಾಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದನ್ನು ಅವರು ನೆನಪಿಸಿಕೊಂಡರು. ಇನ್ನು ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಹುಲ್ ಎರಡನೇ ಅತ್ಯಧಿಕ ರನ್ ಪೇರಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. 14 ಪಂದ್ಯಗಳಲ್ಲಿ 593 ರನ್‌ಗಳಿಸಿದ್ದರು ಕೆಎಲ್ ರಾಹುಲ್.

Story first published: Tuesday, May 12, 2020, 13:49 [IST]
Other articles published on May 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+