Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: LSG ಮಾಲೀಕ ವರ್ತನೆ ಬೆನ್ನಲ್ಲೇ ಟ್ರೆಂಡ್ ಆಗ್ತಿದೆ 'ಬಾ ಗುರು RCB'ಗೆ; ಕೆಎಲ್‌ ರಾಹುಲ್‌ ಬರ್ತಾರಾ!

ಮೇ 9 ಗುರುವಾರ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2024ರ ಐಪಿಎಲ್ 57ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಹೀನಾಯವಾಗಿ ಸೋತಿದೆ.

ಈ ಸೋಲಿನ ನಂತರ ಎಲ್‌ಎಸ್‌ಜಿ ಫ್ರಾಂಚೈಸಿ ಮಾಲೀಕ ಭಾರತದ ಬಿಲಿಯನೇರ್‌ ಸಂಜೀವ್ ಗೋಯೆಂಕಾ ಮತ್ತು ನಾಯಕ ಕೆಎಲ್ ರಾಹುಲ್ ನಡುವಿನ ಸಂಭಾಷಣೆಯ ವೀಡಿಯೊ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಸಂಜೀವ್ ತನ್ನ ತಂಡದ ನಾಯಕ ಕೆಎಲ್ ರಾಹುಲ್‌ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಆದರೆ ಕೆಎಲ್‌ ರಾಹುಲ್‌ ತಾಳ್ಮೆ ಕಳೆದುಕೊಳ್ಳದೆ ಸಂಜೀವ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

KL Rahul join Royal Challengers Bengaluru Team in upcoming IPL season

ವಿಡಿಯೋ ಕೇವಲ ಸನ್ನೆಗಳಮ ಮೂಲಕ ಮಾತನಾಡಿರುವುದು ಕಂಡು ಬಂದಿದ್ದು, ಸಂಭಾಷಣೆ ನಡೆಸಿರುವ ವಿಡಿಯೋ ಲಭ್ಯವಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ ವೈರಲ್ ಆಗುತ್ತಿದ್ದಂತೆ‌ ಕೆಲವರು ಸೋಲಿನ ನಂತರ ಗೋಯೆಂಕಾ ಅವರು ಮೈದಾನದಲ್ಲಿ ಈ ರೀತಿ ಮಾತನಾಡಿರುವುದು ತಪ್ಪು ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಮತ್ತೊಂದೆಡೆ ಸಂಜೀವ್ ಗೋಯೆಂಕಾ ಅವರು ಪ್ರತ್ಯೇಕ್ಷವಾಗಿ ಅಸಮಾಧಾನ ಹೊರಹಾಕಿದ ನಂತದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳು ಕೆಎಲ್‌ ರಾಹುಲ್‌ ಪರವಾಗಿ ಎಂದು ನಿಂತಿದ್ದಾರೆ. 'ಬಾ ಗುರು ಆರ್‌ಸಿಬಿ'ಗೆ ರಾಜ ರಾಜನಂಗೆ ನೋಡಿಕೊಳ್ಳುತ್ತೇವೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಶುರು ಮಾಡಿದ್ದಾರೆ.

ಕೆಲ ದಿನಗಳಿಂದೆ ಕೂಡ ಟೀಮ್‌ ಸ್ಟಾರ್‌ ಸ್ಪಿನ್ನರ್‌ ರವಿಚಂದ್ರನ ಆಶ್ವಿನ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಕೆಎಲ್‌ ರಾಹುಲ್‌ ಅವರ ಸಂಧರ್ಶನ ಮಾಡಲಾಗಿತ್ತು. ಅಂದು ಕೂಡ ಕೆಎಲ್‌ ರಾಹುಲ್‌ ನಾನು ಮೊದಲು ಕರ್ನಾಟಕದ ಆಟಗಾರ. ನಮ್ಮೂರು ಬೆಂಗಳೂರು, ನಾನು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿ ಬೆಳೆದಿದ್ದೇನೆ ಎಂದು ಹೇಳಿದ್ದರು. ಈ ವೇಳೆ ತಮ್ಮ ಕನಸಿನ ಆರ್‌ಸಿಬಿ ತಂಡವನ್ನು ಹೇಗೆ ಸೇರಿದೆ ಎಂಬುದರ ಸನ್ನಿವೇಶನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಇದೀಗ ರಾಹುಲ್‌ ವಿರುದ್ಧ ಸಂಜೀವ್ ಗೋಯೆಂಕಾ ವರ್ತನೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆರ್‌ಸಿಬಿ ತಂಡ ಮರಳಿ ಬರುವಂತೆ ರಾಹುಲ್‌ ಅವರಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಮುಂದಿನ ಆವೃತ್ತಿಯಲ್ಲಿ ಆರ್‌ಸಿಬಿ ತಂಡಕ್ಕೆ ಕೆಎಲ್‌ ರಾಹುಲ್‌ ಪುನರಾಗಮನ ಮಾಡಿದರೆ ಅದಕ್ಕಿಂತ ಖುಷಿಯಾದ ವಿಚಾರ ಮತ್ತೊಂದು ಇಲ್ಲ. ಫ್ಯಾನ್ಸ್ ಅಂತೂ ಐಪಿಎಲ್‌ ಕಪ್ ಗೆದ್ದಷ್ಟೇ ಸಂಭ್ರಮಾಚರಣೆ ಮಾಡುತ್ತಾರೆ.

ಆದರೆ ಕೆಎಲ್‌ ರಾಹುಲ್‌ ಮುಂದಿನ ಆವೃತ್ತಿ ಲಕ್ನೋ ತಂಡದ ನಾಯಕನಾಗಿ ಮುಂದುವರೆಯುತ್ತಾರಾ? ಅಥವಾ ಆರ್‌ಸಿಬಿ ತಂಡಕ್ಕೆ ಬರುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕೂ ಮುನ್ನ 2016ರಲ್ಲಿ ಆರ್‌ಸಿಬಿ ಫೈನಲ್‌ ತಲುಪಿದ್ದ ಸಂದರ್ಭದಲ್ಲಿ ಕೆಎಲ್‌ ರಾಹುಲ್‌ ತಂಡದಲ್ಲಿದ್ದರು.

ಎಲ್‌ಎಸ್‌ಜಿ vs ಎಸ್‌ಆರ್‌ಹೆಚ್‌ ಪಂದ್ಯದ ಫಲಿತಾಂಶ

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ಎಸ್‌ಆರ್‌ಎಚ್ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 165 ಗುರಿ ನೀಡಿತ್ತು. ಹೈದರಾಬಾದ್ ತಂಡ ಕೇವಲ 9.4 ಓವರ್‌ಗಳಲ್ಲಿ ಪಂದ್ಯ ಗೆದ್ದು ಬೀಗಿತು. ಎಸ್‌ಆರ್‌ಹೆಚ್‌ ಪರ ಟ್ರಾವಿಸ್‌ ಹೆಡ್‌ ಮತ್ತು ಅಭಿಷೇಕ್‌ ಶರ್ಮಾ ಭರ್ಜರಿ ಬ್ಯಾಟಿಂಗ್‌ ಮಾಡಿದರು.

Story first published: Thursday, May 9, 2024, 15:55 [IST]
Other articles published on May 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+