For Quick Alerts
ALLOW NOTIFICATIONS  
For Daily Alerts
 

ಧೋನಿ ಜೊತೆ ಎಲೈಟ್‌ ಕ್ಲಬ್ ಸೇರಿದ ಕನ್ನಡಿಗ ಕೆಎಲ್ ರಾಹುಲ್

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್‌, ಗುರುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಆದರೆ ಇವರ ಬ್ಯಾಟ್‌ನಿಂದ ದೊಡ್ಡ ಇನಿಂಗ್ಸ್ ಮೂಡಿಬರಲಿಲ್ಲ. ಈ ಚಿಕ್ಕ ಇನ್ನಿಂಗ್ಸ್‌ ಸಹ ರಾಹುಲ್‌ ದಾಖಲೆಯ ಪುಟ ಸೇರಲು ಸಾಧ್ಯವಾಯಿತು.

ಗುರುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ 35 ಎಸೆತಗಳಲ್ಲಿ 21 ರನ್ ಸಿಡಿಸಿದರು. ಇವರ ಈ ಇನ್ನಿಂಗ್ಸ್‌ ಧೋನಿ ಅವರ ಎಲೈಟ್‌ ಕ್ಲಬ್ ಸೇರುವಂತೆ ಮಾಡಿತು. ಟೀಮ್ ಇಂಡಿಯಾ ಪರ ವಿಕೆಟ್‌ ಕೀಪರ್ ಬ್ಯಾಟರ್‌ ಒಬ್ಬ ಏಕದಿನ ಕ್ರಿಕೆಟ್‌ನ ಕ್ಯಾಲಿಂಡರ್‌ ವರ್ಷದಲ್ಲಿ 1000 ರನ್ ಗಡಿ ದಾಟಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾದರು.

KL Rahul Joins Elite Club with Dhoni

ಕೆ.ಎಲ್ ರಾಹುಲ್ ಈ ವರ್ಷ 27 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಆಡಿದ್ದಾರೆ. ಇದರಲ್ಲಿ 66.25ರ ಸರಾಸರಿ ಹಾಗೂ 87.74ರ ಸರಾಸರಿಯಲ್ಲಿ 1060 ರನ್ ಸಿಡಿಸಿದ್ದಾರೆ. ಈ ವರ್ಷ ಇವರು ಎರಡು ಶತಕ ಹಾಗೂ ಐದು ಅರ್ಧಶತಕ ಬಾರಿಸಿದ್ದಾರೆ.

16 ವರ್ಷಗಳ ಹಿಂದೆ ಲೆಜಂಡರಿ ವಿಕೆಟ್ ಕೀಪರ್ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ಇಂತಹದ್ದೇ ಒಂದು ಸಾಧನೆ ಮಾಡಿದ್ದರು. 2007ರಲ್ಲಿ ಧೋನಿ 1103 ರನ್ ಸಿಡಿಸಿದ್ದರು. ಇವರು 37 ಪಂದ್ಯಗಳ 33 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ಧೋನಿ 2008ರಲ್ಲೂ 57.73ರ ಸರಾಸರಿಯಲ್ಲಿ 1097 ರನ್ ಸಿಡಿಸಿದ್ದರು.

2009 ಧೋನಿ ಅವರ ಪಾಲಿಗೆ ವಿಶೇಷ ವರ್ಷ.. ಈ ವರ್ಷದಲ್ಲಿ ಅವರು 1198 ರನ್ ಸಿಡಿಸಿದ್ದರು.

KL Rahul Joins Elite Club with Dhoni

14 ವರ್ಷಗಳ ಬಳಿಕ ಕೆ.ಎಲ್ ರಾಹುಲ್‌ ಈ ಸಾಧನೆ ಮಾಡಿದ ಎರಡನೇ ವಿಕೆಟ್‌ ಕೀಪರ್ ಬ್ಯಾಟರ್‌ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇನ್ನು ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದ ಎರಡನೇ ನಾಯಕ ಎಂಬ ಶ್ರೇಯ ಕೆ.ಎಲ್ ಪಾಲಾಯಿತು.

ಗುರುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಮಹತ್ವದ ಪಂದ್ಯದಲ್ಲಿ ಸ್ಟಾರ್ ಆಟಗಾರರು ಉತ್ತಮ ಆಟವಾಡಿದ್ದ ಪರಿಣಾಮ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 296 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆತಿಥೇಯ ದಕ್ಷಿಣ ಆಫ್ರಿಕಾ 45.5 ಓವರ್‌ಗಳಲ್ಲಿ 218 ರನ್‌ ಗಳಿಗೆ ಆಲೌಟ್ ಆಯಿತು.

Story first published: Friday, December 22, 2023, 9:38 [IST]
Other articles published on Dec 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+