ಐರ್ಲೆಂಡ್ ಸರಣಿಗೆ ಕೆಎಲ್ ರಾಹುಲ್ ಕಮ್‌ಬ್ಯಾಕ್ ಸಾಧ್ಯತೆ: ಎನ್‌ಸಿಎನಿಂದ ವಿರಾಮ ಪಡೆದ ಕ್ರಿಕೆಟಿಗ
ಗಾಯಗೊಂಡು ತಂಡದಿಂದ ಹೊರಗುಳಿದಿರುವ ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಹಂತದಲ್ಲಿದ್ದಾರೆ. ಎನ್‌ಸಿಎನಲ್ಲಿ ರಿಹ್ಯಾಬ್‌ನಲ್ಲಿ ಭಾಗಿಯಾಗಿದ್ದ ಕೆಎಲ್ ರಾಹುಲ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಸದ್ಯ ಎನ್‌ಸಿಎನಿಂದ ವಿರಾಮ ಪಡೆದುಕೊಂಡು ಗೆಳೆಯದ ಜೊತೆಗೆ ಕಾಲಕಳೆದಿದ್ದಾರೆ.
ಕಳೆದ ಐಪಿಎಲ್‌ಮಲ್ಲಿ ಗಾಯಗೊಂಡಿದ್ದ ಕೆಎಲ್ ರಾಹುಲ್ ಮ್ಯಾಚ್ ಫಿಟ್‌ನೆಸ್ ಗಳಿಸಿಕೊಂಡಿದ್ದು ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೂಲಕ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ. ಹೀಗಾಗಿ ಈ ಸರಣಿಗೂ ಮುನ್ನ ರಾಹುಲ್ ತಮ್ಮ ತರಬೇತಿಯಿಂದ ವಿರಾಮ ಪಡೆದುಕೊಂಡಿದ್ದು ತಮ್ಮ ಗೆಳೆಯರ ಜೊತೆಗೆ ಕಯಾಕಿಂಗ್ ಸೇರಿದಂತೆ ಮನರಂಜನಾ ಆಟದಲ್ಲಿ ಭಾಗಿಯಾಗಿದ್ದು ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಐರ್ಲೆಂಡ್ ಸರಣಿಯಲ್ಲಿ ಆಡಲಿದ್ದಾರಾ ರಾಹುಲ್
ಕೆಎಲ್ ರಾಹುಲ್ ಮುಂಬರುವ ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಪರವಾಗಿ ಆಡಲಿದ್ದಾರಾ ಎಂಬುದು ಇನ್ನು ಕೂಡ ಸ್ಪಷ್ಟವಾಗಿಲ್ಲ. ಅಲ್ಲದೆ ಅವರು ಪಂದ್ಯವನ್ನಾಡಲು 100% ಫಿಟ್ ಆಗಿದ್ದಾರ ಎನ್ನುವುದು ಕುಡ ಸ್ಪಷ್ಟವಾಗಿಲ್ಲ. ಈ ಸರಣಿಗೆ ಇನ್ನು ಕೂಡ 18 ದಿನಗಳು ಬಾಕಿಯಿರುವ ಕಾರಣ ಬಿಸಿಸಿಐನ ವೈದ್ಯಕೀಯ ತಂಡ ಹಾಗೂ ಆಯ್ಕೆಗಾರರು ತಂಡಕ್ಕೆ ಮರಳುವ ವಿಚಾರವಾಗಿ ಆಶಾವಾದದಿಂದಿದ್ದಾರೆ.
ಇನ್ನು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡದ ಪ್ರಕಟವನ್ನು ತಡಗೊಳಿಸಲು ಕೂಡ ಇದೇ ಕಾರಣ ಎನ್ನಲಾಗಿದೆ. ಕೆಎಲ್ ರಾಹುಲ್, ಜಸ್ಪ್ರೀತ್ ಬೂಮ್ರಾ ಹಾಗೂ ಶ್ರೇಯಸ್ ಐಯ್ಯರ್ ಅವರ ಚೇತರಿಕೆಗೆ ಸಂಬಂಧಿಸಿದ ವೈದ್ಯಕೀಯ ವರದಿಗಳ ನಿರೀಕ್ಷೆಯನ್ನು ಆಯ್ಕೆಗಾರರು ಮಾಡುತ್ತಿದ್ದು ಅದರ ಆಧಾರದಲ್ಲಿ ಮಂದಿನ ಸರಣಿಗೆ ಇವರ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಮೂವರು ಕೂಡ ಏಷ್ಯಾ ಕಪ್ ಹಾಗೂ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ.
ಜಸ್ಪ್ರೀತ್ ಬೂಮ್ರಾ ಕಳೆದ ವರ್ಷದ ಜುಲೈ ತಿಂಗಳಿನಿಂದ ಬೆನ್ನುನೋವಿನ ಸಮಸ್ಯೆಯ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಬೂಮ್ರಾ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಚೇತರಿಕೆ ಕಂಡಿದ್ದು ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಬೂಮ್ರಾ ಚೇತರಿಕೆ ಬಗ್ಗೆ ಮಾಹಿತಿ ನೀಡಿದ್ದು ಐರ್ಲೆಂಡ್ ಸರಭಿಯಲ್ಲಿ ಆಡುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದರು.
ಇನ್ನು ಕೆಎಲ್ ರಾಹುಲ್ ಕಳೆದ ಐಪಿಎಲ್‌ನಲ್ಲಿ ಫೀಲ್ಡಿಂಗ್ ಸಮಯದಲ್ಲಿ ತೊಡೆನೋವಿಗೆ ಒಳಗಾಗಿದ್ದರು. ಇನ್ನು ಶ್ರೇಯಸ್ ಐಯ್ಯರ್ ಕೂಡ ಬೆನ್ನು ನೋವಿಗೆ ಒಳಗಾಗಿದ್ದ ಕಾರಣ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications