ಲಕ್ನೋ, ಅಹ್ಮದಾಬಾದ್ ತಂಡ ಸೇರಲಿದ್ದಾರೆ ಈ 6 ಆಟಗಾರರು; ಆರ್‌ಸಿಬಿ ಅಭಿಮಾನಿಗಳಿಗಿದು ಬೇಸರದ ಸುದ್ದಿ

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ತಂಡಗಳು ಕೂಡ ಸೇರ್ಪಡೆಯಾಗುತ್ತಿರುವುದರಿಂದ ಟ್ರೋಫಿಗಾಗಿ ಒಟ್ಟು 10 ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಹೌದು, ಈ ಬಾರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 8 ತಂಡಗಳ ನಡುವೆ ನಡೆದ ಸೆಣಸಾಟಕ್ಕೆ ಅಂತಿಮವಾಗಿ ಸಾಕ್ಷಿಯಾದ ಐಪಿಎಲ್ ಟೂರ್ನಿಯಾಗಿದೆ. ಇನ್ನು ಈ ಹಿಂದೆಯೇ 2 ನೂತನ ತಂಡಗಳ ಸೇರ್ಪಡೆಯಾಗಲಿರುವ ವಿಷಯವನ್ನು ಬಹಿರಂಗಪಡಿಸಿದ್ದ ಬಿಸಿಸಿಐ ಯಾವ ನಗರಗಳು ತಂಡಗಳಾಗಿ ಸೇರ್ಪಡೆಗೊಳ್ಳಲಿವೆ ಎಂಬುದನ್ನು ಖಚಿತಪಡಿಸಿರಲಿಲ್ಲ.
ಆದರೆ ನಂತರ ನಡೆದ ಹರಾಜಿನಲ್ಲಿ ಅಂತಿಮವಾಗಿ ಲಕ್ನೋ ಮತ್ತು ಅಹ್ಮದಾಬಾದ್ ನಗರಗಳು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೆಣಸಾಟ ನಡೆಸಲು ನೂತನ ಫ್ರಾಂಚೈಸಿಗಳಾಗಿ ಹರಾಜಾದವು. ಹೀಗೆ ಈ ಎರಡು ಫ್ರಾಂಚೈಸಿಗಳು ಪ್ರಕಟವಾದ ನಂತರ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಕಷ್ಟು ಬದಲಾವಣೆಗಳಿಗೆ ನಾಂದಿ ಹಾಡಿವೆ. ಹೌದು, ನೂತನ ಫ್ರಾಂಚೈಸಿಗಳು ಸೇರ್ಪಡೆಯಾಗಿರುವುದರಿಂದ ಮುಂಬರುವ ಐಪಿಎಲ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಕಡ್ಡಾಯವಾಗಿ ನಡೆಯಲಿದೆ. ಹೀಗಾಗಿ ಅಸ್ತಿತ್ವದಲ್ಲಿರುವ 8 ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಒಟ್ಟು 4 ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ.
ಹೀಗೆ ವಿವಿಧ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದು ಘಟಾನುಘಟಿ ಆಟಗಾರರೇ ರಿಟೈನ್ ಆಗದೇ ರಿಟೆನ್ಷನ್ ಪ್ರಕ್ರಿಯೆಯಿಂದ ಹೊರಬಿದ್ದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಪಂಜಾಬ್ ಕಿಂಗ್ಸ್ ತಂಡದ ಕೆಎಲ್ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶ್ರೇಯಸ್ ಅಯ್ಯರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ರಿಟೈನ್ ಆಗದೇ ಹೊರಬಿದ್ದಿದ್ದು ನೂತನವಾಗಿ ಆಯ್ಕೆಯಾಗಿರುವ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಕಣ್ಣು ಈ ಆಟಗಾರರ ಮೇಲೆ ಬಿದ್ದಿದೆ. ಹೌದು, ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳಿಗೆ ಮೆಗಾ ಹರಾಜು ಬಿಟ್ಟು ಹೊರಗಿನಿಂದಲೂ ಕೂಡ ಮೂವರು ಆಟಗಾರರನ್ನು ಖರೀದಿಸಬಹುದಾದ ಅವಕಾಶವಿದೆ. ಹೀಗಾಗಿ ಓಡುವ ಕುದುರೆಗಳನ್ನು ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಸಂಪರ್ಕಿಸಿ ಮೆಗಾ ಹರಾಜಿಗೂ ಮುನ್ನ ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿವೆ. ಸದ್ಯ ಈ ಕುರಿತಾಗಿ ವರದಿಯೊಂದು ಹೊರಬಿದ್ದಿದ್ದು, ಆ ವರದಿಯ ಪ್ರಕಾರ ಲಕ್ನೋ ಮತ್ತು ಅಹ್ಮದಾಬಾದ್ ತಂಡಗಳು ಖರೀದಿಸಲಿರುವ ಮೂವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

ಲಕ್ನೋ ಫ್ರಾಂಚೈಸಿ ಪಾಲಾಗಲಿರುವ ಮೂವರು ಆಟಗಾರರು
ವರದಿಯ ಪ್ರಕಾರ ಹೊಸದಾಗಿ ಆಯ್ಕೆಯಾಗಿರುವ ಲಕ್ನೋ ಫ್ರಾಂಚೈಸಿ ಕೆಎಲ್ ರಾಹುಲ್, ರಶೀದ್ ಖಾನ್ ಮತ್ತು ಇಶಾನ್ ಕಿಶನ್ ಈ ಮೂವರು ಆಟಗಾರರನ್ನು ಮೆಗಾ ಹರಾಜಿಗೂ ಮುಂಚೆ ಖರೀದಿಸಲಿದೆ ಎನ್ನಲಾಗಿದೆ. ಕೆ ಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಲಕ್ನೋ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಳ್ಳುವುದು ಬಹುತೇಕ ಖಚಿತ.

ಅಹ್ಮದಾಬಾದ್ ಫ್ರಾಂಚೈಸಿ ಪಾಲಾಗಲಿರುವ ಆಟಗಾರರು
ಇನ್ನು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸೇರ್ಪಡೆಯಾಗಲಿರುವ ಮತ್ತೊಂದು ಹೊಸ ಫ್ರಾಂಚೈಸಿಯಾದ ಅಹ್ಮದಾಬಾದ್ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಈ ಇಬ್ಬರು ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದ್ದು ಮೂರನೇ ಆಟಗಾರನನ್ನಾಗಿ ಕ್ವಿಂಟನ್ ಡಿಕಾಕ್ ಅಥವಾ ಡೇವಿಡ್ ವಾರ್ನರ್ ಇಬ್ಬರಲ್ಲಿ ಒಬ್ಬರನ್ನು ಖರೀದಿಸುವ ಸಾಧ್ಯತೆ ಇದೆ. ಅಹಮದಾಬಾದ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಹೆಗಲಿಗೆ ನಾಯಕನ ಜವಾಬ್ದಾರಿಯನ್ನು ಹೊರಿಸುವ ಸಾಧ್ಯತೆಗಳು ಹೆಚ್ಚಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ನಿರಾಸೆಯಾಗಬಹುದು
ಇನ್ನು ಮುಂಬರಲಿರುವ ಮೆಗಾ ಹರಾಜಿನ ಕುರಿತಾಗಿ ರಾಯಲ್ ಚಾಲೆಂಜರ್ಸ್ ಬೆಂಗಳುರು ಅಭಿಮಾನಿಗಳಲ್ಲಿ ಡೇವಿಡ್ ವಾರ್ನರ್ ಬೆಂಗಳೂರು ತಂಡವನ್ನು ಸೇರಲಿದ್ದಾರೆ ಎಂಬ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಹೌದು, ಈ ವಿಷಯದ ಕುರಿತಾಗಿ ಸಾಕಷ್ಟು ಚರ್ಚೆಗಳು ಸಹ ನಡೆದಿದ್ದು ಡೇವಿಡ್ ವಾರ್ನರ್ ಇನ್ಸ್ಟಾಗ್ರಾಂ ಖಾತೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿ ನಾವು ನಿಮಗೆ ಬೆಂಬಲವನ್ನು ಸೂಚಿಸುತ್ತೇವೆ ಎಂದು ಯಥೇತ್ಛವಾಗಿ ಕಮೆಂಟ್ ಮಾಡಿದ್ದರು. ಆದರೆ ಇದೀಗ ಈ ವರದಿಯ ಪ್ರಕಾರ ಡೇವಿಡ್ ವಾರ್ನರ್ ಅಹ್ಮದಾಬಾದ್ ಫ್ರಾಂಚೈಸಿ ಸೇರಲಿದ್ದಾರೆ ಎನ್ನಲಾಗುತ್ತಿದ್ದು ವಾರ್ನರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿಯಲ್ಲಿ ನೋಡಲು ಇಚ್ಛಿಸುತ್ತಿದ್ದವರಲ್ಲಿ ಬೇಸರ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications